ನವದೆಹಲಿ: ಮೊನ್ನೆ ಈದ್ ಮಿಲಾದ್ ಶಾಂತಿಯುತವಾಗಿ ನಡೆದಿದೆ, ಗಣೇಶ ಹಬ್ಬ ಬಂದಾಗ ಮಾತ್ರ ಹೀಗ್ಯಾಕೆ? ಎಂದು ಸಂಸದ ಬಸವರಾಜ್ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದಾರೆ.
ನವದೆಹಲಿಯಲ್ಲಿ ಮದ್ದೂರು ಕಲ್ಲು ತೂರಾಟ ಪ್ರಕರಣದ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹೊಲಿಕೆಯ ರಾಜಕರಣದ ಪರಿಣಾಮವಾಗಿ ಸಮಾಜಘಾತುಕದ ಶಕ್ತಿ ಗಳಿಗೆ ಕಾನೂನು ಪೊಲೀಸರ ಭಯ ಇಲ್ಲ. ಏನಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಅಂತಾ ಹೀಗೆ ಮಾಡ್ತಿದ್ದಾರೆ. ಸಂವಿಧಾನದ ಪ್ರಕಾರ ಎಲ್ಲಾ ಆಗಬೇಕು. ಸಿದ್ದರಾಮಯ್ಯ ಮಾತು ಎತ್ತಿತ್ತದರೆ ಸಂವಿಧಾನ ಅಂತಾರೆ. ಮೊನ್ನೆ ಈದ್ ಮಿಲಾದ್ ಶಾಂತಿಯಿಂದ ಆಯ್ತು.ಗಣೇಶ ಹಬ್ಬ ಬಂದಾಗ ಹೀಗೆ ಆಗ್ತಿದೆ. ಕಾನೂನು ಸುವ್ಯವಸ್ಥೆ ಎಲ್ಲರಿಗೂ ಒಂದೆ ಇರಬೇಕು ಅಲ್ವಾ ಎಂದು ಪ್ರಶ್ನಿಸಿದ್ದಾರೆ.
ಅವರಿಗೆ ಭಯ ಇಲ್ಲ ಅದಕ್ಕೆ ಹೀಗೆ ಆಗ್ತಿದೆ. ನಿನ್ನೆ ಮೆರವಣಿಗೆ ಪಾಸ್ ಆಗಲು ಬಿಡಬೇಕಿತ್ತು. ಮಂಡ್ಯದಲ್ಲಿ ಪ್ರತಿ ವರ್ಷ ಹಿಗೆ ಆಗ್ತಿದೆ. ಇದು ಪೊಲೀಸರ ಫೆಲ್ಯೂರ್. ಮನೆಗಳ ಮೇಲೆ ಕಲ್ಲು ಸಂಗ್ರಹಿಸಿ ತೂರಾಟ ಮಾಡಿದ್ದಾರೆ. ಕೆಲವರನ್ನ ಬಂಧಿಸಿದ್ದಾರೆ,ಅವರನ್ನು ಬಂಧಿಸಿಲ್ಲ. ರಾಜ್ಯ ಸರ್ಕಾರ ಪೊಲೀಸರು ಸಮರ್ಪಕವಾಗಿ ನಿಭಾಯಿಸಿಲ್ಲ. ಸಮಾಜದಲ್ಲಿ ಬಹಳ ಕೆಟ್ಟ ರೀತಿಯಲ್ಲಿ ಆಗುವ ಪರಿಸ್ಥಿತಿ ಆಗಲಿದೆ. ಗೃಹ ಸಚಿವರು ಬಹಳ ಲಘುವಾಗಿ ಮಾತಾಡಿದ್ದಾರೆ,ಇದನ್ನ ಲಘುವಾಗಿ ಪರಿಗಣಿಸಬಾರದು. ಯಾರು ತಪ್ಪು ಮಾಡಿದ್ದಾರೋ ಒದ್ದು ಒಳಗಡೆ ಆಗಬೇಕು. ಇಂದು ಪ್ರತಿಭಟನೆ ಮಾಡಿದಾಗಲೂ ಹೀಗೆ ಆಗಿದೆ. ಕಲ್ಲು ಸಂಗ್ರಹ ಆಗಿದ್ದು ಯಾಕೆ,ಅಲ್ಲಿವರೆಗೂ ಏನ್ ಮಾಡ್ತಿದ್ದರು.ಕಲ್ಲು ತೂರಾಟ ಯಾಕೆ ಮಾಡಿದ್ರು ಹಾಗಾದ್ರೆ ಯಾರು ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ.
ಡಿಜೆ ಹಳ್ಳಿ ಕೆಜೆ ಹಳ್ಳಿ ಕೇಸ್ ಏನಾಯ್ತು. ಅವರು ಅಮಾಯಕರು ಅಂತಾ ರಕ್ಷಣೆ ನೀಡಿ ಕೇಸ್ ವಾಪಸ್ ತೆಗೆದುಕೊಂಡಿರೋದು ಕೂಡ ಇದಕ್ಕೆ ಪುಷ್ಟಿ ಕೊಡುತ್ತೆ. ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಈ ರೀತಿ ಚೆಲುವರಾಯಸ್ವಾಮಿ ಹೇಳಿದ್ದಾರೆ. ಕಲ್ಲು ತೂರಾಟ ಮಾಡಲು ಬಿಟ್ಟು ಹೀಗೆ ಹೇಳಿದ್ರೆ ಬಿಜೆಪಿ ಸುಮ್ಮನೆ ಇರಲ್ಲ. ಇದಕ್ಕೆ ನೇರ ಕಾರಣ ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಹೆದರಿಸಲು ಆಗದೇ ಹೀಗೆ ಮಾಡ್ತಿದ್ದಾರೆ ಅಂತಾ ಬಿಜೆಪಿ ಮೇಲೆ ಆರೋಪದ ಬಗ್ಗೆ ಮಾತನಾಡಿದ ಅವರು ಇಂದು ಚುನಾವಣೆ ನಡೆದರೂ ಕಾಂಗ್ರೆಸ್ ಸರ್ಕಾರ ಬರಲ್ಲ,ಜನರು ಬುದ್ದಿ ಕಲಿಸುತ್ತಾರೆ. ಹೀಗೆ ಮಾಡ್ತಿದ್ದರೇ ಬಿಜೆಪಿ ಹೋರಾಟ ಮಾಡುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.











