ಮನೆ Latest News ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಮಾಡೋರು; ಸಿಎಂ ಸಿದ್ದರಾಮಯ್ಯ ಹೇಳಿಕೆ

ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಮಾಡೋರು; ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು: ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಮಾಡೋರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. : ಇಂದು ಹಸಿರು ಕ್ರಾಂತಿ ಪಿತಾಮಹ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ೧೧೮ನೇ ಜನ್ಮದಿನ ಹಿನ್ನೆಲೆ ವಿಧಾನಸೌಧದ ಬಾಬು ಜಗಜೀವನ್ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಮಾಡೋರು ಎಂದಿದ್ದಾರೆ.

ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಯವರ ಡಿಮ್ಯಾಂಡ್ ಗೆಲ್ಲಾ ನಾವು ಉತ್ತರ ಕೊಡೋಕೆ ಆಗಲ್ಲ. ಬಿಜೆಪಿ ಯವರು ಹತಾಶರಾಗಿದ್ದಾರೆ ಅಷ್ಟೇ. ವಿನಯ್ ಸಾವಿನ ಸಂಬಂಧ ಎಫ್ಐರ್ ಆಗಿದೆ. ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ. ತನಿಖೆ ನಡೆಯುವಾಗ ನಾನು ಹೆಚ್ಚು ಮಾತಾಡಲ್ಲ ಎಂದಿದ್ದಾರೆ.

ಇವತ್ತು ಬಾಬು ಜಗಜೀವನ್ ರಾಮ್ ಅವರ ಜನ್ ದಿನ ಆಚರಿಸುತ್ತಿದ್ದೇವೆ.ದೇಶದ ಕಂಡಂತಹ ನಾಯಕರು.ದೀರ್ಘಕಾಲ ದೇಶಕ್ಕಾಗಿ ಕೆಲಸ ಮಾಡಿದ್ದಾರೆ, ಅನೇಕ ಸಾಧನೆ ಮಾಡಿದ್ದಾರೆ. ಎಲ್ಲಾ ಇಲಾಖೆಗಳಲ್ಲೂ ದಕ್ಷತೆ ಯಿಂದ ಕಾರ್ಯ ನಿರ್ವಹಿಸಿದ್ದಾರೆ.ದೇಶ ಪ್ರಗತಿ ಯಾದ್ರೆ ನಾವು, ದೇಶ ಉದ್ದಾರ ಆದ್ರೆ ನಾವು ಉದ್ದಾರ ಆದಂತೆ ಅಂದಿದ್ದರು . ಎಲ್ಲಾ ಇಲಾಖೆಗಳಲ್ಲಿ ಅವರ ಹೆಜ್ಜೆ ಗುರುತು ಇದೆ. ಅವರು ನಮಗೆಲ್ಲಾ ಮಾದರಿ. ಸಾಮಾಜಿಕ ನ್ಯಾಯ ಕ್ಕಾಗಿ ಹೋರಾಡಿದರು.ಮಹಾನ್ ನಾಯಕನನ್ನ ನಾವು ಸ್ಮರಿಸಬೇಕು, ಗೌರವಿಸಬೇಕು ಎಂದರು.

ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಹೆಚ್ಚು ಮಾತಾಡಲ್ಲ ಎಂದ ಸಿಎಂ ಎಫ್ ಐಆರದ ಆಗಿದೆ, ತನಿಖೆ ನಡೀತಿದೆ. ತನಿಖೆ ನಡೀತಿರೋ ಹೊತ್ತಲ್ಲೇ ನಾವು ಇಂಟರ್ ಫೀಯರ್ ಮಾಡಲ್ಲ. ಬಿಜೆಪಿಯವರರು ಹತಾಶರಾಗಿದ್ದಾರೆ.ಸಾವಿನಲ್ಲೂ ರಾಜಕೀಯ ಮಾಡಲ್ಲ. ಅವರು ಹೇಳಿದಂತೆ ಎಲ್ಲವೂ ಆಗಲ್ಲ ಎಂದರು.

ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಮಾಡೋರು. ಬಿಜೆಪಿ ಯವರ ಡಿಮ್ಯಾಂಡ್ ಗೆಲ್ಲಾ ನಾವು ಉತ್ತರ ಕೊಡೋಕೆ ಆಗಲ್ಲ. ಬಿಜೆಪಿ ಯವರು ಹತಾಶರಾಗಿದ್ದಾರೆ ಅಷ್ಟೇ. ವಿನಯ್ ಸಾವಿನ ಸಂಬಂಧ ಎಫ್ಐರ್ ಆಗಿದೆ. ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ.ತನಿಖೆ ನಡೆಯುವಾಗ ನಾನು ಹೆಚ್ಚು ಮಾತಾಡಲ್ಲ ಎಂದ್ರು.

ಇನ್ನು ನವೀಕೃತ ಬ್ಯಾಂಕ್ವೆಟ್ ಹಾಲ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಲೋಕಾರ್ಪಣೆ ಕಾರ್ಯಕ್ರಮ ದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಡಾ ಜಿ ಪರಮೇಶ್ವರ್, ಸಭಾಪತಿ ಹೊರಟ್ಟಿ ಭಾಗಿಯಾಗಿದ್ದರು, ಇನ್ನು ಸಿಎಂ ಸಿದ್ದರಾಮಯ್ಯ ಮಾತನಾಡೋವಾಗ ಮಾಜಿ ಸಚಿವ ಹೆಚ್ ಆಂಜನೇಯ ಪರ ಘೋಷಣೆ ಕೂಗಿದ್ದಾರೆ. ಆಂಜನೇಯ ಗೆ ಎಂಎಲ್ಸಿ ಸ್ಥಾನ ನೀಡಬೇಕೆಂದು ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದವರ ಮೇಲೆ ಸಿಡಿಮಿಡಿಗೊಂಡಿದ್ದಾರೆ ಸಿಎಂ. ಏ.. ಯಾರಯ್ಯ ಅದು ಎಂದು ಸಿಎಂ ಗರಂ ಆಗಿದ್ದಾರೆ.