ಮನೆ Latest News ಕೆಲಸ ಇಲ್ಲದವನು ಇನ್ನೇನೋ ಮಾಡಿದ ಅಂದ ಹಾಗೆ ಈ ರಾಹುಲ್ ಗಾಂಧಿ ಕೆಲಸ‌; ವಿಧಾನಪರಿಷತ್ ಸದಸ್ಯ...

ಕೆಲಸ ಇಲ್ಲದವನು ಇನ್ನೇನೋ ಮಾಡಿದ ಅಂದ ಹಾಗೆ ಈ ರಾಹುಲ್ ಗಾಂಧಿ ಕೆಲಸ‌; ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಹೇಳಿಕೆ

0

ಬೆಂಗಳೂರು; ರಾಜ್ಯದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಪರಿಷತ್ ಸದಸ್ಯ ಸಿ ಟಿ ರಿ ಪ್ರತಿಕ್ರಿಯಿಸಿದ್ದು ಬರೀ ಈ ರೀತಿಯ ಕೆಲಸಗಳನ್ನೇ ರಾಹುಲ್ ಗಾಂಧಿ ಮಾಡಿಕೊಂಡು ಬಂದಿರುವುದು. ಕೆಲಸ ಇಲ್ಲದವನು ಇನ್ನೇನೋ ಮಾಡಿದ ಅಂದ ಹಾಗೆ ಈ ರಾಹುಲ್ ಗಾಂಧಿ ಕೆಲಸ‌. ಮೊದಲು ಅವನು ದಲಿತ ಅಂತ ಬಿಂಬಿಸಿ ಬಿಜೆಪಿ ವಿರುದ್ದ ಎತ್ತಿ ಕಟ್ಟಿದರು. ರೋಹಿತ್ ವೇಮುಲ ಸಾಧನೆ ಏನು? ಕೊಡುಗೆ ಏನು?. ದೇಶ ವಿರೋಧಿಗಳೇ ಐಕಾನ್ ಗಳಾಗಿ ಕಾಣುತ್ತಾರಾ?. ಕಾಂಗ್ರೆಸ್ ಅಷ್ಟು ಅಧಃಪತನಕ್ಕೆ ಹೋಗಿದ್ಯಾ?.ದೇಶ ವಿರೋಧಿಗಳ ಮೇಲೆ ಸಿಂಪತಿ ಮಾಡಲು ಮುಖ್ಯಮಂತ್ರಿ ಬರಬೇಕಾ?.ಅಂತಹವರ ಬಗ್ಗೆ ಕಾಂಗ್ರೆಸ್ ಸಹ ಸಿಂಪತಿ ಪಡಬಾರದು‌ ಎಂದಿದ್ದಾರೆ.

ಕನ್ನಡಿಗ ಬೈಕ್ ಸವಾರ ವಿಕಾಸ್  ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ವಿಚಾರದ ಬಗ್ಗೆ ಮಾತನಾಡಿದ ಅವರು ಇಲ್ಲಿ ಹಿಂದಿ ಭಾಷೆ, ಸೈನಿಕನ ವಿಚಾರ ಯಾಕೆ ಬಂತು? ವಿಂಗ್ ಕಮಾಂಡರ್ ಇರಬಹುದು, ಆದರೆ ಸೈನಿಕ ಅಂತಾ ಟಾರ್ಗೆಟ್ ಮಾಡಿದ್ದಾರೆ ಅಂತಾ ಹೇಳಿರುವುದು ಸುಳ್ಳು .ವಿಕಾಸ್ ಕನ್ನಡಿಗ ಅಂತಾ ಟಾರ್ಗೆಟ್ ಮಾಡಿದ್ದಾರೆ ಅಂತಾ ಹೇಳಿರುವುದು ಕೂಡಾ ಸುಳ್ಳು.ವೈಯಕ್ತಿಕ ಘಟನೆಯ ಸತ್ಯಾಸತ್ಯತೆ ತಿಳಿದು ತನಿಖೆ ಮಾಡಲಿ. ಭಾಷೆ ಮೇಲಿನ ದೌರ್ಜನ್ಯ, ಸೈನಿಕನ ಮೇಲಿನ ದೌರ್ಜನ್ಯ ಅಂತಾ ಹೇಳುವುದು ತಪ್ಪಾಗುತ್ತದೆ.ಇದನ್ನು ವ್ಯಕ್ತಿಗತ ನೆಲೆಯಲ್ಲೇ ನೋಡಬೇಕು ಎಂದಿದ್ದಾರೆ.

ಜಾತಿ ಜನಗಣತಿ ಮರು ಸಮೀಕ್ಷೆ ಆಗಬೇಕು ಅಂತ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಒತ್ತಾಯ ವಿಚಾರದ ಬಗ್ಗೆ ಮಾತನಾಡಿ ಮುಖ್ಯಮಂತ್ರಿಗಳು ಅವರ ಸಂಪುಟದ ಸದಸ್ಯರಿಗೇ ಸಮಾಧಾನ ಪಡಿಸಲು ಆಗಿಲ್ಲ. ನಿಮ್ಮ ಶಾಸಕರಿಗೇ ವರದಿ ಬಗ್ಗೆ ಒಪ್ಪಿಸಲು ಆಗಿಲ್ಲ. ಇನ್ನು ರಾಜ್ಯದ ಜನರಿಗೆ ಹೇಗೆ ಒಪ್ಪಿಸುತ್ತೀರಾ?. ಮೊದಲು ನಿಮ್ಮ ಸಚಿವ, ಶಾಸಕರಿಗೆ ಸಮಾಧಾನಪಡಿಸಿ. ಮೂಲ ವರದಿಯೇ ಇಲ್ಲ ಅಂತಿದ್ದಾರೆ. ಸದಸ್ಯ ಕಾರ್ಯದರ್ಶಿಯೇ ಆ ಸಮೀಕ್ಷೆಗೆ ಸಹಿ ಹಾಕಿಲ್ಲ.ಇನ್ನು ಅದಕ್ಕೆ ಹೇಗೆ ಮಾನ್ಯತೆ ಸಿಗುತ್ತದೆ?. ವರದಿಯಲ್ಲಿ ವ್ಯತ್ಯಾಸಗಳು ಬಹಳ ಇವೆ. ಕೆಲವು ಸಮುದಾಯಗಳ ಸಂಖ್ಯೆ ಹೆಚ್ಚಾಗಿದೆ, ಕೆಲವರದ್ದು ಕಡಿಮೆ ಆಗಿದೆ. ಇದನ್ನು ಹೇಗೆ ಸರಿಪಡಿಸುತ್ತೀರಿ, ಸಮೀಕ್ಷೆ ಸರಿಯಾಗಿ ಆಗಿಲ್ಲ. ರಾಜ್ಯದ ನಂಬರ್ ಒನ್ ಜನಸಂಖ್ಯೆ ಮುಸ್ಲಿಂ ಅಂತ ಹೇಳಿದ್ದಾರೆ. ಹಾಗಾದ್ರೆ ಅವರು ಹೇಗೆ ಮೈನಾರಿಟಿ ಆಗುತ್ತಾರೆ?. ನಿಮ್ಮ ವರದಿ ಪ್ರಕಾರ ಮುಸ್ಲಿಮರು ನಿಜವಾದ ಅಲ್ಪಸಂಖ್ಯಾತರು ಅಲ್ಲ. ಅವರು ಬಹುಸಂಖ್ಯಾತರು, ಅವರನ್ನು ಅಲ್ಪಸಂಖ್ಯಾತ ಮಾನ್ಯತೆಯಿಂದ ತೆಗೆಯಿರಿ. ಸರ್ಕಾರ ನಿಜವಾದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ. ರಾಜ್ಯದಲ್ಲಿ ಜಾತಿ ವಿಷ ಭಾವನೆ ಬಿತ್ತುತ್ತಿದ್ದೀರಾ?. ಜಾತಿ ಜಾತಿಗಳ ನಡುವೆ ಜಂಗೀ ಕುಸ್ತಿ ಆಡಿಸಲು ಹೊರಟಿದ್ದೀರಾ?. ಜಾತಿ ಮೇಲಾಟ ಆಡಿಸುತ್ತಿದ್ದೀರಾ?.ಹಿಂದುಳಿದವರಿಗೆ, ತುಳಿತಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು ಅಂದರೆ ಮರು ಸಮೀಕ್ಷೆ ಮಾಡಿಸಿ.ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ, ಆಗ ಸಮಗ್ರ ಚರ್ಚೆ ಮಾಡೋಣ ಎಂದಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಮನೆ ಮನೆ ಸಮೀಕ್ಷೆಯನ್ನು ನಡೆಸಿಲ್ಲ. ಅವರು ಕಾಂತರಾಜು ವರದಿ ಇಟ್ಟುಕೊಂಡು ಸಮೀಕ್ಷೆ ಕೊಟ್ಟಿದ್ದಾರೆ.ನಿಮ್ಮ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ. ಎಲ್ಲೆಲ್ಲಿ ಸಮೀಕ್ಷೆ ಹೋಗಿದ್ದರು, ವರದಿ ಎಷ್ಟು ವೈಜ್ಞಾನಿಕ ಅಂತ ಚರ್ಚೆ ಆಗಲಿ ಎಂದ್ರು. ಚುನಾವಣಾ ಆಯೋಗ ಬಗ್ಗೆ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ರಾಹುಲ್ ಗಾಂಧಿ ಇತ್ತೀಚೆಗೆ ಏನೇನೋ ಮಾತಾಡುತ್ತಿದ್ದಾರೆ. ಅಮೇಥಿಯಲ್ಲಿ ಗೆದ್ರಲ್ಲಾ ನೀವು, ಅಲ್ಲಿ ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡಿತ್ತಾ?. ನೀವು ಗೆದ್ದರೆ ಆಯೋಗದ ಕೆಲಸ ಪಾರದರ್ಶಕ, ಸೋತರೆ ಪಾರದರ್ಶಕ ಅಲ್ವಾ?.ರಾಹುಲ್ ಗಾಂಧಿ ಹೇಳಿಕೆಯನ್ನು ಅವರ ಪಕ್ಷದವರೇ ಗಂಭೀರವಾಗಿ ತೆಗೆದುಕೊಳ್ಳಲ್ಲ. ದೇಶದ ಸಂವಿಧಾನ ಸಂಸ್ಥೆಗಳ ವಿರುದ್ಧ ವಿದೇಶದಲ್ಲಿ ಅಪಪ್ರಚಾರ ಮಾಡಿದ್ದಾರೆ. ದೇಶದ ಬಗ್ಗೆ ಹೊರಗೆ ಅಪಪ್ರಚಾರ ಮಾಡುವುದು ಕಾಂಗ್ರೆಸ್ ನ ಹಳೆಯ ಕಾಯಿಲೆ, ಅದು ವಾಸಿಯಾಗದ ಕಾಯಿಲೆ.ವಿದೇಶದಲ್ಲಿ ಹೋಗಿ ಹೀಗೆ ಮಾತಾಡುವ ರಾಹುಲ್ ಗಾಂಧಿಯನ್ನು ಜನ ಏನು ಸ್ಟೇಟ್ಸ್‌ಮನ್ ಅಂತಾರಾ?. ರಾಹುಲ್ ಗಾಂಧಿ ಹೀಗೆ ಮಾತಾಡಿದ್ದಾರೆ ಅಂದರೆ ಜನ ಕ್ಯಾಕರಿಸಿ ಉಗಿಯುತ್ತಾರೆ ಎಂದರು