ಮನೆ Latest News ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನ ಹಿನ್ನೆಲೆ; ಬಿಎಸ್ ವೈ ಗೆ ಶುಭಾಶಯಗಳ ಮಹಾಪೂರ

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನ ಹಿನ್ನೆಲೆ; ಬಿಎಸ್ ವೈ ಗೆ ಶುಭಾಶಯಗಳ ಮಹಾಪೂರ

0

ಬೆಂಗಳೂರು; ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜನ್ಮದಿನ ಹಿನ್ನೆಲೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಜನ್ಮ ದಿನ ಆಚರಣೆ ಮಾಡಲಾಯಿತು. ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ‌ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಬಿಎಸ್ ವೈ ಹುಟ್ಟುಹಬ್ಬ ಆಚರಣೆ ಮಾಡಿದ್ರು.ಬಿಎಸ್ ವೈ ಗೆ ಶುಭ ಕೋರಲು ಡಾಲರ್ಸ್ ಕಾಲೋನಿ ನಿವಾಸಕ್ಕೆ ಬೆಂಬಲಿಗರು, ಮಾಜಿ ಶಾಸಕರು ಆಗಮಿಸಿದ್ರು. ಬಿಎಸ್ ವೈಗೆ ದೂರವಾಣಿ ಕರೆ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಭ ಕೋರಿದ್ರು.

ಇನ್ನು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕುಟುಂಬದ ಜೊತೆ ಯಡಿಯೂರಪ್ಪ ಪೋಟೋಗೆ ಪೋಸ್ ಕೊಟ್ರು.ಪುತ್ರರು, ಪುತ್ರಿಯರು ಮತ್ತು ಸೊಸೆಯಂದಿರ ಜೊತೆ ಯಡಿಯೂರಪ್ಪ ಗ್ರೂಪ್  ಫೋಟೋ ತೆಗೆಸಿಕೊಂಡ್ರು.ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎನ್. ಜೀವರಾಜ್, ಪ್ರೀತಂ ಗೌಡ ಸೇರಿದಂತೆ ಹಾಲಿ, ಮಾಜಿ ಶಾಸಕರು, ಬೆಂಬಲಿಗರು ಮತ್ತು‌ ಬಿಜೆಪಿ ಕಾರ್ಯಕರ್ತರು ಶುಭಾಶಯ ತಿಳಿಸಿದ್ರು,

ಬಿಎಸ್ ವೈ ಹುಟ್ಟು ಹಬ್ಬಕ್ಕೆ ಮಾಜಿ ಪ್ರಧಾನಿ ದೇವೆಗೌಡ ಶುಭ ಕೋರಿದ್ರು. ಕುಟುಂಬ ಸದಸ್ಯರು ಮತ್ತು ಬೆಂಬಲಿಗರ ಜೊತೆ 83 ಕೆಜಿ ತೂಕದ ಕೇಕ್ ಕತ್ತರಿಸಿ ಬಿ.ಎಸ್. ಯಡಿಯೂರಪ್ಪ ಹುಟ್ಟು ಹಬ್ಬ ಆಚರಿಸಿಕೊಂಡ್ರು. ವಿನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ‌ ಮತ್ತು ಮಾಜಿ ಸಚಿವ ರಾಮಚಂದ್ರೇಗೌಡ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ರು.ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿಯಾಗಿ ಶುಭಾಶಯ ತಿಳಿಸಿದ್ರು.ಇನ್ನು ತಮಟೆ ಬಾರಿಸುತ್ತಾ ಮೆರವಣಿಗೆಯಲ್ಲಿ ಬೆಂಬಲಿಗರ ಜೊತೆ ಬಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಶುಭ ಕೋರಿದ್ರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ ನನಗೆ ಇಂದು 82 ವರ್ಷ ತುಂಬಿ 83ಕ್ಕೆ ಕಾಲಿಟ್ಟಿದ್ದೇನೆ. ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಮಾಡಿ ಒಳ್ಳೆಯದಾಗಲಿ ಅಂತ ಆಶಿಸಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ.ನಾನು ರಾಜ್ಯದ ಸಿಎಂ ಆಗಿ ಕೆಲಸ ಮಾಡುವ ಸೌಭಾಗ್ಯ ರಾಜ್ಯದ ಜನರು ಕೊಟ್ಟಿದ್ದರು. ಎಲ್ಲಾ ಮುಖಂಡರು ಒಂದಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಬೇಕಿದೆ.ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷ ಅಧಿಕಾರಕ್ಕೆ ತರಬೇಕು. ಈಗಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು.ಯಡಿಯೂರು ಸಿದ್ದಲಿಂಗೇಶ್ವರ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತೇನೆ‌.ಭ್ರಷ್ಟ ಸರ್ಕಾರ ಕಿತ್ತೊಗೆದು, ಬಿಜೆಪಿ ಅಧಿಕಾರಕ್ಕೆ ತರಬೇಕಿದೆ‌.ಈ ಸಂಧರ್ಭದಲ್ಲಿ ಬೇರೆ ರಾಜಕೀಯ ವಿಚಾರ ಮಾತನಾಡಲು ಹೋಗುವುದಿಲ್ಲ.ಅಮಿತ್ ಶಾ ಅವರು ಬೆಳಗ್ಗೆ ಕರೆ ಮಾಡಿದ್ದರು ಎಂದರು.

ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

ಬೆಂಗಳೂರು; ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಬಳಿಕ ಮಾತನಾಡಿದ ಅವರು ಇಂದು ಯಡಿಯೂರಪ್ಪನವರ ಜನ್ಮ ದಿನ. ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ.ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹೋರಾಟ ಮಾಡುತ್ತಿದ್ದಾರೆ.ಮತ್ತೆ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರುತ್ತೇವೆ.ಅವರಿಗೆ ಅನಂತ ಅನಂತ ಅಭಿನಂದನೆಗಳು ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ ಜನ ಮೆಚ್ಚಿದ ನಿಜವಾದ ನಾಯಕ ಇದ್ದರೆ ಯಡಿಯೂರಪ್ಪ. ಹಲವಾರು ಹೋರಾಟ ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗ ಅವೆಲ್ಲವನ್ನೂ ಪರಿಶೀಲಿಸಿದರು. ಕೆಳ ಸ್ತರದ ಬಡವರನ್ನು ಮೇಲೆತ್ತುವ ಕೆಲಸ ಮಾಡಿದರು ಎಂದರು. ಇನ್ನು  ಯಡಿಯೂರಪ್ಪ ಅವರಿಗೆ ಬೆಂಬಲಿಗರು. ಬೃಹತ್ ಹಾರ ಹಾಕಿ ಶುಭಾಶಯ ಕೋರಿ, ಗೋ ಶಾಲೆಗಳಿಗೆ ಮೇವು ಕಳುಹಿಸಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ ರಾಜಕೀಯದಲ್ಲಿ ಯಡಿಯೂರಪ್ಪ ನಡೆದಿದ್ದೇ ದಾರಿ.ಯಡಿಯೂರಪ್ಪ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ್ದೇವೆ. ರೈತ ಬೆಳೆಯುವ ಎಲ್ಲಾ ಬೆಳೆಗಳಿಗೆ ಧನ ಸಹಾಯ ನೀಡಿದ್ದರು.ಗೋ ಶಾಲೆಗಳಿಗೆ ಸರ್ಕಾರ ಮೇವು ನೀಡುತ್ತಿಲ್ಲ. ಹಾಗಾಗಿ ಗೋ ಶಾಲೆಗೆ ಹುಲ್ಲನ್ನು ಕಳಿಸಲಾಗುತ್ತಿದೆ ಎಂದರು. ಬಿಜೆಪಿ ರೈತ ಮೋರ್ಛಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ ತಾಲ್ಲೂಕಿನಲ್ಲಿ ಒಂದು ಗೋ ಶಾಲೆ ಆರಂಭಿಸಲು ಯಡಿಯೂರಪ್ಪ ಚಾಲನೆ ನೀಡಿದ್ದರು. ಅತ್ಯಂತ ಪ್ರಾಮಾಣಿಕ ರೈತ ನಾಯಕ ಯಡಿಯೂರಪ್ಪ.ನನ್ನ ಸಲಹೆ ಮೇರೆಗೆ ಗೋ ಶಾಲೆಗಳಿಗೆ ಯಡಿಯೂರಪ್ಪ ಹೆಸರಿನಲ್ಲಿ ಎಲ್ಲಾ ಗೋ ಶಾಲೆಗಳಿಗೆ ಮೇವು ಕಳಿಸಲಾಗುತ್ತಿದೆ. ಗೋ ಶಾಲೆಗೆ ಮೇವು ರದ್ದು ಮಾಡುವ ಕೆಲಸ ಸರ್ಕಾರ ಮಾಡಿದೆ.ಹಾಗಾಗಿ ಯಡಿಯೂರಪ್ಪ ಹೆಸರಿನಲ್ಲಿ ಮೇವು ಕಳಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಕೆ. ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ಎಂ. ಕೃಷ್ಣಪ್ಪ, ಡಾ. ಅಶ್ವಥ್ ನಾರಾಯಣ, ಮುನಿರತ್ನ ಸೇರಿದಂತೆ ಹಲವರಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ರು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬದ ಶುಭಾಶಯ ಕೋರಿದ್ರು.