ಬೆಂಗಳೂರು; ಹಿಂದುಳಿದ ವರ್ಗದ ಬಗ್ಗೆ ಪ್ರೀತಿ ಇದ್ದರೆ ಸರ್ಕಾರ ಸಚಿನ್ ಕುಟುಂಬಕ್ಕೆ ರಕ್ಷಣೆ ಕೊಡಲಿ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.
ಬೀದರ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ಬಗ್ಗೆ ನಾವು ದಾಖಲೆ ತೋರಿಸಿದರೂ ಪ್ರಿಯಾಂಕ್ ಖರ್ಗೆಯವರಿಗೆ ಅದು ದಾಖಲೆ ಅಲ್ಲ. ಡೆತ್ ನೋಟ್ ಅಸಲಿ ಎಂದು ಎಫ್ ಎಸ್ ಎಲ್ ವರದಿ ಬಂದಿದೆ. ಸಚಿನ್ ಪ್ರಾಣ ತ್ಯಾಗಕ್ಕೆ ಸರ್ಕಾರ ಉತ್ತರ ಕೊಡಬೇಕು. ಸಚಿನ್ ಕುಟುಂಬಕ್ಕೆ ಬೆದರಿಕೆ ಇದೆ. ಹಿಂದುಳಿದ ವರ್ಗದ ಬಗ್ಗೆ ಪ್ರೀತಿ ಇದ್ದರೆ ಸಚಿನ್ ಕುಟುಂಬಕ್ಕೆ ರಕ್ಷಣೆ ಕೊಡಲಿ. ಸುಪಾರಿ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಪಿಎಸ್ಐ ಪರೀಕ್ಷಾ ಹಗರಣದ ಕಿಂಗ್ ಪಿನ್ ಡಿ.ಆರ್. ಪಾಟೀಲ್ ಪ್ರಿಯಾಂಕ್ ಖರ್ಗೆ ರೈಟ್ ಹ್ಯಾಂಡ್. ಬಿಜೆಪಿಯನ್ನು ಸಿಕ್ಕಿಸಲು ನೀವು ಅವರನ್ನು ಮುಂದಿಟ್ಟೇ ಅವತ್ತು ಎಲ್ಲಾ ಮಾಡಿದ್ದೀರಿ. ಅಂದು ಸಿಐಡಿ ತನಿಖೆ ಒಪ್ಪಲ್ಲ ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದರು.ಆಂದು ಆರೋಪಿಯಾಗಿದ್ದ ಡಿವೈಎಸ್ಪಿ ಶಂಕರ ಗೌಡ ಅವರನ್ನು ಇನ್ನೂ ನೀವು ಶಹಾಬಾದ್ ನಲ್ಲಿ ಇರಿಸಿಕೊಂಡಿದ್ದೀರಿ ಎಂದರು.
ಕಲೆಕ್ಷನ್ ಮಾಸ್ಟರ್ಸ್ ಕಾಂಗ್ರೆಸ್ಸೋ ಅಥವಾ ಬಿಜೆಪಿಯೋ ಅಂತಾ ಜನ ತೀರ್ಮಾನಿಸಲಿ.ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಹನಿ ಟ್ರ್ಯಾಪ್ ವಿಚಾರವೂ ಇದೆ. ಈಗ ಮುಖ್ಯಮಂತ್ರಿ ಜವಾಬು ಕೊಡಲೇಬೇಕು. ಪ್ರಿಯಾಂಕ್ ಖರ್ಗೆ ಒಂದು ಇಲಾಖೆಗೆ ಮಂತ್ರಿ. ಆದರೆ 34 ಇಲಾಖೆಗಳಿಗೂ ನೀವು ಬಾಯಿ ಹಾಕುತ್ತೀರಿ. ಡೆತ್ ನೋಟ್ ನಲ್ಲಿ ಎರಡು ಮೂರು ಕಡೆ ಪ್ರಿಯಾಂಕ್ ಖರ್ಗೆ ಹೆಸರು ಪ್ರಸ್ತಾಪ ಆಗಿದೆ. ರಾಜೀನಾಮೆ ಪಡೆಯಲು ನಿಮಗೆ ಧೈರ್ಯ ಇಲ್ಲ ಅಂತಾ ನಮಗೆ ಗೊತ್ತಿದೆ ಮುಖ್ಯಮಂತ್ರಿಗಳೇ. ಆ ಸಚಿವರ ತಂದೆ ಎಐಸಿಸಿ ಅಧ್ಯಕ್ಷರು. ನೀವು ಇದಕ್ಕೆ ಕೈ ಹಾಕಿದರೆ ಅವರು ನಿಮ್ಮ ಬುಡಕ್ಕೆ ಕೈ ಹಾಕುತ್ತಾರೆ ಎಂದು ನಿಮಗೆ ಭಯ. ಯಾಕೆಂದರೆ ನೀವು ಕುರ್ಚಿಗೆ ಅಂಟಿಕೊಂಡಿದ್ದೀರಿ. ತಮಗೆ ತಾಕತ್ ಇದ್ದಿದ್ದರೆ ನೀವು ಇಷ್ಟೊತ್ತಿಗೆ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು ಎಂದು ಸವಾಲು ಹಾಕಿದ್ದಾರೆ.
ಬಟ್ಟೆ ಹರಿದುಕೊಳ್ಳುವ ಹುಚ್ಚುತನ ಅವರೇ ಇಟ್ಟುಕೊಳ್ಳಲಿ, ನಮಗೆ ಬೇಕಿಲ್ಲ.ನಿಮಗೇನಾದರೂ ತಲೆ ಕೆಟ್ಟಿದ್ದರೆ ನೀವೇ ಬಟ್ಟೆ ಹರಿದುಕೊಳ್ಳಿ. ನೀವು ಬಟ್ಟೆನಾದರೂ ಹರಿದುಕೊಳ್ಳಿ, ಬಟ್ಟೆ ಬಿಚ್ಚಿ ಬೇಕಾದರೂ ಹಾಕೊಳ್ಳಿ, ನಮಗೇನಿಲ್ಲ. ಈ ರೀತಿಯ ಸಿದ್ದಾಂತ ನೀವು ಅಳವಡಿಸಿಕೊಂಡು ಹೋದರೆ ಜನರೇ ನಿಮ್ಮ ಬಟ್ಟೆ ಹರಿದು ಹಾಕುತ್ತಾರೆ.ಎಂದಿದ್ದಾರೆ.
ಒಬ್ಬ ಸುಪಾರಿ ಕೊಡುವ ಸಚಿವನನ್ನು ಮಂತ್ರಿ ಮಂಡಲದಲ್ಲಿ ಹೇಗ್ರೀ ಇಟ್ಟುಕೊಳ್ತೀರಿ ಸಿದ್ದರಾಮಯ್ಯನವರೇ?; ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪ್ರಶ್ನೆ
ಬೆಂಗಳೂರು; ಒಬ್ಬ ಸುಪಾರಿ ಕೊಡುವ ಸಚಿವನನ್ನು ಮಂತ್ರಿ ಮಂಡಲದಲ್ಲಿ ಹೇಗ್ರೀ ಇಟ್ಟುಕೊಳ್ತೀರಿ ಸಿದ್ದರಾಮಯ್ಯನವರೇ?ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
ರಾಜೀನಾಮೆ ಕೊಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಮಾತನಾಡಿದ ಅವರು ಸರ್ವ ಖಾತೆ ಸಚಿವ, ಎಲ್ಲದಕ್ಕೂ ನಂದೆಲ್ಲೆಡ್ಲಿ ಅಂತಾ ಮಾತಾಡುವ ಸಚಿವ ರಾಜೀನಾಮೆ ಕೊಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.ಒಂದು ನಾಯಿ ಕುಂಟುತ್ತಾ ನಡೆದರೆ ಅದರ ಬಗ್ಗೆ ಮಾತಾಡುವ ಸಚಿವ ವ್ಯಕ್ತಿ ರೈಲು ಹಳಿಗೆ ಬಿದ್ದು ಮೃತಪಟ್ಟ ಬಗ್ಗೆ ಮಾತಾಡದೇ ಇರುವ ಮನುಷ್ಯತ್ವ ಯಾಕೆ ಕಳೆದುಕೊಂಡರು?. ಎಲ್ಲದರಲ್ಲೂ ಮೂಗು ತೂರಿಸುವ ಒತ್ತಡದಿಂದ ಸಚಿನ್ ಪಾಂಚಾಳ್ ಡೆತ್ ನೋಟ್ ಬಗ್ಗೆ ಸಚಿವರಿಗೆ ಗಮನ ಹರಿಸುವ ವ್ಯವಧಾನ ಇಲ್ಲದಾಗಿದೆ ಎಂದರು.
ಡೆತ್ ನೋಟ್ ನಿಂದ ಸುಪಾರಿ ಕೊಡುವವರು ಮಂತ್ರಿ ಮಂಡಲದ ಒಳಗೆ ಇದ್ದಾರೆ ಎನ್ನುವುದು ಸ್ಪಷ್ಟ ಆಗುತ್ತದೆ.ಸ್ವಾಮೀಜಿ, ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷನ ಕೊಲೆ ಮಾಡಲು ಈ ಸರ್ಕಾರದಲ್ಲಿ ಸುಪಾರಿ ಕೊಟ್ಟಿದ್ದಾರಲ್ರೀ?. ಸುಪಾರಿ ಕೊಡಲು ನೀವು ಬೆನ್ನಿಗೆ ನಿಂತಿದ್ದೀರಿ ಅಂದರೆ ನೀವು ಅದರಲ್ಲಿ ಭಾಗಿಯಾಗಿದ್ದೀರಿ ಅಂತಾ.ಒಬ್ಬ ಸುಪಾರಿ ಕೊಡುವ ಸಚಿವನನ್ನು ಮಂತ್ರಿ ಮಂಡಲದಲ್ಲಿ ಹೇಗ್ರೀ ಇಟ್ಟುಕೊಳ್ತೀರಿ ಸಿದ್ದರಾಮಯ್ಯನವರೇ?. ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡಲ್ಲ ಎಂದಿದ್ದಾರೆ. ನಿಮಗಾಗಿ ನಾವ್ಯಾಕೆ ಬಟ್ಟೆ ಹರಿದುಕೊಳ್ಳೋಣ. ನಾವು ಇರುವುದೇ ನಿಮ್ಮ ರಾಜೀನಾಮೆ ಕೊಡಿಸಲು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಗ ಅವರು. ಎಐಸಿಸಿ ಅಧ್ಯಕ್ಷರೇ ನಿಮ್ಮ ಮಗ ಸುಪಾರಿಯಲ್ಲಿ ಭಾಗವಹಿಸಿದ್ದಾರೋ ಇಲ್ಲವೋ.ನೀವಾದರೂ ನಿಮ್ಮ ಮಗನಿಗೆ ಬುದ್ದಿ ಹೇಳಿ. ರಾಜ್ಯದಲ್ಲಿ ಸಿದ್ದರಾಮಯ್ಯ ಸಿದ್ದಾಂತ ಜಾರಿಯಲ್ಲಿದೆ ಅಂತಾ ಶಾಸಕ ನರೇಂದ್ರಸ್ವಾಮಿ ಹೇಳಿದ್ದಾರೆ. ಇದೇನಾ ನಿಮ್ಮ ಸಿದ್ದರಾಮಯ್ಯ ಸಿದ್ದಾಂತ? ಎಂದು ಪ್ರಶ್ನೆ ಮಾಡಿದ್ದಾರೆ.