ಮನೆ Latest News ಕೆಲವೇ ಹೊತ್ತಲ್ಲಿ ಸಿ ಟಿ ರವಿ ಜಾಮೀನು ಭವಿಷ್ಯ ನಿರ್ಧಾರ

ಕೆಲವೇ ಹೊತ್ತಲ್ಲಿ ಸಿ ಟಿ ರವಿ ಜಾಮೀನು ಭವಿಷ್ಯ ನಿರ್ಧಾರ

0

ಬೆಂಗಳೂರು; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಿಕ  ಪದ ಬಳಕೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಅರೆಸ್ಟ್ ಅವರನ್ನು ಮಾಡಲಾಗಿತ್ತು.

ತಮ್ಮ ವಿರುದ್ಧ ಸಿ ಟಿ  ರವಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಎಫ್ ಐ ಆರ್ ದಾಖಲಾಗಿತ್ತು. ಅದರಂತೆ ಸಿ ಟಿ ರವಿ ಅವರನ್ನು ಅರೆಸ್ಟ್ ನಿನ್ನೆ ಬಂಧಿಸಲಾಗಿತ್ತು.  ಸಿ ಟಿ ರವಿ ಅವರ ವಿರುದ್ಧ ಹಿರೇ ಬಾಗೇವಾಡಿ ಠಾಣೆಯಲ್ಲಿ BNS 75 ಮತ್ತು 79ರಡಿ ಕೇಸ್ ದಾಖಲು ಆಗಿತ್ತು.

ಅದರಂತೆ ಸಿ ಟಿ ರವಿ ಅವರು ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲ ಹೊತ್ತಿನಲ್ಲೇ ಸಿ.ಟಿ. ರವಿ ಅರ್ಜಿ ವಿಚಾರಣೆ ನಡೆಯಲಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ‌ಸಿ.ಟಿ. ರವಿ ಪರ ಅಶೋಕ್‌ ಹಾರನಹಳ್ಳಿ ವಾದಿಸಲಿದ್ದಾರೆ. ನ್ಯಾ. ಸಂತೋಷ್‌ ಗಜಾನನ ಭಟ್‌ ಪೀಠದಲ್ಲಿ ವಿಚಾರಣೆ ನಡೆಯಲಿದೆ.

ಸಿ ಟಿ ರವಿ ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಆಗಬೇಕು : ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಹೇಳಿಕೆ

ಬೆಳಗಾವಿ;  ಸಿ ಟಿ ರವಿ ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಆಗಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚನ್ನರಾಜ ಹಟ್ಟಿಹೋಳಿ ಹೇಳಿಕೆ ನೀಡಿದ್ದಾರೆ. ಪೊಲೀಸರು ಅವರ ಕ್ರಮ ತೆಗೆದುಕೊಂಡಿರುತ್ತಾರೆ. ಬಿಜೆಪಿಯವರಿಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಪ್ರಬುದ್ದ ರಾಜಕಾರಣಿ. ಅವರ ಸ್ಥಾನದ ಘನತೆ ಗೌರವ ಅವರಿಗೆ ಗೊತ್ತಿದೆ. ಪದೇ ಪದೇ ನಮ್ಮ ರಾಷ್ಟ್ರೀಯ ನಾಯಕರನ್ನು ಸಿಟಿ ರವಿ ದೂಷಿಸಿದ್ರು. ಆಗ ಹೆಬ್ಬಾಳ್ಕರ್ ನೀನು ಅಮಾಯಕರನ್ನು ಕೊಂದಿದ್ದೀಯಪ್ಪ ಅಂದಿದ್ದಾರೆ. ಆದರೆ ಸಿಟಿ ರವಿ ಮಹಿಳಾ ಮಂತ್ರಿಗೆ ನಿಂದಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ.

ತಾಯಿಯ ಸ್ಥಾನಕ್ಕೆ ಗೌರವ ಕೊಡಬೇಕು. ಯಾವುದೇ ಷರತ್ತಿಲ್ಲದೇ ಕ್ಷಮೆ ಕೋರಬೇಕು. ಪೊಲೀಸ್ ಇಲಾಖೆ ಇಂಥ ಪರಿಸ್ಥಿತಿಗಳನ್ನು ತುಂಬಾ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡ್ತಾರೆ. ಕಾನೂನು ಕಾಪಾಡಲು ಪೊಲೀಸರ ಕ್ರಮ ತೆಗೆದುಕೊಂಡಿರಬಹುದು. ಬಿಜೆಪಿಯವರಿಗೆ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಈಗಲೂ ಕೂಡ ಪೊಲೀಸರ ವಿರುದ್ದ ಸುಳ್ಳು ಹೇಳ್ತಿದ್ದಾರೆ. ಸಭಾಪತಿಗಳ ಮುಂದೆ ಕೂಡ ಸಿಟಿ ರವಿ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಬಹಳ‌ ನೋವಲ್ಲಿದ್ದಾರೆ. ಈಗಲೂ ಕೂಡ ಅವರಿಗೆ ನಂಬೋದಕ್ಕೆ ಸಾಧ್ಯ ಆಗ್ತಿಲ್ಲ. ಒಬ್ಬ ಸದಸ್ಯರ ಬಗ್ಗೆ ಸದನದ ಒಳಗೆ ಹೀಗೆ ಮಾತನಾಡಿದ ಬಗ್ಗೆ ನೋವಾಗಿದೆ. ಬಿಜೆಪಿಯವರು ಇದನ್ನ ಸಮರ್ಥನೆ ಮಾಡಿಕೊಳ್ತಿದ್ದಾರೆ. ಬಿಜೆಪಿ ಹೇಳಿ ಬಿಡಲಿ ಸಿಟಿ ರವಿ ಮಾತನಾಡಿದ್ದು ಸರಿಯಿದೆ ಅಂತ. ಅವರು ಬಳಕೆ ಮಾಡಿದ ಪದ ಸರಿ ಇದೆ ಅಂತ ಆರ್ ಅಶೋಕ್ ವಿಜಯೇಂದ್ರ ಸಮರ್ಥನೆ ಮಾಡಿಕೊಳ್ತಿದ್ದೀರಾ ಅಂತ ಉತ್ತರ ಕೊಡಿ ಎಂದಿದ್ದಾರೆ.