ಬೆಂಗಳೂರು; ಮೊನ್ನೆಯಷ್ಟೇ ನಿವೇದಿತಾ ಹಾಗೂ ಚಂದನ್ ಶೆಟ್ಟಿ ತಮ್ಮ ವೈವಾಹಿಕ ಬದುಕಿಗೆ ಅಂತ್ಯ ಹಾಡಿದ್ದರು. ಆ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಅವರ ಡಿವೋರ್ಸ್ ಬಳಿಕ ವಿಚ್ಛೇದನದ ಬಗ್ಗೆ ಹಲವು ಗಾಸಿಪ್, ರೂಮರ್ಸ್ ಗಳು, ಟ್ರೋಲ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಇಂದು ಈ ಅಲ್ಲಾ ಊಹಾಪೋಹಗಳಿಗೆ ಚಂದನ್ ಹಾಗೂ ನಿವೇದಿತಾ ಪ್ರೆಸ್ ಮೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
ಮೊದಲಿಗೆ ಮಾತು ಆರಂಭಿಸಿದ ಚಂದನ್ ಶೆಟ್ಟಿ ನಮಗಿಬ್ಬರಿಗೂ ಜೂನ್ 7 ರಂದು ಡಿವೋರ್ಸ್ ಆಗಿದೆ ಇದನ್ನು ಮೊದಲು ನಾನು ಮೊದಲು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ ಎಂದರು. ಬಳಿಕ ಒಂದೊಂದೆ ಗಾಸಿಪ್ ಸುದ್ದಿಗಳನ್ನು ಅವರು ಕ್ಲ್ಯಾರಿಫೈ ಮಾಡುತ್ತಾ ಬಂದರು. ಮೊದಲಿಗೆ ಜೀವನಾಂಶ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು ನಾನು ನಿವೇದಿತಾ ಗೌಡಗೆ ಯಾವುದೇ ರೀತಿಯ ಜೀವನಾಂಶ ಕೊಟ್ಟಿಲ್ಲ. ಅವರು ನನ್ನ ಬಳಿ ಜೀವನಾಂಶ ಕೇಳಿದ್ದಾರೆ ಅನ್ನೋದು ಸುಳ್ಳು ಎಂದರು. ಆ ಮೂಲಕ ಕೋಟ್ಯಂತರ ರೂಪಾಯಿ ಜೀವನಾಂಶ ಕೊಟ್ಟಿದ್ದೇನೆ ಅನ್ನೋ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ರು.
ಬಳಿಕ ಮಾತನಾಡಿದ ಅವರು ಮಗು ವಿಚಾರಕ್ಕೆ ಡಿವೋರ್ಸ್ ಆಗಿದೆ ಅನ್ನೋದು ಕೂಡ ಸುಳ್ಳು ಎಂದರು. ನಾನು ಮಗು ಮಾಡಿಕೊಳ್ಳುವಂತೆ ನಿವೇದಿತಾ ಗೌಡಗೆ ಒತ್ತಾಯ ಮಾಡುತ್ತಿದ್ದೆ. ಇದು ಆಕೆಗೆ ಇಷ್ಟವಿರಲಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತಾಗಿದೆ. ನಾವಿಬ್ಬರು ಆ ಕಾರಣಕ್ಕೆ ದೂರವಾಗಿಲ್ಲ. ನಮ್ಮಿಬ್ಬರ ಜೀವನ ಶೈಲಿ, ನಾವು ಯೋಚಿಸುವ ಆಯಾಮಗಳು ಬೇರೆ ಬೇರೆ ಹೀಗಾಗಿ ಬೇರೆಯಾಗೋ ನಿರ್ಧಾರಕ್ಕೆ ಬಂದೆವು ಎಂದಿದ್ದಾರೆ.
ಇನ್ನು ನಮ್ಮ ಇಬ್ಬರ ಬದುಕಿನಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಿದೆ ಅನ್ನೋದು ಕೂಡ ಸುಳ್ಳು ಎಂದ ಅವರು, ಹೆಸರು ಹೇಳದೆ ಸೃಜನ್ ಲೋಕೇಶ್ ಅವರ ಜೊತೆ ನಿವೇದಿತಾ ಗೌಡ ಹೆಸರು ಥಳುಕು ಹಾಕೋದು ತಪ್ಪು ಎಂದರು. ಇನ್ನು ಬರ್ತಡೇ ವಿಶ್ ಮಾಡಿದ್ದನ್ನು ನೋಡಿ ಏನೆಲ್ಲಾ ಸುದ್ದಿ ಹರಡೋದು ಸರಿಯಲ್ಲ ಎಂದರು,
ನಂತರ ಪ್ರಶಾಂತ್ ಸಂಬರಗಿ ಅವರ ಹೆಸರು ಹೇಳದೇ ಅವರು ಇಬ್ಬರ ಬಗ್ಗೆ ಮಾತನಾಡಿದ ವಿಚಾರವನ್ನು ಪ್ರಸ್ತಾಪಿಸಿದ ಅವರು ನಿವಿಗೆ ಯಾವುದೇ ಹೈದಾರಾಬ್ ವ್ಯಕ್ತಿಯ ಜೊತೆ ಲಿಂಕ್ ಇಲ್ಲ.ಆಕೆ ಯಾರ ಜೊತೆನೂ ಫಾರಿನ್ ಟ್ರಿಪ್ ಹೋಗಿಲ್ಲ. ನನಗೆ ನಿವೇದಿತಾ ಬಗ್ಗೆ ಪ್ರಶಾಂತ್ ಯಾವುದೇ ಎಚ್ಚರಿಕೆ ಕೂಡ ಕೊಟ್ಟಿಲ್ಲ. ನನ್ನ ಬಳಿ ಈ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ನಮ್ಮ ಫ್ಯಾಮಿಲಿ ವಿಚಾರದಲ್ಲಿ ಅವರ್ಯಾಕೆ ಮೂಗು ತೂರಿಸುತ್ತಿದ್ದಾರೆ ಗೊತ್ತಿಲ್ಲ ಎಂದ್ರು.ಅಲ್ಲದೇ ಮತ್ತೆ ಇದೇ ರೀತಿ ಮಾಡಿದ್ರೆ ಅವರು ಕಾನೂನು ಹೋರಾಟ ಮಾಡ್ಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲದಕ್ಕಿಂತ ಮುಖ್ಯವಾಗಿ ಈಗಾಗಲೇ ನಾವು ಹೇಗೆ ಸ್ನೇಹಿತರಾಗಿ ಇದ್ದೆವೋ ಅದೇ ರೀತಿ ಮುಂದೆಯೂ ಸ್ನೇಹಿತರಾಗಿ ಇರುತ್ತೇವೆ. ಒಬ್ಬರಿಗೆ ಒಬ್ಬರು ಬೆಂಬಲ ನೀಡುವಂತೆ ಇಬ್ಬರಿಗೂ ಸಾಕಷ್ಟು ಕನಸುಗಳಿವೆ. ಅದನ್ನು ಈಡೇರಿಸಲು ಜೊತೆಯಾಗಿ ಸಾಗುತ್ತೇವೆ ಎಂದಿದ್ದಾರೆ. ಅಲ್ಲದೇ ನಮ್ಮ ನಡುವೆ ಯಾವುದೇ ದ್ವೇಷ ಇಲ್ಲ. ಪರಸ್ಪರ ಒಪ್ಪಿಗೆಯಿಂದ ಕುಟುಂಬದವರೊಂದಿಗೆ ಚರ್ಚಿಸಿ ಜೊತೆಯಾಗಿ ಇರೋದಕ್ಕೆ ಸಾಧ್ಯಾನೇ ಇಲ್ಲ ಅನ್ನೋದು ಗೊತ್ತಾದ ಬಳಿಕ ಈ ರೀತಿ ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ.
ಒಟ್ಟಿನಲ್ಲಿ ಇಂದು ಚಂದನ್ ಗೌಡ ಹಾಗೂ ನಿವೇದಿತಾ ಸುದ್ದಿಗೋಷ್ಟಿ ಮಾಡುವ ಮೂಲಕ ಹರಿದಾಡುತ್ತಿದ್ದ ಹಲವು ಗೊಂದಲಗಳಿಗೆ, ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ. ಅಲ್ಲದೇ ಸೆಲೆಬ್ರೆಟಿಗಳಾಗಿ ತಮ್ಮ ಸಾಮಾಜಿಕ ಜವಬ್ದಾರಿಯನ್ನು ಮರಿಬಾರ್ದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.