ಬೆಂಗಳೂರು; ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೆಐಎಡಿಬಿ ಜಮೀನು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸಿಎ ಸೈಟ್‌ಗಳನ್ನ ಆಸ್ಪತ್ರೆ, ಪೋಸ್ಟ್ ಆಫೀಸ್ ಹೀಗೆ ಮೊದಲೇ ನಿರ್ಧಾರ ಆಗಿರಲಿದೆ.ಇಂಡಿವಿಷ್ಯುವಲ್ ಆಗಿ ಕೊಡೋದಿಲ್ಲ, ಟ್ರಸ್ಟ್ ಗೆ ಮಾತ್ರ ಕೊಡೋದು. ಒಂದು ಮನೆಗೆ ಸೀಮಿತವಾಗಿ ಟ್ರಸ್ಟ್ ಇದೆ.ಪ್ರಿಯಾಂಕ್ ಖರ್ಗೆ, ರಾಧಾಕೃಷ್ಣ ಇವರ ಹೆಸರಲ್ಲಿದೆ.ಗುಲ್ಬರ್ಗದಲ್ಲಿ ಇದು ರಿಜಿಸ್ಟರ್ ಆಗಿದೆ. ದಲಿತರು ಅಂದ್ರೆ ಒಂದೇ ಒಂದು ಫ್ಯಾಮಿಲಿ ಅಲ್ಲ.ಅನೇಕ ದಲಿತ ಕುಟುಂಬ ಕೂಡ ಇವೆ.ಒಂದೇ ಕುಟುಂಬಕ್ಕೆ ಹಲವು ಎಕರೆ ಜಮೀನು ಕೊಟ್ಟಿದ್ದಾರೆ.ಅದು ಏರೋಸ್ಪೇಸ್ ಹೆಸರಲ್ಲಿ ತೆಗೆದುಕೊಂಡಿದ್ದಾರೆ.ಇತರೆ ಟ್ರಸ್ಟ್ ಅರ್ಧ ಎಕರೆ ಸಿಕ್ಕಿದ್ರೂ ಅನುಕೂಲ ಆಗ್ತಿತ್ತು. ಇದು ನಂಬಿಕೆಯ ಪ್ರಶ್ನೆ.ಇದು ಮತ್ತೊಂದು ಮುಡಾ ಕೇಸ್ ಆಗಲಿದೆ ಎಂದಿದ್ದಾರೆ.
ಆ ಜಾಗ ಬೇಕು ಅಂತ ಅನೇಕರು ಅಪ್ಲಿಕೇಶನ್ ಹಾಕಿದ್ದಾರೆ.ಇದೊಂದೇ ಕುಟುಂಬ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಂತ ಬರಲಿದೆಯಾ.?ಈ ಬಗ್ಗೆ ನಾನು ನಾಳೆ ಸಂಪೂರ್ಣ ದಾಖಲೆ ಇಟ್ಟು ಮಾತಾಡ್ತೀನಿ. ನಾನು ಹಿಟ್ ಅಂಡ್ ರನ್ ಮಾಡೋದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರು ನೀಡಿದ್ದಾರೆ.
ಕೂಡಲೇ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್ ಪಡೆಯಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರು ನೀಡಿದ್ದಾರೆ. ಇಂದು ರಾಜಭವನದಲ್ಲಿ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ಛಲವಾದಿ ನಾರಾಯಣಸ್ವಾಮಿ ದೂರು ನೀಡಿದ್ದಾರೆ. ಅಲ್ಲದೇ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಮಾಜಿ ಸಚಿವ, ಶಾಸಕ ಅಶ್ವತ್ಥ್ ನಾರಾಯಣ್ ಸಿಎ ಸೈಟ್ ಗಳನ್ನು ಪಡೆಯಲು ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ.ಮುಖ್ಯ ಫಲಾನುಭವಿ ಖರ್ಗೆ ಕುಟುಂಬ ಎಂಬುದು ಎದ್ದು ಕಾಣುತ್ತಿದೆ.ಕೆಐಎಡಿಬಿ ಹಂಚಿಕೆ ಪ್ರಕ್ರಿಯೆಯ ಎಲ್ಲಾ ದಾಖಲೆಗಳನ್ನು ಒದಗಿಸಿ ಸಾರ್ವಜನಿಕವಾಗಿ ಮುಂದಿಡಬೇಕು.ಚಾಣಕ್ಯ ವಿವಿಗೆ ಕೊಟ್ಟಿರಲಿಲ್ವಾ ಎಂದು ಕೇಳಿದ್ದಾರೆ.ಸಿಎ ಸೈಟ್ ಗೂ, ಭೂಮಿ ಹಂಚಿಕೆಗೂ ಬಹಳ ವ್ಯತ್ಯಾಸ ಇದೆ.ಸಂಸ್ಥೆ, ಕೈಗಾರಿಕೆಗೆ ಭೂಮಿ ಮಂಜೂರು ಬೇಡಿಕೆ ಬಂದಾಗ ಅದನ್ನು ಒದಗಿಸಬೇಕಾದದ್ದು ಕೆಐಎಡಿಬಿ ಕರ್ತವ್ಯ ಎಂದಿದ್ದಾರೆ.
ಚಾಣಕ್ಯ ವಿವಿಗೆ ಕೆಲವು ರಿಯಾಯಿತಿ ಕೊಟ್ಟಿದ್ದೇವೆ, ಇಲ್ಲ ಅಂತಾ ಅಲ್ಲ.ಸಿಎ ಸೈಟ್ ಹಂಚಿಕೆಗೆ ಕೆಲವು ಮಾರ್ಗಸೂಚಿ ಇದೆ.ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಬೇಕಾಬಿಟ್ಟಿಯಾಗಿ ಕೊಟ್ಟಿದ್ದಾರೆ ಎಂಬ ಆಪಾದನೆ ಸರ್ಕಾರದ ಮೇಲಿದೆ.ಯಾವ ಉದ್ದೇಶ ಏನು ಅಂತಾನೂ ಇಲ್ಲದೇ ತಮಗೆ ಬೇಕಾದವರಿಗೆ ಕೊಟ್ಟು ಅಧಿಕಾರ ದುರುಪಯೋಗ ಎಂಬ ಸ್ಪಷ್ಟ ಆಪಾದನೆ ಇದೆ.ಸ್ವಾರ್ಥತೆ ಇರುವವರಿಗೆ ಕೊಟ್ಟು ಇನ್ನೂ ಲೂಟಿ ಮಾಡಿ ಅಂತಾ ಸರ್ಕಾರದ ಆಸ್ತಿ ಕೊಟ್ಟಿರುವುದು ದುರದೃಷ್ಟಕರ.ಕಾಂಗ್ರೆಸ್ ಸರ್ಕಾರ ಆತ್ಮಸಾಕ್ಷಿ, ಜವಾಬ್ದಾರಿ ಇಲ್ಲದೇ ಈ ರೀತಿ ನಿರ್ವಹಣೆ ಮಾಡುತ್ತಿದೆ.ಖರ್ಗೆಯವರು ಪಾಪಾ ಯೂ ಟರ್ನ್, ಬಿ ಟರ್ನ್, ಸಿ ಟರ್ನ್ ಅಂತಾ ದೊಡ್ಡ ದೊಡ್ಡ ಮಾತಾಡುತ್ತಾರೆ.ಭ್ರಷ್ಟಾಚಾರ ಆಗಿದೆ ಏನು ನಿಮ್ಮ ಅಂತಾ ಕೇಳಿದರೆ ಅವರದ್ದು ಉತ್ತರ ಇಲ್ಲ.ಕೊನೆಯ ಪಕ್ಷ ಉತ್ತರ ಕೊಡುವ ಶಕ್ತಿಯನ್ನಾದರೂ ನೀವು ಬೆಳೆಸಿಕೊಳ್ಳಿ ಎಂದಿದ್ದಾರೆ.