ಮನೆ Latest News ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ

ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ

0

ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ  ನಡೆಸಿದರು. ಈ ವೇಳೆ ಮಾತನಾಡಿದ ಅವರು ಒಳ ಮೀಸಲಾತಿ ವಿಚಾರವಾಗಿ ಸಿಎಂ ಮೇಲ್ಮನೆಯಲ್ಲಿ ಹೇಳಿಕೆ ನೀಡಿದ್ದಾರೆ.ವಿಪಕ್ಷಗಳಿಂದ ಸ್ಪಷ್ಟನೆ ಕೇಳಿದಾಗ ಸಿಎಂ ನಾನು ಉತ್ತರ ಕೊಡಲ್ಲ ಅಂತ ಉದ್ದಟತನ ತೋರಿದರು. ಅದಕ್ಕೆ ನಮ್ಮ ಸದಸ್ಯರು ವಿರೋಧ ಮಾಡಿದೆವು.ಸಿಎಂ ಸ್ಪಷ್ಟನೆ ಕೊಡದಾಗ, ನಾವು ಏರು ಧ್ವನಿಯಲ್ಲಿ ಕೇಳಿದೆವು.ಬಹಳ ಘನ ಕಾರ್ಯ ಮಾಡಿದ್ದೇವೆ ಎಂಬ ರೀತಿ ಹೇಳಿದ್ದಾರೆ ಎಂದರು.

ಒಳ ಮೀಸಲಾತಿ ಕೊಡುತ್ತೇವೆ ಅಂತ ಹೇಳಿ ಸದಾಶಿವ ಆಯೋಗವನ್ನು 2003ರಲ್ಲಿ ಎಸ್.ಎಂ. ಕೃಷ್ಣ ರಚನೆ ಮಾಡಿದರು ಧೂಳು ತಿನ್ನುತ್ತಾ ಕುಳಿತಿತ್ತು.ನಮ್ಮ ಸರ್ಕಾರ ಬಂದ ಬಳಿಕ 15% ಇದ್ದ ಮೀಸಲಾತಿಯನ್ನು 17% ಮಾಡಿದೆವು.ಎ-6, ಬಿ-5.5, ಸಿ-5, ಡಿ-1% ಮೀಸಲಾತಿ ಕೊಡುವ ಕೆಲಸ ನಮ್ಮ ಸರ್ಕಾರ ಮಾಡಿತ್ತು.ಆಗಸ್ಟ್ ತಿಂಗಳಲ್ಲಿ ಆಯಾ ರಾಜ್ಯಗಳೇ ಒಳ ಮೀಸಲಾತಿ ಕೊಡುವಂತೆ ಕೋರ್ಟ್ ಆದೇಶ ಮಾಡಿತು.ಬಳಿಕ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ಸಮಿತಿ ಮಾಡಿದರು.ಅವರು ಮಾಡಿದ್ದು ಕೇವಲ 37% ಸಮೀಕ್ಷೆ ಮಾತ್ರ.ಸದಾಶಿವ ಆಯೋಗ ವರದಿ ಜಾರಿಗೆ ತರುತ್ತೇವೆ ಅಂತ ಹೇಳಿ ಅದನ್ನು ಮಾಡಲಿಲ್ಲ‌. ಈಗ ನಾಗಮೋಹನ್ ದಾಸ್ ಕಮಿಟಿ ಮಾಡಿ ಅದನ್ನೂ ಮಾಡಲಿಲ್ಲ.ಇವರಿಗೆ ಇಚ್ಛೆ ಬಂದಂತೆ ಮಾಡಿದ್ದಾರೆ.ಇದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರ.ಮಾಧುಸ್ವಾಮಿ ಆಯೋಗ ಕೊಟ್ಟ ವರದಿಗೆ ನಿಮಗೆ ಕಡಿಮೆ ಬಂದಿದೆ ಅಂತ ಎತ್ತಿಕಟ್ಟುವ ಕೆಲಸ ಮಾಡಿದೆ.ಕಲ್ಲು ಹೊಡೆಸುವ ಕೆಲಸ ಕಾಂಗ್ರೆಸ್ ಮಾಡಿದರು.17% ಮೀಸಲಾತಿ ಕೊಡಲು ಬರುವುದಿಲ್ಲ, ಇದು ಚುನಾವಣೆಗೆ ಮಾಡಿರುವ ತಂತ್ರ ಅಂತ ಹೇಳಿದರು.

ಬಲ, ಎಡ, ಸ್ಪೃಶ್ಯ ಅಂತ ಮಾಡಿದ್ದಾರೆ‌.ಎಕೆ, ಎಡಿ, ಎಎ ಅಂತ ಮಾಡಿದ್ದು, ಅದರಲ್ಲಿ ಬಲ, ಎಡ ಎರಡೂ ಇದ್ದಾರೆ ಅಂತ ಹೇಳಿದ್ದಾರೆ.ಅದರಲ್ಲಿ ಎಲ್ಲಿ ಸೇರಿಸಿದ್ದೀರಿ?.ಬೋವಿ, ವಡ್ಡರು, ಕೊರಮ, ಕೊರಚ ಹೆಚ್ಚು ತೆಗದುಕೊಳ್ಳುತ್ತಿದ್ದಾರೆ. ಎಡಗೈ ಸಮುದಾಯಕ್ಕೆ ಕಡಿಮೆಯಾಗಿದೆ ಅಂತ ಆರೋಪ ಬಂದಿದ್ದಕ್ಕೆ ಇದು ಉದ್ಬವವಾಗಿದೆ. ಇದು ರಾಜಕೀಯ ತೀರ್ಮಾನವೇ ಹೊರತು, ಸಾಮಾಜಿಕ ನ್ಯಾಯ ಇಲ್ಲ.ಮಹದೇವಪ್ಪಗೂ ಖುಷಿಯಾಗಿದೆ, ತಿಮ್ಮಾಪುರ ಅವರಿಗೂ ಖುಷಿಯಾಗಿದೆ, ಶಿವರಾಜ್ ತಂಗಡಗಿಗೂ ಖುಷಿಯಾಗಿದೆ ಅಂತ ಸಿಎಂ ಹೇಳಿಕೊಂಡಿದ್ದಾರೆ.ಇದರಿಂದ ಗೊಂದಲ ಶುರುವಾಗಿದೆ.17% ಊರ್ಜಿತ ಅಲ್ಲ ಅಂತ ಹೇಳಿ, ಈಗ ಅದೇ ಆಧಾರದ ಮೇಲೆ ಹೇಗೆ ಮೀಸಲಾತಿ ಮಾಡಿದ್ರಿ?,ಸಿಎಂ ಜನರ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದ್ರು,