ಮನೆ Latest News ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

0

ಬೆಂಗಳೂರು; ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ  ನೋಟಿಸ್ ನೀಡಿದ ಬಗ್ಗೆ ಚರ್ಚೆ ನಡೆಯಿತು.

ಇನ್ನು ಸಭೆ ಬಳಿಕ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲ್ ಸಚಿವ ಸಂಪುಟ ಸಭೆ ಸೇರಿ ಗಂಭೀರವಾದ ವಿಷಯದ ಮೇಲೆ ಚರ್ಚೆ ಮಾಡಿದ್ದೇವೆ.ಸಿದ್ದರಾಮಯ್ಯ ಸಿಎಂ ಸಂಪ್ರದಾಯಗಳನ್ನು ಎತ್ತಿ ಹಿಡಿಬೇಕು. ಮೌಲ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಇವತ್ತು ಸಚಿವ ಸಂಪುಟ ನಿರ್ಣಯಗಳಲ್ಲಿ ಬೈಯಾಸ್ ಬರಬಹುದು ಎಂದು ಕ್ಯಾಬಿನೆಟ್ ನಿಂದ ಹೊರಗೆ ಉಳಿಯುವ ನಿರ್ಣಯ ಮಾಡಿದರು.ಡಿಸಿಎಂ ಡಿಕೆಶಿವಕುಮಾರ್ ರನ್ನು ಅಧ್ಯಕ್ಷತೆ ವಹಿಸಬೇಕು ಎಂದು ನಾಮಕರಣ ಮಾಡಿದರು.ಸಿದ್ದರಾಮಯ್ಯ ಗೆ ಷೋಕಾಸ್ ನೊಟೀಸ್ ಗೆ ವಿವರವಾಗಿ ಚರ್ಚೆ ಮಾಡಿದ್ದೇವೆ.ಏಡ್ ಆ್ಯಂಡ್ ಅಡ್ವೈಸ್ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ ಎಂದರು.

ಇನ್ನು  ಡಿಸಿಎಂ ಡಿಕೆಶಿವಕುಮಾರ್ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹುದೊಡ್ಡ ಮತಗಳಿಂದ ಆಯ್ಕೆಯಾದ ಸಿಎಂ ಸಿದ್ದರಾಮಯ್ಯ ಅವರು, ಪ್ರಜಾಪ್ರಭುತ್ವಕ್ಕೆ ಮಾರಕ ಆಗುವ ಪರಿಸ್ಥಿತಿ, ಸಂವಿಧಾನದ ಕಗ್ಗೊಲೆ ಕೇಂದ್ರ ಸರ್ಕಾರದ ಕಡೆಯಿಂದ ನಡೆಯುತ್ತಿದೆ.೧೩೫ ಶಾಸಕರ ಶಾಸಕಾಂಗ ಸಭೆ ಸಿದ್ದರಾಮಯ್ಯ ರನ್ನು ಸಿಎಂ ಆಗಿ ಆಯ್ಕೆ ಮಾಡಿದೆ.ಕಾನೂನಿಗೆ ಸಂವಿಧಾನಕ್ಕೆ ಗೌರವ ಕೊಡ್ತೇವೆ.ಘನವೆತ್ತ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಬಳಸಿಕೊಂಡಿದೆ. ಟಿಜೆ ಅಬ್ರಹಾಂ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಸುಪ್ರಿಂ ಕೋರ್ಟ್ ಯಾವ ರೀತಿ ಅಬ್ರಹಾಂ ಗೆ ಫೈನ್ ಹಾಕಿದೆ ‌ಗೊತ್ತಿದೆ.ಅವರ ಮೇಲೆ ಕೋರ್ಟ್ ಸಾಕಷ್ಟು ಫೈನ್ ಹಾಕಿದೆ.ಅಬ್ರಹಾಂ ಜುಲೈ ೨೬ ರಂದು ರಾಜ್ಯಪಾಲರಿಗೆ ದೂರು ನೀಡಿರುತ್ತಾರೆ.ಜುಲೈ ೫ ರಂದು ಪೇಪರ್ ನಲ್ಲಿ ಬಂದ ವರದಿ ಆಧರಿಸಿ ರಾಜ್ಯಪಾಲರು ನಮ್ಮ ಚೀಫ್ ಸೆಕ್ರೆಟರಿ ಗೆ ವರದಿ ಕೇಳಿದ್ದರು.ಜುಲೈ ೧೫ ರಂದು ಮತ್ತೆ ಇದೇ ರಾಜ್ಯಪಾಲರು ೫೦-೫೦ ಅನುಪಾತದ ಬಗ್ಗೆ ಬಂದ ದೂರು ಆಧರಿಸಿ ವರದಿ ಕೇಳುತ್ತಾರೆ.ಮುಡಾದಲ್ಲಿ ಆದ ಸೈಟು ಗಳ ಹಂಚಿಕೆ ಬಗ್ಗೆ ರೈತ ಸಂಘದವರು ದೂರು ನೀಡಿರುತ್ತಾರೆ.ಮುಡಾ ಆಯುಕ್ತರ ನಿರ್ಣಯದ ಬಗ್ಗೆ ದೂರು ನೀಡಿರುತ್ತಾರೆ ಎಂದಿದ್ದಾರೆ.

ಇನ್ನು ಕಾನೂನು ಬದ್ದವಾಗಿ ಎಲ್ಲ ತೀರ್ಪುಗಳನ್ನು ಗಮನಿಸಿ ನಾವು ಚರ್ಚೆ ಮಾಡಿದ್ದೇವೆ.ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರು ಹೇಗೆ ನಡೆದುಕೊಳ್ತಿದ್ದಾರೆ .ದೇಶದ ಕಾನೂನು ಹೇಗಿದೆ? ಯಾವ ಯಾವ ಸರ್ಕಾರ ಬಂದಾಗ ಯಾರೆಲ್ಲ ಹೇಗೆ ನಡೆದುಕೊಂಡಿದ್ದಾರೆ? ಎಲ್ಲ ನೋಡಿ ಚರ್ಚೆ ಮಾಡಿದ್ದೇವೆ. ಜುಲೈ ೨೬ ರಂದು ದೂರು ಬಂದಾಗಲೇ ಚೀಫ್ ಸೆಕ್ರೆಟರಿ ಇಡೀ ಘಟನೆ ಬಗ್ಗೆ ರಾಜ್ಯಪಾಲರಿಗೆ ತಿಳಿಸಿದ್ದಾರೆ.೧೫೦ ಪೇಜ್ ಗಳಷ್ಟು ದೂರು ಓದುವುದಕ್ಕಾದರು ರಾಜ್ಯಪಾಲರಿಗೆ ಸಮಯ ಬೇಕಲ್ಲ?.ಯಾಕಿಷ್ಟು ತರಾತುರಿಯಲ್ಲಿ ಇಂಥ ತೀರ್ಮಾನ ಮಾಡ್ತಿದ್ದಾರೆ?.ಪ್ರಜಾಪ್ರಭುತ್ವದ ಆಯ್ಕೆಯಾದ ಸರ್ಕಾರ ಇಲ್ಲಿ ಇದೆಯೋ ಇಲ್ವೋ?ಯಾರೇ ದೂರು ಕೊಟ್ಟರೂ ಏನಾದರೂ ಒಂದು ಆರೋಪ ಪ್ರೂವ್ ಆಗಬೇಕಿತ್ತು.ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗಬೇಕಾದರೆ ತನಿಖಾ ವರದಿ ಇರಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇನ್ನೂ ತನಿಖೆಯೇ ಮಾಡಿಲ್ಲ, ಜ್ಯುಡಿಷಿಯಲ್ ವಿಚಾರಣೆ ಪ್ರಾರಂಭ ಆಗಿದೆ ಅಷ್ಟೇ.ಅಧಿಕಾರಿಗಳು ಸಂಪೂರ್ಣ ತನಿಖೆ ಮಾಡ್ತಿದ್ದಾರೆ.ಇದರ ಮುಂಚಿತವಾಗಿ ತರಾತುರಿಯಾಗಿ ನೊಟೀಸ್ ಯಾಕೆ?.ಸಿದ್ದರಾಮಯ್ಯ ಪತ್ನಿಯ ಸಹೋದರ ಜಮೀನು ಖರೀದಿ ಮಾಡಿದ್ದಾರೆ.ಅರಿಶಿನ ಕುಂಕುಮ ಅಂತ ಜಮೀನು ಇವರಿಗೆ ಬಂದಿದೆ.ಮುಡಾ ಒತ್ತುವರಿ ಮಾಡಿಕೊಂಡ ಜಮೀನು ಅದು.ಮುಡಾಗೆ ಹೋಗಿ ನಮ್ಮ ಜಮೀನಿಗೆ ಪರಿಹಾರ ಕೊಡಿ ಅಂತ ಕೇಳಿದ್ದಾರೆ.ಅದಾಗಲೇ ಮುಡಾ ಸೈಟು ಮಾಡಿ ಹಂಚಿರುವಾಗ ಬದಲಿ ನಿವೇಶನ ಕೊಡಬೇಕು ಮುಡಾ.ಪಾರ್ವತಿಯವರು ಮುಡಾಗೆ ಅರ್ಜಿ ಹಾಕಿದಾಗ ಮುಡಾದವರಿಗೆ ಅರ್ಥ ಆಗಿದೆ ತಾವು ತಪ್ಪು ಮಾಡಿದ್ದೇವೆ ಅಂತ.ಸಿದ್ದ ಸೈಟು ಹಂಚಿಕೆಯಾದಾಗ ಅಧಿಕಾರದಲ್ಲಿ ಇರಲೇ ಇಲ್ಲ. ಮುಡಾ ಸದಸ್ಯರಾಗಿ ಆಗ ಇದ್ದವರೆಲ್ಲ ಬಿಜೆಪಿ ಸದಸ್ಯರೇ.ಮುಡಾ ಚೇರ್ಮನ್ ಕೂಡ ಬಿಜೆಪಿಯವರೇ.ಮುಡಾದಿಂದ ಪಾರ್ವತಿಯವರಿಗೆ ಅನ್ಯಾಯ ಆಗಿದೆ ಎಂಬುದು ಅವರಿಗೂ ಗೊತ್ತಾಗಿದೆ ಎಂದಿದ್ದಾರೆ.

ನಗರಾಭಿವೃದ್ಧಿಯವರೂ ಕೂಡ ನಡಾವಳಿ ಮಾಡಿದ್ದಾರೆ, ಕಾಯ್ದೆ ಮಾಡಿದ್ದಾರೆ.ಅಕ್ರಮವಾಗಿ ಮುಡಾ ಒತ್ತುವರಿ ಮಾಡಿಕೊಂಡಿದ್ದಕ್ಕೆ ಸೈಟು ನೀಡಿದ್ದಾರೆ.ಮುಡಾದವರಿಗೆ ಪಾರ್ವತಿ ಇಂಥದ್ದೇ ಸೈಟು ಕೊಡಿ ಅಂತ ಕೇಳಿಲ್ಲ.ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ? ಸಿದ್ದರಾಮಯ್ಯ ಏನಾದ್ರೂ ಸಹಿ ಹಾಕಿದ್ರಾ?ಒಬ್ಬ ಸಾಮಾನ್ಯ ಮಹಿಳೆಯಾಗಿ ಆಕೆಗೆ ಹಕ್ಕಿಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ.