ಬೆಂಗಳೂರು; ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಡ ಸೈಟ್ ವಿಚಾರ ಪ್ರಸ್ತಾಪ ಮಾಡಿದಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ ತಾವು ಮಾಡಿದ ತಪ್ಪನ್ನು ಇಲ್ಲ ಅಂತ ಜೊತೆಯಲ್ಲಿದ್ದವರನ್ನು ಪ್ರೇರೇಪಿಸಿ ಸರ್ಟಿಫಿಕೇಟ್ ಪಡೆಯುವ ಕೆಲಸ ಮಾಡಿದ್ದಾರೆ.ದಸರಾ ಕಾರ್ಯಕ್ರಮದಲ್ಲಿ ಇಂತಹ ಕೆಲಸ ಮಾಡಬಾರದಿತ್ತು.ನಾಲ್ಕು ಜನ ದಿಗ್ಗಜರು ಪರಮೇಶ್ವರ್, ಹೆಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಸುದ್ದಿ ಗೋಷ್ಠಿ ಮಾಡಿದ್ದಾರೆ.ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ.ಅಶೋಕ್ ರಾಜೀನಾಮೆ ಕೊಡಲಿ ಅಂತ ಕೇಳಿದ್ದಾರೆ.ಹಿಂದೆ ನಡೆದ ಘಟನೆಗೆ ಅಂದು ಕೋರ್ಟ್ ಆದೇಶ ಮಾಡಿದ್ದರೆ ಕೇಳುವುದರಲ್ಲಿ ತಪ್ಪಿಲ್ಲ.ಈಗ ಅದನ್ನು ಹಿಡಿದುಕೊಂಡು ಮುಡಾ ಕೇಸ್‌ಗೆ ಹೋಲಿಕೆ ಮಾಡುತ್ತಿದ್ದಾರೆ.ಒಂದು ವೇಳೆ ನಿಜ ಆಗಿದ್ದರೆ ಕೇಸ್ ತನಿಖೆಗೆ ಕೊಟ್ಟು ಕೋರ್ಟ್ ನಲ್ಲಿ ವಾದ ಮಾಡಿ ಎಂದಿದ್ದಾರೆ.
ಇದನ್ನು ಸಾರ್ವಜನಿಕವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಮುಡಾ ಪ್ರಕರಣದಲ್ಲಿ ಎರಡು ಕೋರ್ಟ್ ನಲ್ಲಿ ತನಿಖೆಗೆ ಸೂಚಿಸಿದೆ.ನೀವು ಸೈಟ್ ವಾಪಸ್ ಕೊಟ್ಟರೂ ಅಷ್ಟೇ, ಕೊಡದಿದ್ದರೂ ಅಷ್ಟೇ.ಮುಡಾದವರು ಸೈಟ್ ವಾಪಸ್ ಪಡೆಯಬಾರದಿತ್ತು. ಅಶೋಕ್ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ.ಆದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗಲಿದೆ ಎಂದಿದ್ದಾರೆ.
ತಾಕತ್ತಿದ್ದರೆ ಎಲ್ಲ ಬನ್ನಿ, ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಎಲ್ಲರು ರಾಜೀನಾಮೆ ಕೊಡಿ: ದಸರಾ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಾಸಕ ಜಿ ಟಿ ದೇವೇಗೌಡ
ಮೈಸೂರು; ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಶಾಸಕ ಜಿ ಟಿ ದೇವೇಗೌಡ ಬ್ಯಾಟ್ ಬೀಸಿದ್ದಾರೆ. ತಾಕತ್ತಿದ್ದರೆ ಎಲ್ಲ ಬನ್ನಿ.ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಎಲ್ಲರು ರಾಜೀನಾಮೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಮುಂದೆ ಸಾಲಾಗಿ ಬಂದು ರಾಜೀನಾಮೆ ಕೊಡಿ, ಕೊಡ್ತೀರಾ ? ರಾಜೀನಾಮೆ ಕೊಡಬೇಕಂತೆ ರಾಜೀನಾಮೆ. ಮಾಡೋಕೆ ಬೇರೆ ಕೆಲಸ ಇಲ್ವಾ ಎಂದು ಜಿ ಟಿ ದೇವೇಗೌಡ ಪ್ರಶ್ನೆ ಮಾಡಿದ್ದಾರೆ.ಏನು ಅಭಿವೃದ್ಧಿ ಕಾರ್ಯ ಆಗಬೇಕು ನೋಡಿ. ಕೇಂದ್ರದಿಂದ ಏನು ತರಬೇಕು, ರಾಜ್ಯದಿಂದ ಏನು ಹೋಗಬೇಕು ಅನ್ನೋದು ನೋಡಿ. ಅದು ಬಿಟ್ಟು ರಾಜೀನಾಮೆ ಕೇಳೋದಲ್ಲ ಎಂದು ಜಿ ಟಿ ಡಿ ಹೇಳಿದ್ದಾರೆ.
ಇನ್ನು ಜಿ ಟಿ ದೇವೇಗೌಡ ಮಾತಿಗೆ ಸಿಎಂ ಸಿದ್ದರಾಮಯ್ಯ ಖುಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ ಟಿ ಡಿ ಬೇರೆ ಪಕ್ಷದಲ್ಲಿ ಇದ್ದರು ಸತ್ಯದ ಮಾತು ಹೇಳಿದ್ದಾರೆ.ಸತ್ಯ ಮೇವಾ ಜಯತೇ. ಸತ್ಯಕ್ಕೆ ಯಾವಾಗಲೂ ಜಯ ಅಂತಾ. ಜನರ ಆಶೀರ್ವಾದ ಸರಕಾರದ ಮೇಲೆ ನನ್ನ ಮೇಲೆ ಇರುವವರೆಗೂ ನನ್ನ ಯಾರು ಏನೂ ಮಾಡಲು ಆಗಲ್ಲ. ಜಿಟಿಡಿಯೇ ನನ್ನ ಈ ಕ್ಷೇತ್ರದಲ್ಲಿ ಸೋಲಿಸಿದ್ದು. ಅದು ನನ್ನ ಕೈಯಾರೆ ಮಾಡಿಕೊಂಡ ಸೋಲು. ನಾನು ಒಂಭತ್ತು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ.- ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿವರೆಗೆ ಇದ್ದೇನೆ. ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ಸುಧೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ಜಿಟಿಡಿ ಮಾತಿನಿಂದ ನನಗೆ ಹೆಚ್ಚು ಬಲ ಬಂದಿದೆ. ಜಿಟಿಡಿ ಗೆ ನನ್ನ ಧನ್ಯವಾದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತ ಸಿಎಂ ಪರವಾಗಿ ಜಿ ಟಿ ದೇವೇಗೌಡ ಮಾತನಾಡಿದ ಬಗ್ಗೆ ಒಂದಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಜಿ ಟಿ ದೇವೇಗೌಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಹಾಗೂ ಕುಮಾರಸ್ವಾಮಿ ನನ್ನ ನಡುವೆ ಯಾವುದೇ ಬಿನ್ನಾಭಿಪ್ರಾಯ ಇಲ್ಲ.ನಾನು ಕೂಡ ಅಂತರ ಕಾಯ್ದುಕೊಂಡಿಲ್ಲ.ಜಿ ಟಿ ದೇವೇಗೌಡ ಪಕ್ಷ ಬಿಡುವ ವಿಚಾರದ ಬಗ್ಗೆ ರಿಯ್ಯಾಕ್ಟ್ ಮಾಡಿದ ಅವರು ಈಗ ಪಕ್ಷ ಬಿಟ್ಟು ಹೋದರೆ ಯಾರು ತಾನೇ ಸೇರಿಸಿಕೊಳ್ಳುತ್ತಾರೆ.ಈಗ ಅದಕ್ಕೆ ಸೂಕ್ತ ವಾದ ಸಮಯ ಅಲ್ಲ.ಚುನಾವಣೆ ಬಂದಾಗ ನೋಡಿಕೊಳ್ಳೋಣ ಎನ್ನುವ ಮೂಲಕ ಒಂದಲ್ಲ ಒಂದು ದಿನ ಪಕ್ಷ ಬಿಡ್ತೀನಿ ಅನ್ನೋ ಸೂಚನೆ ಕೊಟ್ಟಿದ್ದಾರೆ.
ನಾನು ಕುಮಾರಸ್ವಾಮಿ ರಾಜೀನಾಮೆ ವಿಚಾರ ಮಾತ್ರ ಮಾತನಾಡಿಲ್ಲ. ಎಫ್ಐಆರ್ ಆಗಿರುವ ಎಲ್ಲರು ರಾಜೀನಾಮೆ ಕೊಡ್ತೀರಾ ಎಂದು ಮಾತಾಡಿರೋದು.ಪಕ್ಷದಲ್ಲಿ ನನ್ನನ್ನ ಕೋರ್ ಕಮಿಟಿ ಅಧ್ಯಕ್ಷನಾಗಿ ಮಾಡಿದ್ದಾರೆ..ಇದಕ್ಕಿಂತ ಬೇರೆ ಇನ್ನೇನು ಬೇಕು. ಹಿಂದೆಯೂ ಕಾಂಗ್ರೆಸ್ ನವರು ಬಂದು ಪಕ್ಷಕ್ಕೆ ಕರೆದಿದ್ರು.ಆಗ ದೇವೇಗೌಡರು ಮನೆಗೆ ಬಂದು ಸಮಾಧಾನ ಮಾಡಿದ್ರು.ಹಿರಿಯರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲೇ ಉಳಿದುಕೊಂಡಿದ್ದೇನೆ. ಪಕ್ಷ ಅಧಿಕಾರದಲ್ಲಿ ಇದ್ದಾಗ ನನಗೇನ್ ಕೊಟ್ಟಿದ್ರು.ಆಗಲೇ ನಾನು ಪಕ್ಷ ಬಿಟ್ಟು ಹೋಗಲಿಲ್ಲ.ಇವಾಗ ಏನಾದ್ರು ಕೊಡಲಿಕ್ಕೆ ಅವರ ಬಳಿ ಏನ್ ಅಧಿಕಾರ ಇದೆ ಎಂದು ಮೈಸೂರಿನಲ್ಲಿ ಪರೋಕ್ಷವಾಗಿ ಶಾಸಕ ಜಿಟಿ ದೇವೇಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಜೆಡಿಎಸ್ ಹಾಗೂ ತನ್ನ ಸಂಬಂಧ ಅಷ್ಟಕಷ್ಟೇ ಅನ್ನೋದನ್ನು ಅವರು ಕ್ಲಿಯರ್ ಮಾಡಿದ್ದಾರೆ.