ಚಾಮರಾಜನಗರ ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ’ “ಭರಚುಕ್ಕಿ ಜಲಪಾತೋತ್ಸವ” ವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಿವರಾಜ ತಂಗಡಗಿ, ಶಾಸಕರಾದ ಹನೂರು ಮಂಜುನಾಥ್, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಸಂಸದರಾದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಇನ್ನು ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ 2024 ರಲ್ಲಿ ಭಾಗಿಯಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಇಡೀ ದೇಶದ ಚಲನಚಿತ್ರ ಹೆಮ್ಮೆ ಪಡುವಂತ ಡಾ ರಾಜ್ ಕುಮಾರ್ ಹುಟ್ಟಿದ್ದು ಈ ಚಾಮರಾಜನಡರ ಜಿಲ್ಲೆಯಲ್ಲಿ ಎಂದರು. ಇದೇ ವೇಳೆ ಚಾಮರಾಜನಗರ ಎಂದು ಹೇಳಲು ಸಚಿವ ಶಿವರಾಜ್ ತಂಗಡಗಿ ಎರಡು ಬಾರಿ ನಾಲಿಗೆ ತಡವರಿಸಿದ್ದಾರೆ. ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದು ಕೊಳ್ತಾರೆ ಎಂಬ ಅಪಖ್ಯಾತಿಯಿತ್ತು.ಆದ್ರೆ ಆ ಅಪನಂಭಿಕೆ ಮೂಡನಂಭಿಕೆಯನ್ನ ಹೊಗಲಾಡಿಸಿದ್ದು ನಮ್ಮ ಮುಖ್ಯಮಂತ್ಯಿ ಸಿದ್ದರಾಮಯ್ಯನವರು ಎನ್ನುತ್ತಾ ಮಾತಿನುದ್ದಕ್ಕೂ ಸಚಿವ ಶಿವರಾಜ್ ತಂಗಡಗಿ ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದರು. ಕಲೆಗೆ ವಿಶೇಷ ಅವಕಾಶ ಮಾಡಿ ಕೊಡುವ ಜಿಲ್ಲೆ ಚಾಮರಾಜನಗರ ಎಂದರು,
ಇದೇ ವೇಳೆ ಚಾಮರಾಜನಗರ ಜಿಲ್ಲಾ ಪೊಲೀಸರ ಭಾರಿ ವೈಫಲ್ಯ ಕಂಡು ಬಂತು.ಕೊಳ್ಳೇಗಾಲದಲ್ಲಿ ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು.ಕಪ್ಪು ಬಾವುಟ ಪ್ರದರ್ಶನ ಮಾಡ್ತಾಯಿದ್ರು ಪೊಲೀಸ್ ಕಾನ್ಸ್ ಟೇಬಲ್ ಬಾವುಟ ಕಿತ್ತು ಕೊಳ್ಳದೆ ಮೀನಾಮೇಷ ಎಣಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು. ಇದೇ ವೇಳೆ ಎಸ್ಸಿ ಎಸ್ಟಿ ಅನುದಾನ ದುರ್ಬಳಕೆಗೆ ಖಂಡನೆ ವ್ಯಕ್ತಪಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು.ಕಪ್ಪು ಬಾವುಟ ಪ್ರದರ್ಶನ ಮಾಡಿದ ಕಾರ್ಯಕರ್ತ ನನ್ನು ಬಳಿಕ ಪೊಲೀಸರು ವಶಕ್ಕೆ ಪಡೆದರು.ಚಾಮರಾಜನಗರದಿಂದ ಭರಚುಕ್ಕಿಗೆ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತು ಸಂವಿಧಾನ ಸಂರಕ್ಷಣಾ ಸಮಿತಿ ಕಾರ್ಯಕರ್ತ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾನೆ.
ಇನ್ನು ಚೆಲುವ ಚಾಮರಾಜನಗರ ಪ್ರೋಮೋದಲ್ಲಿ ಪುನೀತ್ ರಾಜ್ ಕುಮಾರ್ ಅವರಿದ್ದಾರೆ. ಈ ಹಿಂದೆ ಚಲುವ ಚಾಮರಾಜನಗರ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಪವರ್ ಸ್ಟಾರ್. ಪುನೀತ್ ರಾಜ್ ಕುಮಾರ್ ಅವರನ್ನು ಪ್ರೋಮೋದಲ್ಲಿ ನೋಡಿ ಜನರು ಪುಳಕಿತರಾದರು.










