ಬೆಂಗಳೂರು; ಸದ್ಯ ರಾಜ್ಯ ರಾಜಕೀಯದಲ್ಲಿ ಜಾತಿ ಜನಗಣತಿ ಜಾರಿ ವಿಚಾರವೇ ಸದ್ದು ಮಾಡುತ್ತಿದ್ದು ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟಿದ್ರು ಅಂದ್ರು. ಈಗ ತರಲು ಹೊರಟ್ರೆ ಬೇರೆ ಹೇಳ್ತಿದ್ದಾರೆ. ನಾವು ಮುಂದೆ ಜಾತಿ ಗಣತಿ ಆಧಾರದಲ್ಲಿ ಕಾರ್ಯಕ್ರಮ ಮಾಡಲು ಇದು ಸಹಾಯವಾಗುತ್ತದೆ. ಈ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಜಾತಿ ಗಣತಿ ಜಾರಿಗೆ ತರ್ತೇವೆ. 18 ರ ಸಂಪುಟ ಸಭೆಗೆ ತರ್ತೇವೆ ಎಂದು ಸಿಎಂ ಹೇಳಿದ್ದಾರೆ.ಸಬ್ ಕಮಿಟಿ ಮಾಡೋದಾ. ಬೇರೆ ಏನು ಮಾಡೋದು ಯೋಚಿಸ್ತೇವೆ. ವಸ್ತು ಸ್ಥಿತಿ ಏನಿದೆ ಜನರ ಮುಂದೆ ಇಡ್ತಾರೆ.ಅದು ಬೇಡ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
೧೬೦ ಕೋಟಿ ಖರ್ಚು ಮಾಡಿ ಮಾಡಿಸಲಾಗಿದೆ. ಮುಂದೆ ಸೆಂಟ್ರಲ್ ಗೌರ್ಮೆಂಟ್ ಸೆನ್ಸಸ್ ಮಾಡೋಕೆ ನೋಡ್ತಿದೆ. ನಾವು ಪ್ರಧಾನಿಯವರನ್ನ ಭೇಟಿ ಮಾಡಿದ್ದೆವು. ಆಗ ಸೆನ್ಸೆಸ್ ಬಗ್ಗೆ ಅವರು ಹೇಳಿದ್ದರು.ಆಗಲೂ ವರದಿ ಬರುತ್ತಲ್ಲ ಆಗ ಏನು ಹೇಳ್ತಾರೆ.ಇದು ಅಧಿಕೃತವೇ ಅಲ್ವೇ.೧೦ ವರ್ಷಕ್ಕೊಮ್ಮೆ ಸೆನ್ಸಸ್ ಮಾಡಬೇಕು.ಪಾಪ್ಯುಲೇಶನ್ ಹೆಚ್ಚಾಗುತ್ತೆ ಅನ್ನೋದು ಇತ್ತು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಅವರು ಹತ್ತು ವರ್ಷಗಳ ಹಿಂದೆ ಜಾತಿ ಗಣತಿ ಆಗಿದೆ.ಈಗ ಬಹಳಷ್ಟು ಬದಲಾವಣೆ ಆಗಿದೆ. ಹಿಂದೆ ಸಿದ್ದರಾಮಯ್ಯ ಅವರದ್ದೇ ಸರ್ಕಾರ ಇತ್ತು.ಕುಮಾರಸ್ವಾಮಿ ಜೊತೆ ಅವರ ಮೈತ್ರಿ ಸರ್ಕಾರ ಕೂಡ ಇತ್ತು.ಆಗ ಯಾರೂ ಚಕಾರ ಎತ್ತಲಿಲ್ಲ.ಸಿದ್ದರಾಮಯ್ಯ ಅವರೇ ಸಮನ್ವಯ ಸಮಿತಿ ಅಧ್ಯಕ್ಷರು ಆಗಿದ್ದರು.ಈಗ ಮುಡಾ ತನಿಖೆಗೆ ಬಂದಿರುವುದರಿಂದ ಅದನ್ನು ಮರೆ ಮಾಚಬೇಕು ಅಂತ ಅವರ ಬೆಂಬಲಿಗರು ಐಡಿಯಾ ನೀಡಿದ್ದಾರೆ.ಇದು ಕಾಂಗ್ರೆಸ್ ಹುನ್ನಾರ ಅನ್ನೋದು ಸ್ಪಷ್ಟವಾಗಿದೆ. ವಿಪಕ್ಷ ಜನರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಲಿದೆ ಎಂದಿದ್ದಾರೆ.
ಮಾತೆತ್ತಿದರೆ ಸಿದ್ದರಾಮಯ್ಯ ಆತ್ಮಸಾಕ್ಷಿ ಅಂತಾರೆ.ನಿಮ್ಮ ಆತ್ಮ ಮುಟ್ಟಿಕೊಂಡು ಹೇಳಿ ಒಂದಾದರೂ ಅಭಿವೃದ್ಧಿ ಕೆಲಸ ಮಾಡಿದ್ದೀರಾ? ಅಭಿವೃದ್ಧಿ ಮರೀಚಿಕೆ ಆಗಿದೆ.ಅಭಿವೃದ್ಧಿ ಮಾಡದೇ ಈಗ ಮುಡಾ ಹಗರಣ ಮುಚ್ಚಿಕೊಳ್ಳಲು ಇಲ್ಲ ಸಲ್ಲದ ಕಸರತ್ತು ಮಾಡುತ್ತಿದ್ದಾರೆ. ಬಿಜೆಪಿಯನ್ನಲ್ಲ, ನಿಮ್ಮನ್ನು ನೀವು ಟೀಕೆ ಮಾಡಿಕೊಳ್ಳಿ.ಈವರೆಗೂ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗೆ 400 ಮೀಟರ್ ಓಡುತ್ತಿದ್ದರು.ಈಗ 100 ಮೀಟರ್ ರನ್ನಿಂಗ್ ರೇಸ್ ಆರಂಭಿಸಿದ್ದಾರೆ.ಬಂಡೆಯಂತೆ ನಿಲ್ಲುತ್ತೇವೆ ಅಂದರು, ಈಗ ನಾನು ಸಿಎಂ ಅಂತ ಶುರು ಮಾಡಿದ್ದಾರೆ.ಐದು ಗ್ಯಾರಂಟಿ ಪೈಕಿ ತಿಂಡಿ ಭಾಗ್ಯ ಫ್ರೀ ಇದೆ. ಬ್ರೇಕ್ ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ ಶುರುವಾಗಿದೆ.ಅಂದರೆ ಅವರಲ್ಲಿ ಸಿಎಂ ಬೀಳಿಸಲು ರೆಡಿ ಇದ್ದಾರೆ .ನೀವು ಬೀಳಿಸಿ ಪರವಾಗಿಲ್ಲ, ಎಷ್ಟು ದಿನ ಇರುತ್ತೀರಿ ನೋಡೋಣ. ಸಿಎಂ ಹತ್ತು ಹದಿನೈದು ದಿನದಲ್ಲಿ ಇಳಿಯುತ್ತಾರೆ ಅಂತ ಅವರ ಪಕ್ಷದಲ್ಲೇ ಮಾತಾಡಿಕೊಳ್ಳುತ್ತಿದ್ದಾರೆ. ಯಾರಾದ್ರೂ ಸಚಿವರು, ಜಿಲ್ಲಾ ಉಸ್ತುವಾರಿಗಳು ಹಳ್ಳಿಗೆ ಹೋಗಿ ನೋಡಿದ್ದಾರಾ?.ನಮ್ಮ ಹತ್ತಿರ ಹಣ ಇಲ್ಲ, ಬರಬೇಡಿ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದ್ರು.