ಬೆಂಗಳೂರು: ನಾಳೆ ಸಂಜೆಯೊಳಗೆ ಸಮೀಕ್ಷೆ ಮುಗಿಯುವ ಭರವಸೆಯಿದೆ ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು ನಾನೊಂದು ಸಲ ಲೋಕಸಭೆಗೆ ನಿಂತಿದ್ದೆ. ಆದ್ರೆ ಸೋಲಿಸಿ ಬಿಟ್ರು,ಆದ್ರು ಜನ ಕಡಿಮೆ ಅಂತರದಿಂದ ಸೋಲಿಸಿದ್ರು. ಕೊಪ್ಪಳ ಜಿಲ್ಲೆಯ ಜನತೆಗೆ ಧನ್ಯವಾದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಲ್ಡೋಟಾ ಕಾರ್ಖಾನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದಿನ್ನು ಕೋರ್ಟ್ ನಲ್ಲಿದೆ ನೋಡೋಣ ಎಂದು ಸಿಎಎಂ ಸಿದ್ದರಾಮಯ್ಯ ಹೇಳಿದ್ರು. ಮೇಲ್ಜಾತಿ ತುಳಿಯಲು ಸಮೀಕ್ಷೆ ಮಾಡತೀದಾರೆ ಎಂದು ಸೋಮಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಂಕಿ ಅಂಶ ಬೇಕೋ ಬೇಡ್ವೋ. ಯಾರನ್ನು ತುಳಿಯೋ ಪ್ರಶ್ನೆ ಇಲ್ಲ,ಸಮ ಸಮಾಜ ನಿರ್ಮಾಣ ಮಾಡಬೇಕು.
ಸಮೀಕ್ಷೆ ನಾಳೆ ಮುಗಿಯತ್ತೆ ಅನ್ನೋ ವಿಶ್ವಾಸ ಇದೆ..
ನಾಳೆ ಸಾಯಂಕಾಲದ ವರೆಗೂ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಎರಡು ದಿನಗಳಲ್ಲಿ ಮುಗಿಬಹುದು.
ಕೊಪ್ಪಳ ಜಿಲ್ಲೆಯಲ್ಲಿ 97 ಪರ್ಸೆಂಟ್ ಸಮೀಕ್ಷೆ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜೋಶಿ ಕೇಂದ್ರ ಮಂತ್ರಿ ಅವರು ಜಾತಿ ಗಣತಿ ವಿರೋಧ ಮಾಡ್ತಾರಾ? ಬದಲಾವಣೆ ಬೇಡ ಅಂದವರು ಸಮೀಕ್ಷೆ ವಿರೋಧ ಮಾಡ್ತಾರೆ ಎಂದ್ರು.
ಕೆಮ್ಮಿನ ಔಷಧಿ ಕುರಿತು ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ ಎಂದು ಸಿಎಂ ಇದೇ ವೇಳೆ ತಿಳಿಸಿದ್ದಾರೆ..
ಗ್ಯಾರಂಟಿ ಗಳು ಕೆಲ ತಿಂಗಳು ಬಂದ್ ಆಗಿವೆ ಎಂಬ ಪ್ರಶ್ನೆಗೆ ಸಿಎಂ ಗರಂ ಆದ್ರು. ನಿಮಗೆ ಯಾರ ಹೇಳಿದರು ಎಂದು ಸಿಎಂ ಗರಂ ಆದ್ರು.ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಸಿಎಂ ಗರಂ ಆಗಿದ್ದಾರೆ. ಸಚಿವ ಶಿವರಾಜ್ ತಂಗಡಗಿ ಮೇಲೆ ಸಿಎಂ ಗರಂ ಆಗಿದ್ದಾರೆ. ಅದರಲ್ಲಿ ನನ್ನ ನಿಲುವೇನಿಲ್ಲ ಎಂದು ಗರಂ ಆಗಿದ್ದಾರೆ. ಲಿಂಗಾಯತ ಪ್ರತೇಕ ಧರ್ಮದ ಕೂಗು ಮುನ್ನೆಲೆಗೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಮುನ್ನೆಲೆಯೂ ಇಲ್ಲ,ಹಿನ್ಮಲೆಯೂ ಇಲ್ಲ. ಕೆಲ ವಿರಕ್ತ ಸ್ವಾಮೀಜಿಗಳು ಅದರ ಬಗ್ಗೆ ಮಾತಾಡಟ್ಟಿದ್ದಾರೆ ಎಂದು ಸಿದ್ದು ಹೇಳಿದ್ದಾರೆ.











