ಬೆಂಗಳೂರು; ಹುಬ್ಬಳ್ಳಿ ಗಲಭೆ ಕೇಸ್‌ಗಳು ವಾಪಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯವರಿಗೆ ಕಾಮಾಲೆ ಕಣ್ಣು, ಕಾಣೋದೆಲ್ಲ ಹಳದಿ.ಅವರಿಗೆ ಗ್ರೀನೂ ಕಾಣಲ್ಲ, ಬ್ಲ್ಯೂ ನೂ ಕಾಣಲ್ಲ.ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡೋದು ಸರಿಯಲ್ಲ.ಕೇಸ್ ಗಳನ್ನು ವಾಪಸ್ ಪಡೆಯಲು ಯಾರಾದರೂ ಮನವಿ ಮಾಡ್ತಾರೆ.ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ಮಾಡ್ತೇವೆ, ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೇಳ್ತೇವೆ.ನಂತರ ಸಂಪುಟ ಉಪ ಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ವಾಪಸ್ ತಗೋಬೇಕಾ ಬೇಡವಾ ಅಂತ ಉಪಸಮಿತಿ ನಿರ್ಧರಿಸುತ್ತೆ.ಹುಬ್ಬಳ್ಳಿ ಕೇಸ್ ಗಳೂ ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಅಂತ ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.ನಂತರ ಸಂಪುಟ ಸಭೆಯಲ್ಲಿ ಕೇಸ್ ಗಳನ್ನು ವಾಪಸ್ ಪಡೆಯುವ ನಿರ್ಧಾರ ಆಗಿದೆ.ಇದನ್ನು ಕೋರ್ಟಿಗೆ ಕಳಿಸ್ತೇವೆ, ಕೋರ್ಟ್ ಒಪ್ಪಿಕೊಂಡರೆ ಆ ಕೇಸ್ ಗಳು ವಾಪಸ್ ಆಗ್ತವೆ.ಇದನ್ನು ಬಿಜೆಪಿ ರಾಜಕೀಯ ಮಾಡ್ತಿದೆ.ಬಿಜೆಪಿ ಇದ್ದಾಗಲೂ ಹಲವು ಕೇಸ್ ಗಳನ್ನು ವಾಪಸ್ ಪಡೆದಿತ್ತು.ಯುಪಿಯಲ್ಲಿ ಅಲ್ಲಿನ ಸಿಎಂ ವಿರುದ್ಧವೇ ಹಲವು ಕೇಸ್ ಗಳಿದ್ವು, ಅದನ್ನೆಲ್ಲ ಅವರು ವಾಪಸ್ ಪಡ್ಕೊಂಡ್ರು.ಈಗ ಹುಬ್ಬಳ್ಳಿ ಕೇಸ್ ಗಳನ್ನು ವಾಪಸ್ ಪಡೆಯಲು ಕೋರ್ಟ್ ಒಪ್ಪುತ್ತೋ ಇಲ್ವೋ ಗೊತ್ತಿಲ್ಲ.ನಿಯಮಾನುಸಾರ ಕೇಸ್ ಗಳನ್ನು ವಾಪಸ್ ಪಡೆಯಬಹುದು ಎಂದಿದ್ದಾರೆ.
ಒಟ್ಟು 56 ಕೇಸ್ ಗಳಲ್ಲಿ 43 ಕೇಸ್ ಗಳನ್ನು ವಾಪಸ್ ಪಡೆಯುವ ತೀರ್ಮಾನ ಆಗಿದೆ.೪೩ ಕ್ಕೆ ೪೩ ಕೇಸುಗಳೂ ಅಲ್ಪಸಂಖ್ಯಾತರದ್ದಲ್ಲ, ಅದರಲ್ಲಿ ಎಲ್ಲರೂ ಸೇರಿದ್ದಾರೆ.ಬಿಜೆಪಿ ಎಲ್ಲವನ್ನೂ ರಾಜಕೀಯ ಮಾಡಲು ಹೋಗ್ತಿದೆ ಅದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ವಾಪಸ್ಸು ಪಡೆದ ವಿಚಾರ; ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ ಎಂದ ಛಲವಾದಿ ನಾರಾಯಣಸ್ವಾಮಿ ಹೇಳಿಕೆ
ಬೆಂಗಳೂರು; ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ವಾಪಸ್ಸು ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಮಾಡಿದವರು ಹಾಗೂ ಕ್ರಿಮಿನಲ್ ಗಳ ಮೇಲೆ ಸರ್ಕಾರ ಕೇಸ್ ದಾಖಲು ಮಾಡಿತ್ತು. ಇವಾಗ ಒಂದು ಸಮುದಾಯ ವನ್ನು ಓಲೈಕೆ ಮಾಡಲು, ಎಲ್ಲಾ ಕೇಸ್ ವಾಪಸ್ಸು ಪಡೆದಿದ್ದಾರೆ.ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ಆರ್ಗನೈಸಡ್ ಕ್ರೈಮ್ ಮಾಡಿರೋ ಕೇಸ್ ವಾಪಸ್ಸು ಪಡೆದಿರೋದು ಕೂಡ ಸರ್ಕಾರದ ಆರ್ಗನೈಸ್ ಕ್ರೈಮ್. ಹೀಗಾಗಿ ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇದರ ಬಗ್ಗೆ ಜನರಿಗೆ ತಿಳಿಸಲು ಹೋರಾಟ ಮಾಡುತ್ತೇವೆ. ಇದರ ಬಗ್ಗೆ ನಾವು ಕೋರ್ಟ್ ನಲ್ಲಿ ಅಬ್ಜೆಕ್ಷನ್ ಅರ್ಜಿ ಹಾಕುತ್ತೇವೆ.ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿನ ಹಿಂದು ಕಾರ್ಯಕರ್ತರ ಮೇಲೆ ಯಾಕೇ ಕೇಸ್ ವಾಪಸ್ಸು ತಗೊಂಡಿಲ್ಲ..? ಅವ್ರು ಕ್ರಿಮಿನಲ್ ಗಳು, ಇವ್ರು ಕ್ರಿಮಿನಲ್ ಗಳು ಅಲ್ವಾ..? ಜನರನ್ನು ಕೆರಳಿಸುವ ಕೆಲಸ ಮಾಡಿ, ಮುಡಾ, ವಾಲ್ಮೀಕಿ ಹಗರಣ ಡೈವರ್ಟ್ ಮಾಡ್ತಿದ್ದೀರಿ. ನಾನು ಇವತ್ತು ಕೇಂದ್ರದ ಕಾನೂನು ಸಚಿವರಿಗೂ ಪತ್ರ ಬರೆಯುತ್ತಿದ್ದೇನೆ.ಈ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಅಂತಾ.ಕೇಂದ್ರ ಸರ್ಕಾರ ತಕ್ಷಣ ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ತಗೊಬೇಕು. ಪ್ರಧಾನ ಮಂತ್ರಿ ಗಳು, ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರಪತಿ ಗಳಿಗೂ ಗಮನ ಸೆಳೆಯಲು ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದ್ದಾರೆ.