ಬೆಂಗಳೂರು; ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಪುತ್ರನ ಪ್ರಕರಣದ ಬಗ್ಗೆ ಮಾತನಾಡಿದ ಅವರು ಸರ್ಕಾರ ಏನು ಮಾಡುತ್ತಿದೆ?.ಇಷ್ಟೊತ್ತಿಗೆ ಸಂಗಮೇಶ್ ಮಗನ ಬಂಧನ ಆಗಬೇಕಿತ್ತು, ಇನ್ನೂ ಆಗಿಲ್ಲ.ಹೆಣ್ಣು ಮಕ್ಕಳಿಗೆ ಸರ್ಕಾರ ನಡೆಸುವವರು ಗೌರವ ಕೊಡುವುದು ಇದೇನಾ?.ಯಾಕೆ ಇನ್ನೂ ಕ್ರಮ ಜರುಗಿಸಿಲ್ಲ?.ಶಾಸಕನ ಮಗ ಆದರೆ ಏನು ಬೇಕಾದರೂ ಮಾತಾಡಬಹುದಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಂದರೆ ಕುಟುಂಬ ರಾಜಕಾರಣ.ಕುಟುಂಬದಲ್ಲಿ ಎಲ್ಲರೂ ಅಧಿಕಾರ, ದರ್ಪ ಮಾಡುವವರೇ.ಕಾಂಗ್ರೆಸ್ ರಾಜಕಾರಣ ಈ ಮಟ್ಟಕ್ಕೆ ಬಂದು ನಿಂತಿದೆ.ಅವಾಚ್ಯ ಶಬ್ಧಗಳಿಂದ ಒಬ್ಬ ಮಹಿಳೆಗೆ ನಿಂದಿಸಿದ್ದು ಯಾರೂ ಒಪ್ಪಲ್ಲ.ಅದೇ ಬೇರೆಯವರು ಈ ಕೆಲಸ ಮಾಡಿದ್ದಿದ್ದರೆ ಏನೆಲ್ಲಾ ಆಗಿ ಹೋಗುತ್ತಿತ್ತು? ಏನೆಲ್ಲಾ ಮಾಡುತ್ತಿದ್ದರು?.ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಇಲ್ಲ, ರಕ್ಷಣೆ ಇಲ್ಲ. ರಾಜ್ಯದಲ್ಲಿ ಒಂದು ಕಾಸಿನ ಅಭಿವೃದ್ಧಿ ಆಗಿಲ್ಲ, ಅಭಿವೃದ್ಧಿಗೆ ಹಣವೂ ಇಲ್ಲ.ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡಿದರೂ ಸರ್ಕಾರದ ದರಿದ್ರತನ ಹೋಗಿಲ್ಲ.ಜನ ಇವರ ಸರ್ಕಾರಕ್ಕೆ ದರಿದ್ರ ಸರ್ಕಾರ ಅಂತ ಕರೆಯುವುದು ಇದಕ್ಕೇ.ಇವರ ಗುಂಪುಗಾರಿಕೆ, ಅಧಿಕಾರ ದಾಹ, ಒಳಜಗಳ ಮರೆ ಮಾಚಲು ಚರಿತ್ರೆ ತಿದ್ದುವ ಕೆಲಸ ಮಾಡುತ್ತಿದ್ದಾರೆ.ರಾಮ, ವಾಲ್ಮೀಕಿ, ಕುಂಭ ಮೇಳ ಬಗ್ಗೆ ಮಾತಾಡಿ ವಿಷಯಾಂತರದ ಕೆಲಸ ಮಾಡುತ್ತಿದ್ದಾರೆ.ಮಹಾದೇವಪ್ಪ ಹೆಸರಿಗೆ ಡಾಕ್ಟರ್, ಒಬ್ಬರಿಗೆ ಇಂಜಕ್ಷನ್ ಕೊಟ್ಟಿದ್ದು ಗೊತ್ತಿಲ್ಲ.ಪ್ರಿಯಾಂಕ್ ಖರ್ಗೆ ಡಾಕ್ಟರ್, ಯಾವ ಡಾಕ್ಟರ್, ಪಿಹೆಚ್ಡಿ ಡಾಕ್ಟರ್ ಎಂದು ಲೇವಡಿ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಶಿಕ್ಷಣದ ಬಗ್ಗೆ ಎಲ್ಲರಿಗೂ ಗೊತ್ತಿದೆ.ಹಿಂದುತ್ವದ ಮೇಲೆ ನಂಬಿಕೆ ಇಲ್ಲದವರಿಗೆ ರಾಮಾಯಣ, ಮಹಾಭಾರತ ಏಕೆ ?.ಗಂಗೆಯಲ್ಲಿ ಮುಳುಗಿದೃ ಪಾಪ ಹೋಗುತ್ತಾ ಎಂದು ಕೇಳುತ್ತಾರೆ.ರಾಮಾಯಣ, ಮಹಾಭಾರತದ ಬಗ್ಗೆ ಯಾಕೆ ಇವರು ಮಾತಾಡೋದು?.ಕುಂಭ ಮೇಳದಲ್ಲಿ ಮುಳುಗಿ ಬಂದವರು ದೆಹಲಿ ಗೆದ್ದಿದಾರೆ.ಕುಂಭಮೇಳದಲ್ಲಿ ಯಾರು ಮುಳುಗಿಲ್ಲವೋ ಅವರನ್ನು ದೆಹಲಿಯಲ್ಲಿ ಮುಳುಗಿಸಿದ್ದಾರೆ.ಇಡಿ ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ.ಸಚಿವ ಸಂತೋಷ್ ಲಾಡ್ ಅಂಬೇಡ್ಕರ್ ಬಗ್ಗೆ ಮಾತಾಡಿದರು.ಈಗ ದೇಶ ಬದಲಾಗಿದೆ, ಸಂವಿಧಾನ ಇದೆ, ಮೋದಿ ಸಂವಿಧಾನದ ಅಡಿ ಕೆಲಸ ಮಾಡುತ್ತಿದ್ದಾರೆ.ಅನಿಲ್ ಲಾಡ್ ಸಂವಿಧಾನ ಮಾಡಿದ್ದು ಇಂದಿರಾಗಾಂಧಿ, ರಾಹುಲ್ ಗಾಂಧಿ ರಾಜೀವ್ ಗಾಂಧಿ ಎಂದು ಹೇಳುತ್ತಾರೆ.ಇದು ಅವಿವೇಕತನದ ಮಾತು. ಸಂತೋಷ್ ಲಾಡ್ ಏನು ಹೇಳುತ್ತಾರೆ ಇದಕ್ಕೆ?.ಇದಕ್ಕೆ ನಾಚಿಕೆ ಆಗಲ್ವಾ, ಉತ್ತರ ಕೊಡಿ ಇದಕ್ಕೆ .ಬಯ್ಯಾಪುರ ಕೂಡ ಸಂವಿಧಾನ ಬದಲಾಗಬೇಕು ಎಂದಿದಾರೆ.ಇದಕ್ಕೆಲ್ಲಾ ಕಾಂಗ್ರೆಸ್ ಮಾತಾಡಲ್ಲ ಎಂದಿದ್ದಾರೆ.
ಮೈಸೂರು ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು ಅರೇಬಿಕ್ ಭಾಷೆಯಲ್ಲಿ ಕೆಲವು ಪದಗಳನ್ನು ದೇಹದ ಮೇಲೆ ಬರೆದಿದ್ದಾರೆ.ಕೇಜ್ರಿವಾಲ್, ಅಖಿಲೇಶ್ ಯಾದವ್, ರಾಹುಲ್ ಗಾಂಧಿ ಭಾವಚಿತ್ರದ ಮೇಲೆ ಬರೆದಿದ್ದಾರೆ.ಗಾಡ್ ಬ್ಲೆಸ್ ಯೂ ಎಂದು ಬರೆದಿದ್ದಾರೆ.ಬೆತ್ತಲೆ ಫೋಟೋ ಮೇಲೆ ಬರೆದಿದ್ದಾರೆ, ಇದು ನಮಗೂ ಇಷ್ಟ ಇಲ್ಲ.ಕೇಜ್ರಿವಾಲ್ ಫೋಟೋ ಮೇಲೆ ಮೈ ಗ್ರಾಡ್ ಗ್ರೇಸ್
ಅಖಿಲೇಶ್ ಯಾದವ್ ಫೋಟೋ ಮೇಲೆ ಗಾಡ್ ಎಂದು ಬರೆದಿದ್ದಾರೆ. ಇದರಲ್ಲಿ ತಪ್ಪೇನಿದೆ ?.ಬೆತ್ತಲು ಮಾಡಿ ದೇಹದ ಮೇಲೆ ಬರೆದಿದ್ದು ತಪ್ಪು .ಉರ್ದು, ಅರೇಬಿಕ್ ನಲ್ಲಿ ಬರೆದಿದ್ದು ಹಿಂದೂಗಳಾ ?ಮದರಸಾದಲ್ಲಿ ಓದಿದವರು ಮಾಡಿದ್ದು ಇದು.ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದನ್ನು ಸುರೇಶ್ ಫಾರ್ವರ್ಡ್ ಮಾಡಿದ್ದಾರೆ.ಕಾಂಗ್ರೆಸ್ ನವರು ಆರ್ ಎಸ್ ಎಸ್ ಮೇಲೆ ಆರೋಪ ಮಾಡಿದ್ದಾರೆ.ಅವರಿಗೆ ಹಗಲು ರಾತ್ರಿ ಆರ್ ಎಸ್ ಎಸ್ ನದ್ದೇ ಜಪ.ಈ ವಿಚಾರಕ್ಕೆ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಪೊಲಿಸ್ ವಾಹನ ಜಖಂ ಮಾಡಿದ್ದಾರೆ.ಸುರೇಶ್ ನನ್ನು ನಮ್ಮ ವಶಕ್ಕೆ ಕೊಡಿ ಎನ್ನಲು ಇವರು ಯಾರು?.ಹಿಂದೆ ಇಂತಹ ಘಟನೆ ನಡೆದಾಗ, ಅವರ ಮೇಲಿನ ಕೇಸ್ ವಾಪಸ್ ಪಡೆದರು.ಈ ಓಲೈಕೆ ಕಾರಣದಿಂದ ರಾಜ್ಯಕ್ಕೆ ಬೆಂಕಿ ಬೀಳುತ್ತಿದೆ.ಇದಕ್ಕೆ ಕಾರಣ ಕಾಂಗ್ರೆಸ್ ಹಾಗೂ ಸಿಎಂ .ಓಲೈಕೆ ಕಾರಣಕ್ಕೆ ರಾಜ್ಯದ ಜನ ಬೆಲೆ ತೆರಬೇಕಾ ? .ಮೈಸೂರಲ್ಲಿ ಈಗ ರಂಪ ಆಗಿದೆ.100% ಮುಸ್ಲಿಮರೇ ಇರುವ ಜಾಗ, ಹಾಗಾಗಿ ಈ ಘಟನೆ ನಡೆದಿದೆ ಎಂದು ಕೆಲವು ಸಚಿವರು ಹೇಳಿದ್ದಾರೆ.100% ಮುಸ್ಲಿಂಮರು ಇರುವ ಜಾಗವನ್ನು ಮಿನಿ ಪಾಕಿಸ್ತಾನ ಮಾಡುತ್ತೀರಾ ?.ಕಾಂಗ್ರೆಸ್ ನಿಂದ ರಾಜ್ಯ ನಿರ್ನಾಮ ಆಗುತ್ತಿದೆ.ಬೆಂಕಿಗೆ ತುಪ್ಪ ಹಾಕಬೇಡಿ, ನೀರು ಹಾಕುವ ಕೆಲಸ ಮಾಡಿ.ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಶಾಸಕ ಸಂಗಮೇಶ್ ಪುತ್ರನ ವಿಚಾರದ ಬಗ್ಗೆ ಮಾತನಾಡಿದ ಅವರು ಅಧಿಕಾರಿ ಲಂಚ ಕೇಳಿದರೆ ಅಷ್ಟು ದಿಟ್ಟತನದಲ್ಲಿ ಮಾತಾಡಲು ಸಾಧ್ಯವಿಲ್ಲ.ಈಗ ಶಾಸಕರ ಪುತ್ರ ತನ್ನ ರಕ್ಷಣೆಗಾಗಿ ಲಂಚದ ಪದ ಬಳಕೆ ಮಾಡುತ್ತಿದ್ದಾರೆ.ದರ್ಪ ಮೆರೆದಿದ್ದಾರೆ, ರಕ್ಷಣೆಗಾಗಿ ಈ ರೀತಿ ಹೇಳುತ್ತಿದ್ದಾರೆ.ಸರ್ಕಾರ ತಕ್ಷಣ ಸಂಗಮೇಶ್ ಅವರ ಪುತ್ರನ ಬಂಧಿಸಬೇಕು ಎಂದರು.
ಶಾಸಕ ಯತ್ನಾಳ್‌ಗೆ ನೋಟೀಸ್ ಕೊಟ್ಟಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ನೋಟೀಸ್ ಕೊಟ್ಟಿದೆ ಅಂತ ಮಾಧ್ಯಮಗಳ ಮೂಲಕ ತಿಳಿದುಕೊಂಡೆ.ಹೈಕಮಾಂಡ್ ವಿಚಾರಕ್ಕೆ ಯಾರೂ ಕೈ ಹಾಕಲ್ಲ.ಯಾಕೆ ಕೊಟ್ಟಿದ್ದಾರೆ, ಎಂಬುದು ನಾವು ಕೇಳುವುದಿಲ್ಲ.ಅವರು ನಿರ್ಧಾರ ಮಾಡಿದ ಮೇಲೆ ನಮಗೆ ಗೊತ್ತಾಗುವುದು.ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ.ಹೈಕಮಾಂಡ್ ವಿಚಾರದಲ್ಲಿ ನಾನು ತಲೆ ಹಾಕಲ್ಲ.ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧರಾಗಿರುತ್ತೇವೆ ಎಂದಿದ್ದಾರೆ.











