ಚಿಕ್ಕಬಳ್ಳಾಪುರ: ನಂದಿ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಸುದ್ದಿಗೋಷ್ಟಿ ನಡೆಸಿದ್ರು,
ಡಿಸಿಎಂ ಡಿಕೆಶಿ, ಎಚ್ ಕೆ ಪಾಟೀಲ್, ಪರಮೇಶ್ವರ್, ಮುನಿಯಪ್ಪ, ಎಂಸಿ ಸುಧಾಕರ್, ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಸಿಎಂ ಸಿದ್ದರಾಮಯ್ಯ ಅವರಿಗೆ ಸುದ್ದಿಗೋಷ್ಟಿಯಲ್ಲಿ ಸಾಥ್ ನೀಡಿದ್ರು.
ಈ ವೇಳೆ ಮಾತನಾಡಿದ ಸಿಎಂ ಸಿಎಂ ಸಿದ್ದರಾಮಯ್ಯ ೨೦೨೩ ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ತೀರ್ಮಾನವನ್ನು ಮಾಡಿದೆವು. ಪ್ರತಿ ಕಂದಾಯ ವಿಭಾಗದಲ್ಲಿ ಕೇಂದ್ರ ಅಥವಾ ಬೇರೆ ಸ್ಥಳಗಳಲ್ಲಿ ಸಂಪುಟ ಸಭೆ ಮಾಡಬೇಕು ಅಂತ ತೀರ್ಮಾನ ಮಾಡಿದೆವು. ಅದರಂತೆ ಗುಲ್ಬರ್ಗ, ಮೈಸೂರು ಚಾಮರಾಜನಗರ ಕ್ಯಾಬಿನೆಟ್ ಮೀಟಿಂಗ್ ಮಾಡಿದ್ದೇವೆ. ಬೆಂಗಳೂರು ವಿಭಾಗದ ಸಭೆ ಇಂದು ನಂದಿ ಬೆಟ್ಟದಲ್ಲಿ ಆಗಿದೆ. ಬೆಳಗಾವಿ ವಿಭಾಗದ ವಿಜಯಪುರದಲ್ಲಿ ಕ್ಯಾಬಿನೆಟ್ ಮೀಟಿಂಗ್ ಮಾಡುತ್ತೇವೆ. ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಸುಧಾಕರ್ ಅಮೇರಿಕ ಜರ್ಮನಿಗೆ ಸ್ಕಿಲ್ ಡಿಪಾರ್ಟ್ಮೆಂಟ್ ವಿಷಯಕ್ಕೆ ಹೋಗ್ತಿದ್ದಾರೆ. ಅದಕ್ಕಾಗಿ ಇವತ್ತೇ ನಂದಿ ಬೆಟ್ಟದಲ್ಲಿ ಸಭೆ ಆಗಿದೆ ಎಂದರು.
೯೦% ಬೆಂಗಳೂರು ವಿಭಾಗದ ವಿಷಯವನ್ನೇ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ.ಬೇರೆ ವಿಷಯಗಳು ತುರ್ತಾಗಿದ್ದರೆ ಮಾತ್ರ ತೆಗೆದುಕೊಳ್ತೀವಿ. ೪೮ ವಿಷಯಗಳನ್ನು ಚರ್ಚೆ ಮಾಡಿದ್ದೇವೆ ಇವತ್ತು. ೩೪೦೦ ಕೋಟಿ ಅನುದಾನ ಈ ಎಲ್ಲ ೪೮ ವಿಷಯಗಳಿಗೆ ಮಂಜೂರು ಮಾಡುತ್ತಿದ್ದೇವೆ. ಬಿಜೆಪಿಯವರು ಪದೇ ಪದೇ ಹೇಳ್ತಾರೆ ಈ ಸರ್ಕಾರದಲ್ಲಿ ದುಡ್ಡಿಲ್ಲ ಅಂತ. ಅದಕ್ಕಾಗಿ ಇದನ್ನು ಒತ್ತಿ ಒತ್ತಿ ಒತ್ತಿ ಒತ್ತಿ ಹೇಳ್ತಿದ್ದೇನೆ. ಬೆಂಗಳೂರು ವಿಭಾಗಕ್ಕೆ ೨೦೫೦ ಕೋಟಿ ಮಂಜೂರು ಮಾಡಿದ್ದೇವೆ. ಎತ್ತಿನಹೊಳೆಗೆ ಸಂಬಂಧಪಟ್ಟಂತೆ ಮುನಿಯಪ್ಪ ಡಿಕೆಶಿ ಸುಧಾಕರ ಕೃಷ್ಣ ಭೈರೇಗೌಡ ಪರಮೇಶ್ವರ್ ಎಲ್ಲರೂ ಮಾತಾಡಿದ್ದೇವೆ. ಎತ್ತಿನಹೊಳೆ ಪ್ರೊಜೆಕ್ಟ್ ಗೆ ಒಟ್ಟೂ ೨೩೨೫೧ ಕೋಟಿ .ಇಲ್ಲಿಯವರೆಗೆ ಖರ್ಚಾದ ಹಣ ೧೭ ಸಾವಿರ ಕೋಟಿ. ಇನ್ನೂ ೬೫೦೦ ಕೋಟಿ ಎತ್ತಿನ ಹೊಳೆ ಪ್ರೊಜೆಕ್ಟ್ ಗೆ ಬೇಕಾಗಿದೆ.ಮೂಲತಃ ಕುಡಿಯುವ ನೀರಿನ ಪ್ರೊಜೆಕ್ಟ್, ಆದರೆ ಕೆರೆಗಳಿಗೆ ೫೦% ನೀರು ತುಂಬಿಸಬೇಕು ಅಂತ ಮಾಡಿದ್ದೇವೆ. ಒಟ್ಟು ೨೪.೧ ಟಿಎಂಸಿ ನೀರು ಇದಕ್ಕೆ ಅಗತ್ಯವಿದೆ. ೧೪ ಟಿಎಂಸಿ ಕುಡಿಯುವ ನೀರಿಗೆ ಬೇಕಾಗಿದೆ.ಮೊದಲು ಕುಡಿಯುವ ನೀರು ಕೊಡುವ ಕೆಲಸ ಮಾಡೋಣ ಎಂದು ನಿರ್ಧಾರ ಮಾಡಿದ್ದೇವೆ. ಇನ್ನು ಎರಡು ವರ್ಷಗಳಲ್ಲಿ ಕುಡಿಯುವ ನೀರಿನ ಪ್ರೊಜೆಕ್ಟ್ ಮುಗಿಸಿ ಎತ್ತಿನಹೊಳೆ ನೀರು ಕೊಡುತ್ತೇವೆ.ಯಾವುದೇ ನೀರಿನ ತೊಂದರೆ ಇಲ್ಲ. ನೀರೆಲ್ಲಿದೆ ಕೊಡೋಕೆ ಅಂತ ವಿಪಕ್ಷದವರು ಮಾತಾಡ್ತಾರೆ. ಗ್ರ್ಯಾವಿಟಿ ಮೇನ್ ಕ್ಯಾನಲ್ ಕೆಲಸ ೮೨% ಮುಗಿದಿದೆ.ಮಧುಗಿರಿ ಪಾವಗಡ ಟಿಜಿಹಳ್ಳಿ, ರಾಮನಗರ ಕೊರಟಗೆರೆ ತನಕ ಕೆಲಸ ಮುಗಿದಿದೆ.ಹೆಚ್ಚುವರಿಯಾಗಿ ೧೯೦೦ ಕೋಟಿ ಬೇಕಿದೆ.ಓವರ್ ಆಲ್, ೮೦೦೦ ಕೋಟಿ ಬೇಕಿದೆ.ಲಕ್ಕವಳ್ಳಿ ಡ್ಯಾಂನಿಂದ ಕೂಡ ನೀರು ತರುತ್ತೇವೆ. ೯ ಜಿಲ್ಲೆಗಳ ೭೫ ಲಕ್ಷ ಜನರಿಗೆ ನೀರು ಕೊಡ್ತಾ ಇದ್ದೀವಿ ಇದರಿಂದ ಎಂದು ಹೇಳಿದರು.
೨೫೫೦ ಕೋಟಿ ಬೆಂಗಳೂರು ವಿಭಾಗಕ್ಕೆ ೩೧ ವಿಷಯಗಳಿದ್ದವು. ಬಹಳ ಮುಖ್ಯವಾಗಿ ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಯಿಂದ ಕಾರ್ಮಿಕರ ಮಕ್ಕಳಿಗೆ ಒಂದೊಂದು ವಸತಿ ಶಾಲೆ ತೆರೆಯಲು ತೀರ್ಮಾನ ಮಾಡಲಾಗಿದೆ. ಅದಕ್ಕೆ ಒಟ್ಟೂ ಖರ್ಚು ಮಾಡುವ ಹಣ ೧೧೨೫ ಕೋಟಿ ಹಣ. ೩೧ ಕಾರ್ಮಿಕ ಮಕ್ಕಳ ವಸತಿ ಶಾಲೆಗಳನ್ನು ತೆರೆಯಲು ಮಂಜೂರು ಮಾಡಿದ್ದೇವೆ. ಶಿಕ್ಷಣಕ್ಕೆ ಆರೋಗ್ಯಕ್ಕೆ ಕುಡಿಯುವ ನೀರಿಗೆ ಹಣ ಮೀಸಲಿದ್ದೇವೆ.ಐಎಎಸ್, ಐಆರ್ ಎಸ್, ಐಎಫ್ಎಸ್ ತರಬೇತಿಗೆ ಎರಡು ವಸತಿ ಶಾಲೆ ತೆರೆಯಲು ತೀರ್ಮಾನ ಮಾಡಲಾಗಿದೆ.ಅದಕ್ಕೆ ೧೦ ಕೋಟಿ ಮೀಸಲಿಟ್ಟಿದ್ದೇವೆ ಎಂದರು.
ಬೆಂಗಳೂರು ಸಿಟಿ ಯುನಿವರ್ಸಿಟಿಗೆ ದಿ.ಡಾ.ಮನಮೋಹನ್ ಸಿಂಗ್ ಹೆಸರನ್ನು ಇಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಲಾಗಿದೆ. ಡಾ. ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿವಿ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಹೊಸ ತಾಲೂಕುಗಳಲ್ಲಿ ಪಿಎಚ್.ಸಿ ಇಲ್ಲ ಅಂಥ ತಾಲೂಕುಗಳಲ್ಲಿ ಕಮ್ಯುನಿಟಿ ಹೆಲ್ತ್ ಸೆಂಟರ್ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಮಾಡಿದ್ದೇವೆ.ಬಾಗೇಪಲ್ಲಿ ಪಟ್ಟಣ ಹೆಸರನ್ನು ಭಾಗ್ಯ ನಗರ ಎಂದು ಮಾಡಿದ್ದೇವೆ. ಪಲ್ಲಿ ಹೆಸರು ತೆಲುಗು ಪದ.ಬಾಗೇಪಲ್ಲಿ ಎಂದು ಬೇಡ ಎಂದು ಭಾಗ್ಯ ನಗರ ಎಂದು ಮಾಡಿದ್ದೇವೆ. ನಮ್ಮ ಕಡೆ ಹಲ್ಲಿಗೆ ಪಲ್ಲಿ ಎನ್ನುತ್ತೇವೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ಮಳೆ ಹಾನಿ ಪ್ರದೇಶದಗಳಿಗೆ ಅಗತ್ಯ ಬಿದ್ರೆ ನಾನು ಹೋಗ್ತೇನೆ.ಕೊಡಗು, ಉಡುಪಿ, ದಕ್ಷಿಣದಲ್ಲಿ ಮಳೆ ಆಗ್ತಿದೆ. ಈಗಾಗಲೇ ನಮ್ಮ ಕಂದಾಯ ಮಂತ್ರಿಗಳು ಹೋಗಿದ್ದಾರೆ. ಬೆಳಗಾವಿಗೂ ಹೋಗಿದ್ರೂ ಅಲ್ಲಿ ಮಳೆ ಆಗಿಲ್ಲ.ಮಳೆ ಆಗ್ತಿರುವ ಜಿಲ್ಲೆಗಳಿಗೆ ಕಂದಾಯ ಸಚಿವರು ಹೋಗ್ತಿದಾರೆ. ಅಗತ್ಯ ಬಿದ್ದರೆ ನಾನೂ ಹೋಗ್ತಿನಿ ಎಂದು ತಿಳಿಸಿದ್ರು.