ಮನೆ Latest News ಸಚಿವ ಮಹಾದೇವಪ್ಪ, ಸಮುದಾಯಕ್ಕೆ ದ್ರೋಹಬಗೆದು ಬ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ; ಛಲವಾದಿ ನಾರಾಯಣಸ್ವಾಮಿ ಆರೋಪ

ಸಚಿವ ಮಹಾದೇವಪ್ಪ, ಸಮುದಾಯಕ್ಕೆ ದ್ರೋಹಬಗೆದು ಬ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ; ಛಲವಾದಿ ನಾರಾಯಣಸ್ವಾಮಿ ಆರೋಪ

0

ಬೆಳಗಾವಿ; ಸಚಿವ ಮಹಾದೇವಪ್ಪ, ಸಮುದಾಯಕ್ಕೆ ದ್ರೋಹಬಗೆದು ಬ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ Scsp – tsp ಹಣ ಅನ್ಯಕಾರ್ಯಕ್ಕೆ ಬಳಸಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಸಚಿವ ಮಹಾದೇವಪ್ಪ, ಸಮುದಾಯಕ್ಕೆ ದ್ರೋಹಬಗೆದು ಬ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. Scptsp ಯ 39 ಸಾವಿರ ಕೋಟಿ ಹಣ ಗ್ಯಾರಂಟಿ ಗೆ ಬಳಸಿದ್ದಾರೆ .ಸಮುದಾಯದ ಅಭಿವೃದ್ದಿಗೆ ಬಳಸಬೇಕಿದ್ದ ಹಣ ಇದು..ಗ್ಯಾರಂಟಿಗೆ ಖಜಾನೆ ಹಣ ಬಳಸಿದ್ರು.ದಲಿತರಿಗೆ ಮಾತ್ರ scp tsp ಹಣದಲ್ಲೇ ಗ್ಯಾರಂಟಿ. ದಲಿತರಿಗೆ ಮಾಡಿದ ವಂಚನೆ ಇದು ಎಂದಿದ್ದಾರೆ.

ಅನ್ನ ಭಾಗ್ಯದ ಅಕ್ಕಿ ಕಳ್ಳಸಂತೆಯಲ್ಲಿ ಮಾರಾಟ ಆಗ್ತಿದೆ. ಗೃಹ ಜ್ಯೋತಿ ಕುಟಿರ ಜ್ಯೋತಿ ಭಾಗ್ಯ ಜ್ಯೋತಿ ಬಿಜೆಪಿ ಕಾಲದಲ್ಲಿಯೇ ನಾವು ಉಚಿತವಾಗಿ ಕೊಟ್ಟಿದ್ವಿ. ಕಾಂಗ್ರೆಸ್ ಗ್ಯಾರಂಟಿ ಗಳು ಸಂಪೂರ್ಣ ಫೇಲ್ ಆಗಿದೆ. ಮತ್ತೆ ಗ್ಯಾರಂಟಿ ಅನುಷ್ಟಾನ ಸಮಿತಿಗಳು ಯಾಕೆ ಬೇಕು ಡಿಸಾಲ್ವ್ ಮಾಡಿ. ಅನುಷ್ಟಾನ ಸಮಿತಿ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೋಜು ಮಸ್ತಿ ಮಾಡ್ತಿದ್ದಾರೆ. ಗ್ಯಾರಂಟಿ ಅನುಷ್ಟಾನ ಸಮಿತಿ ಉಪಾಧ್ಯಕ್ಷರು ಇಲ್ಲಿಗೆ ಬಂದು ಏನು ಮಾಡ್ತಿದ್ದಾರೆ?.ಪ್ರೊಟೊಕಾಲ್ ಪ್ರಕಾರ ವಿಪಕ್ಷ ನಾಯಕರಿಗೆ ಸೂಟ್ ರೂಂ ಕೊಡಬೇಕು. ಆದರೆ ಸಿಂಗಲ್ ರೂಂ ಕೊಟ್ಟಿದ್ದಾರೆ.ಅನುಷ್ಟಾನ ಸಮಿತಿಯ ಉಪಾಧ್ಯಕ್ಷರಿಗೆ ಸೂಟ್ ರೂಂ ಕೊಡ್ತಾರೆ ನಮಗಿಲ್ಲ. ನಮ್ಮ ವಸತಿಗಾಗಿ ನಾವು ಹೋರಾಟ ಮಾಡಬೇಕು.ಗ್ಯಾರಂಟಿ ಸಮಿತಿಗೂ ಅಧಿವೇಶನಕ್ಕೂ ಸಂಬಂಧವೇ ಇಲ್ಲ ಅವರಿಗೆ ಇಲ್ಲೇನಿ ಕೆಲಸ? ಎಂದು ಪ್ರಶ್ನಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸಚಿವರ ಅಳಿಯ ಮಗಳು ಸಂಬಂಧಿಕರೇ ವ್ಯವಹಾರಗಳನ್ನು ನೋಡಿಕೊಂಡಿದ್ದಾರೆ. ಒಂದೇ ಒಂದು ದಿನದ ಕಾರ್ಯಕ್ರಮಗಳಿಗೆ ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ. Ksmca ಗೆ ಸಮಾಜ ಕಲ್ಯಾಣ ಇಲಾಖೆ 38 ಕೋಟಿ ಹಣ ಬಿಡುಗಡೆ ಮಾಡಿದೆ. ಸಮಾಜಕಲ್ಯಾಣ ಇಲಾಖೆ 16 ಕಾರ್ಯಕ್ರಮಕ್ಕೆ 38 ಕೋಟಿ ಬಿಡುಗಡೆ  ಮಾಡಲಾಗಿದೆ. ಶ್ರೀರಂಗ ಪಟ್ಟಣ ದಸರಾಗೆ 22 ಲಕ್ಷ , 24 ಲಕ್ಷ ರೂ. ಬಿ  ಹೀಗೆ ಎರಡು ಬಿಲ್ ಮಾಡಲಾಗಿದೆ. ಅರಮನೆ ಮೈದಾನದಲ್ಲಿ ಸಂವಿಧಾನದ ಏಕತಾ ಸಮಾವೇಶಕ್ಕೆ 17 ಕೋಟಿ 30 ಲಕ್ಷ ರೂ. ಒಂದೇ ದಿನದ ಕಾರ್ಯಕ್ರಮ. ಸಂವಿಧಾನ ಜಾಗೃತಿ ಜಾತಾ ಏಕತಾ ಸಮಾವೇಶಕ್ಕೆ 17 ಕೋಟಿ ರೂ.. ಬಾಬು ಜಗಜೀವನ್ ರಾಮ್ ಜನ್ಮದಿನ ಕಾರ್ಯಕ್ರಮಕ್ಕೆ 66 ಲಕ್ಷ ರೂ..ಪ್ರಾಜೆಕ್ಟ್ ಕಮ್ಯುನಿಕೇಷನ್ ಗೆ ಈ ಎಲ್ಲ ಕಾರ್ಯಕ್ರಮ ಗುತ್ತಿಗೆ ನೀಡಲಾಗಿದೆ. Scp tsp ಹಣ ಬಳಕೆ ಮಾಡಿಕೊಳ್ಳಲಾಗಿದೆ. ಬೋಗಸ್ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದೆ. ಸಚಿವರೇ , ಅವರ ಅಳಿಯ ಮಗಳ ನೇತೃತ್ವದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಮಾಡಿಸ್ತಿದ್ದಾರೆ. ದಲಿತರ ಹಣವನ್ನು ಸಮಾಜ ಕಲ್ಯಾಣ ಸಚಿವರೇ ಲೂಟಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಲೂಟಿ ಸರ್ಕಾರ .ಸಚಿವ ಮಹಾದೇವಪ್ಪ ದಲಿತ ವಿರೋಧಿ.ಇವರ ಕುಟುಂಬ ಉದ್ದಾರ ಮಾಡ್ಕೊಂಡಿದ್ದಾರೆ.ತಕ್ಷಣ ಮಹಾದೇವಪ್ಪ ರಾಜೀನಾಮೆ ನೀಡಬೇಕು. ಅಂಬೇಡ್ಕರ್ ಬದುಕಿದ್ದರೆ, ಇವರನ್ನ ಎಲ್ಲಿಡಬೇಕೋ ಅಲ್ಲಿ ಇಡ್ತಾ ಇದ್ದರು. ಸಮಾಜ ಕಲ್ಯಾಣ ಸಚಿವರು ಸ್ವಕಲ್ಯಾಣ ಮಾಡ್ತಿದ್ದಾರೆ. ಈ ಎಲ್ಲ ಹಗರಣಕ್ಕೆ ದಾಖಲೆ ಕೊಟ್ರು ಸರ್ಕಾರ ಕ್ಯಾರೆ ಅನ್ನಲ್ಲ. 38 ಕೋಟಿ ಹಗರಣಕ್ಕೆ ಉತ್ತರ ಕೊಡಲಿ. ಇಲ್ಲದಿದ್ದರೆ ಅವರು ಮಾಡ್ತಿರೋ ಈ ಎಲ್ಲ ಕಾರ್ಯಕ್ರಮ ಬೊಗಳೆ ಅಂತ ಆಯ್ತು. ಕಮಿಷನ್ ಬರೋ ಕಡೆ ಹಣ ಖರ್ಚು ಮಾಡೋದು.ಇಂತಹವರು ಯಾಕೆ ಸಚಿವರಾಗಿ ಬರಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.