ಮೈಸೂರು: ಕಾಂಗ್ರೆಸ್ ಅವಧಿಯಲಿ ಲಂಚ ಶೇ.60 ತಲುಪಿದೆ; ಕಾಂಗ್ರೆಸ್ ಅವಧಿಯಲಿ ಲಂಚ ಶೇ.60 ತಲುಪಿದೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದg ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮನೆ ಹಂಚಿಕೆಯಲ್ಲೂ ಲಂಚ ಪಡೆಯಲಾಗುತ್ತಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದರು ಈಗ ವಿಧಾನಸೌಧಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವ ಜಯತೇ ಬಗ್ಗೆ ಮತ್ತೆ ಹೆಚ್ ಡಿ ಕೆ ವ್ಯಂಗ್ಯವಾಡಿದ್ದಾರೆ. ಸತ್ಯಮೇವ ಜಯತೇಯಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರಾ ?. ಅವರ ಆತ್ಮಕ್ಕೆ ಅವರು ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ಲವಾ ? ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಇದನ್ನು ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಕಾಂಗ್ರೆಸ್ ಪರ ಗುತ್ತಿಗೆದಾರರು. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಬೆಲೆ ತರಬೇಕಾಗುತ್ತದೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ ಕೆ ಭವಿಷ್ಯ ನುಡಿದಿದ್ದಾರೆ.
ಸಂಕ್ರಾತಿ ಮುಗಿಯೋವರೆಗೂ ನಾನು ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಲ್ಲ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ
ಬೆಂಗಳೂರು; ಸಂಕ್ರಾತಿ ಮುಗಿಯೋವರೆಗೂ ನಾನು ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಗುತ್ತಿಗೆದಾರ ಸತೀನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅದು ಯಾವ್ದು ಕಲಬುರಗಿ ಕೇಸ್. ನಾನು ಯಾರ ಮೇಲೆ ದೋಷ ಕೊಡಲ್ಲ. ಈ ವ್ಯವಸ್ಥೆಯನ್ನ ಯಾವ ಮಟ್ಟಕ್ಕೆ ತೆಗೆದುಕೊಂಡ ಹೋಗ್ತಾ ಇದ್ದೀರಾ. ಈ ಸರ್ಕಾರ ಬಂದ ಮೇಲೆ ಎಷ್ಟು ಆತ್ಮಹತ್ಯೆ ಆಯ್ತು. ಯಾಕೆ ಈ ರೀತಿ ಆತ್ಮಹತ್ಯೆಗಳು ಆಗ್ತಾ ಇದೆ. ಆತ್ಮಹತ್ಯೆಗಳಾದಾಗ ಡೆತ್ ನೋಟ್ ಗಳಲ್ಲಿ ಏನು ಬರೆದಿದ್ದಾರೆ. ಸರ್ಕಾರ ಪಾತ್ರಗಳ ಬಗ್ಗೆನೇ ಬರೆದಿದ್ದಾರೆ. ಯಾರು ಇದ್ದಾರೆ ಯಾರು ಇಲ್ಲ ಅನ್ನೊದನ್ನ ಮುಂದೆ ನೋಡೋಣ.ಈಗ ಸರ್ಕಾರದ ಮಂತ್ರಿಗಳ ಬಗ್ಗೆ ನಿಮ್ಮ ಇಲಾಖೆಯಿಂದ ಸತ್ಯಾಂಶ ಹೊರಗೆ ತೆಗೆಯೋಕೆ ಸಾಧ್ಯ. ಅಲ್ಲಿ ಯಾವನೋ ರಮೇಶ್ ಗೌಡ ಊಟಕ್ಕೆ ಹೋಗಿ ಕುಮಾರಸ್ವಾಮಿ ಗೆ ಪೋನ್ ಕೊಟ್ನಂತೆ. ಕುಮಾರಸ್ವಾಮಿ ೫೦ ಕೋಟಿ ಕೇಳಿದ್ನಂತೆ. ಅದು ಒಂದು ಕುಮಾರಸ್ವಾಮಿ ಮೇಲೆ ಕಂಪ್ಲೀಟ್ ಅಂತೆ ಏನಿದು ಸರ್ಕಾರದ್ದು ಎಂದು ಪ್ರಶ್ನೆ ಮಾಡಿದ್ದಾರೆ.
ಉದ್ದೇಶಪೂರ್ವಕವಾಗಿ ಹೆಚ್ ಡಿಕೆ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಬಹಳ ವಿಷಯ ಚರ್ಚೆ ಮಾಡೋಕೆ ಇದೆ. 15 ನೇ ತಾರೀಖುವರೆಗೆ ನಾನು ಈ ವಿಷಯಗಳ ಬಗ್ಗೆ ಚರ್ಚೆ ಮಾಡಲ್ಲ. ಸಂಕ್ರಾಂತಿ ಮುಗಿಯಲಿ ಎಂದರು. ಇದೇ ವೇಳೆ ಆಪರೇಷನ್ ಹಸ್ತದ ಬಗ್ಗೆ ಶಾಸಕ ಜಿ.ಟಿ.ಹರೀಶ್ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ಯಾವುದು ವರ್ಕ್ಔಟ್ ಆಗಲ್ಲ ಬಿಡಿ. ಆಪರೇಷನ್ ಹಸ್ತ ಜೆಡಿಎಸ್ ನ ಮುಗಿಸಬೇಕು ಅಂತ ಹೇಳಿ. ೧೨ ಜನ ರನ್ನ ೧೩ ಜನರನ್ನ ಕರೆದುಕೊಂಡು ಬನ್ನಿ ಅಂತ ನಡೆಯುತ್ತಿರೋದು ಗೊತ್ತಿದೆ ನನಗೆ. ಅದರೆ ಯಾವ ಶಾಸಕರು ಹೋಗುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ಏನ್ ಏನ್ ಮಾಡ್ತಾ ಇದ್ದಾರೆ ಗೊತ್ತಿದೆ. ಕಾಂಗ್ರೆಸ್ ನವರ ಪಾಪದ ಕೊಡ ತುಂಬಿದೆ. ದೇವರೇ ಅವರಿಗೆ ಶಿಕ್ಷೆ ಕೊಡ್ತಾರೆ ಅಂತ ನನಗೆ ನಂಬಿಕೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.