ಮನೆ Latest News ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗ್ಬೇಕು; ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್...

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗ್ಬೇಕು; ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹ

0

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗ್ಬೇಕು ಎಂದು  ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಈ ವಿಚಾರ ಪ್ರಸ್ತಾಪಿಸಿದ ಅವರು ಗೇಟ್ ತೆಗೆದಿದ್ದಾರೆ ಸಣ್ಣ ಘಟನೆ ಆಗುತ್ತಿರಲಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿರಲಿಲ್ಲ. ವಿಧಾನಸೌಧ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಾವು ಆಗುತ್ತದೆ. ಮೊದಲ ಬಲಿ ಇಂಜಿನಿಯರಿಂಗ್ ಯುವಕ . ಎಲ್ಲಾ ಪೊಲೀಸರು ಬಳಿ ವಾಕಿಟಾಕಿ ಇರುತ್ತದೆ . ಸಿಎಂ ಗೆ ಮಾಹಿತಿ ಕೊಡಲಿಲ್ವ. 4.11 ಕ್ಕೆ ಸಿಎಂ ವೇದಿಕೆ ಬಳಿ ಸಿಎಂ ಬರುತ್ತಾರೆ. 4:20 ಕ್ಕೆ ಎರಡನೇ ಬಲಿ ಆಗುತ್ತದೆ. 4:36 ಗೇಟ್ ಆರು ಜನ ಬಿದ್ದು ಹೋಗಿದ್ದಾರೆ. ಯಾರು ಅವರನ್ನ ಎತ್ತಿಕೊಂಡು ಹೋಗಲು ಇಲ್ಲ ಎಂದು ಮೆಸೇಜ್ ಬರುತ್ತದೆ. ಕಾಲುತುಳಿತಕ್ಕೆ 4 ನೇ ಸಾವು 13 ವರ್ಷದ ಬಾಲಕಿ. ಸಂಜೆ 4:40 ಕ್ಕೆ ಉತ್ತರಕನ್ನಡದ ಅಕ್ಷತಾ(,27) ಪೈ ಸಾವು. ಐವರು ಸತ್ತ ಮೇಲೆ ಆರ್ ಸಿಬಿ ವೇದಿಕೆಗೆ ಎಂಟ್ರಿ ಎಂದು ಅಶೋಕ್ ಭಾವುಕರಾಗಿದ್ದಾರೆ.

ಸಂಜೆ 4:55 ಕ್ಕೆ ಬೇಲೂರಿನ ಭೂಮಿಕ್ ಸಾವಾಗುತ್ತದೆ. ಸಂಜೆ 6 ಕ್ಕೆ ವಿಧಾನಸೌಧದ ಕಾರ್ಯಕ್ರಮ ಸ್ಟಾರ್ಟ್ ಆಗುತ್ತೆ. ನಾಡಗೀತೆ ನಡೆದಿರುವಾಗ ಚಿನ್ಮಯಿ ಸಾವಾಗುತ್ತದೆ. ನಂತರ ಯಾದಗಿರಿಯ ಶಿವಲಿಂಗ ಸಾವು. ಚಿಂತಾಮಣಿಯ ವಿದ್ಯಾರ್ಥಿ ಶ್ರವಣ ಸಾವು. ಎಂದು ಸದನದಲ್ಲಿ ಕಾಲ್ತುಳಿತದ ಬಗ್ಗೆ ಅಶೋಕ್ ಪ್ರಸ್ತಾಪ ಮಾಡಿದ್ದಾರೆ. ಕಪ್ ಗೆ ಮುತ್ತು, ಬೇಕಿತ್ತಾ ಈ ಮುತ್ತು ಎಂದು ಡಿಸಿಎಂ ಡಿಕೆಶಿಗೆ ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಪಾಪ ಡಿಸಿಎಂ ಗೆ ಸಿಎಂ ಆಗುವ ಕನಸ್ಸು ಇರಬಹುದೇನೋ. ಅದು ಬಿಡಿ ಯಾರ ಯಾರ ಹಣೆಯಲ್ಲಿ ಏನೇನೋ ಬರೆದಿದ್ದೀಯೋ. ಆದರೆ ಈ ಘಟನೆ ನಮಗೆಲ್ಲ ಎಲ್ಲರಿಗೂ ಪಾಠ ಆಗಬೇಕು ಎಂದಿದ್ದಾರೆ.

ಕಪ್ ನಮ್ದು  ತಪ್ಪು ನಮ್ದಲ್ಲ ಅಂತಾರೆ. 13 ಸಾವು ಆದ ಮೇಲೆ ರಸ್ತೆಯಲ್ಲಿ ಹಾಡುಗಳು. ಕಪ್ ಗೆ ಮುತ್ತು ಇವೇಲ್ಲ ಬೇಕಿತ್ತಾ.ಸಾವಿನ ಮನೆಯಲ್ಲಿ ಸಂಭ್ರಮಚಾರಣೆ ಆಗುತ್ತದೆ. ಈ ವೇಳೆ ಅಶೋಕ್ ಮಾತಿನ ವೇಳೆ ಮಧ್ಯ ಪ್ರವೇಶ ಮಾಡಿದ್ದಾರೆ ಯತ್ನಾಳ್ .ಅಶೋಕ್ ಅವರೇ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ತಪ್ಪೋ ಅಧಿಕಾರಿಗಳ ತಪ್ಪೋ ಎಂದು ಸ್ಪಷ್ಟವಾಗಿ ಹೇಳಿ . ನೀವು ಬರೇ ಅಧಿಕಾರಿಗಳ ಮೇಲೆ ಹೋಗುತ್ತಿದ್ದೀರಿ . ಸರ್ಕಾರ,ಸಿಎಂ ,ಗೃಹ ಸಚಿವರು ಡಿಸಿಎಂ ಯಾಕೆ ಬಿಟ್ಟಿದ್ದಿರಾ ಅವರ ಬಗ್ಗೆ ಮಾತನಾಡಿ. ಬರೆ ಕರಿ ಬಸವ  ಬಿಳಿ ಬಸವ ಎಂದು ಅಧಿಕಾರಿಗಳ ಮೇಲೆ ಹೋಗುತ್ತಿದ್ದೀರಾ ಎಂದ ಯತ್ನಾಳ್ ಹೇಳಿದ್ದಾರೆ.

ಇಷ್ಟೊಂದು ಸಾವಿಗೆ ಹೊಣೆ ಯಾರು?. ಹೃದಯ ಇದ್ದರೆ, ಮಾನವೀಯತೆ ಇದ್ದರೆ ಮಕ್ಕಳೇ ತಪ್ಪಾಯಿತು ಎಂದು ಸದನದಲ್ಲೇ ಹೇಳಿ. ನೀವೇ ಎ1,ಎ2, ಎ3. ಈ ಕೂಡಲೇ ರಾಜೀನಾಮೆ ಕೊಡಬೇಕು. ಇದರ ಜವಾಬ್ದಾರಿಯನ್ನು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಹೊರಬೇಕು. ಜನರನ್ನು ಕರೆತಂದಿದ್ದು ಸರ್ಕಾರ, ಸಂಭ್ರಮಾಚರಣೆ ಮಾಡಿಸಿದ್ದು ಸರ್ಕಾರ. ಪೋಟೋ ಅವಕಾಶಕ್ಕಾಗಿ ಜನರನ್ನು ಬಲಿ ತೆಗೆದುಕೊಂಡಿದ್ದೀರಿ. ಸದನ‌ ಸಮಿತಿ ಮಾಡಬೇಕು, ಬೇರೆ ರಾಜ್ಯಗಳಿಗೂ ಮಾದರಿಯಸಗಿರುವಂತೆ ಕಾನೂನು ರೂಪಿಸಿ.ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.