ಮನೆ Latest News ಹೊನ್ನಾಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅದ್ದೂರಿ ಮೆರವಣಿಗೆ

ಹೊನ್ನಾಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅದ್ದೂರಿ ಮೆರವಣಿಗೆ

0

ದಾವಣಗೆರ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅದ್ದೂರಿ ಮೆರವಣಿಗೆ ಮಾಡಲಾಯಿತು.ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಸವಳಂಗ ಸರ್ಕಲ್ ನಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ವರೆಗೂ ಮೆರವಣಿಗೆ ಸಾಗಿತು. ಅಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ವಿಜಯೇಂದ್ರ ಮಾಲಾರ್ಪಣೆ ಮಾಡಿದ್ರು.  ವಿಜಯೇಂದ್ರ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಲಾಯಿತು. ರಾಜ್ಯಾಧ್ಯಕ್ಷ ರಾಗಿ ವಿಜಯೇಂದ್ರ ಮುಂದುವರೆಯುತ್ತಾರೆ ಎಂದು ಹೇಳಿಕೆ ಕೊಟ್ಟ ಹಿನ್ನಲೆ ಮೆರವಣಿಗೆ ನಡೆಸಲಾಯಿತು.

ವಿಜಯೇಂದ್ರ ಬಣದಿಂದ ಅದ್ದೂರಿಯಾಗಿ ಸಂಭ್ರಮಾಚರಣೆ ನಡೆಯಿತು. ಹರಿಹರದ ನಂದಿಗುಡಿ ಗ್ರಾಮದ ಕಾರ್ಯಕ್ರಮಕ್ಕೆ ವಿಜಯೇಂದ್ರ ತೆರಳುವ  ಮಾರ್ಗ ಮಧ್ಯೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಇದೇ ವೇಳೆ ಮುಂದಿನ ಸಿಎಂ ಮಾಡುವ ಸಂಕಲ್ಪ ಮಾಡಿದ್ದಾರೆ ಮಾಜಿ ಸಚಿವ ರೇಣುಕಾಚಾರ್ಯ.

ರಾಜ್ಯಾದ್ಯಂತ ರಾಜ್ಯಾಧ್ಯಕ್ಷರು ಪ್ರವಾಸ ನಡೆಸಿ ಹೆಚ್ಚು ಸೀಟ್ ಗೆಲ್ಲಿಸಿದ್ದಾರೆ. ವಕ್ಪ್ ಬೋರ್ಡ್ ವಿಚಾರದಲ್ಲಿ ಮೂರು ತಂಡ ಮಾಡಿ ರಾಜ್ಯಾದ್ಯಂತ ಅಭಿಯಾನ ನಡೆಸಿದ್ದಾರೆ. ರಾಜ್ಯ ಉಸ್ತುವಾರಿ ಗಳು ಕೂಡ ನೀವೆ ರಾಜ್ಯಾಧ್ಯಕ್ಷ ರಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ ಎಂದು ರೇಣುಕಾಚಾರ್ಯ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಹಾಡಿ ಹೊಗಳಿದ್ದಾರೆ.

ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ ಹೊರಗೆಳೆಯುತ್ತೇವೆ;  ಹೊನ್ನಾಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ

ದಾವಣಗೆರೆ; ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ ಹೊರಗೆಳೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೇಸ್ ಸರ್ಕಾರದ ಹಗರಣ ಹೊರಗೆಳೆಯುವ ಕೆಲಸ ಮಾಡುತ್ತೇವೆ. ಅಭಿವೃದ್ಧಿಗಾಗಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಯಾವುದೇ ಅಭಿವೃದ್ಧಿ ಇಲ್ಲದೆ ರಾಜ್ಯದ ಜನತೆ ತತ್ತರಿಸುವಂತಾಗಿದೆ. ಅವರ ಧ್ವನಿಯಾಗಿ ನಾಳೆಯಿಂದ ಅಧಿವೇಶನದಲ್ಲಿ ಎಚ್ಚರಿಸುವ ಕೆಲಸಮಾಡಲಿದ್ದೇವೆ.  ವಿರುದ್ದ ನಮ್ಮ ಪ್ರವಾಸ ನಿಲ್ಲಲ್ಲ. ಅಧಿವೇಶದ ನಂತರ ಪ್ರವಾಸ ಮಾಡಿ  ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ.‌ ನಂತರ ಕೇಂದ್ರದ ಪಾರ್ಲಿಮೆಂಟರಿ ಮುಂದೆ ಧರಣಿ ಮಾಡುತ್ತೇವೆ ಎಂದಿದ್ದಾರೆ.

ಗ್ಯಾರಂಟಿಗೆ ಹಣ ಹೊಂದಿಸದೇ ಸರ್ಕಾರ ಪರದಾಡುತ್ತಿದೆ. ಲೋಕ ಹಾಗು ಉಪ ಚುನಾವಣೆ ಮೂರು ದಿನ ಇದ್ದಾಗ ಗ್ಯಾರಂಟಿ ಹಣ ಬಿಡುಗಡೆ ಮಾಡ್ತಾರೆ. ಬಡವರಿಗೆ ಅವಮಾನ ಮಾಡುವಂತಹ ಕೆಲಸ ಸರ್ಕಾರ ಮಾಡ್ತಿದೆ. ಗ್ಯಾರಂಟಿನ ಯಾರು ಕೇಳಿರಲಿಲ್ಲ. ಅಭಿವೃದ್ದಿಗೆ ಹಣ ಇಲ್ಲದೇನೆ ಕಾಂಗ್ರೆಸ್ ಶಾಸಕರೇ ತಲೆ ಎತ್ತಿ ಹೋಗದ ಸ್ಥಿತಿ ಎದುರಾಗಿದೆ. ಯಾವ ಕಾಲದಲ್ಲೂ ಇಂತಹ ಕೆಟ್ಟ ಸ್ಥಿತಿ ಬಂದಿರಲಿಲ್ಲ ಎಂದಿದ್ದಾರೆ.

ಗರ್ಭಿಣಿಯರ ಸಾವು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮುನ್ನೂರಕ್ಕೂ ಹೆಚ್ಚು ಗರ್ಭಿಣಿಯರ ಸಾವಾಗಿದೆ. ನಿನ್ನೆ ನಮ್ಮ ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ ಎಂದಿದ್ದಾರೆ. ಇದೇ ವೇಳೆ ಯತ್ನಾಳ್ ಮತ್ತೆ ರೆಬೆಲ್ ವಿಚಾರಕ್ಕೆ ರಿಯಾಕ್ಟ್ ಮಾಡಿದ ಅವರು ಯತ್ನಾಳ್ ಅವರಿಗೆ ಲಾಂಗ್ ಟರ್ಮ್ ಸ್ಟ್ರಾಟರ್ಜಿ ಇದ್ದಂತೆ ಕಾಣುತ್ತೆ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಯಾವ ಹೋರಾಟ ಮಾಡಬೇಡಿ ಎಂದು ಹೇಳಿಲ್ಲ. ಎಲ್ಲವನ್ನೂ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಅವರ ಅನುಮಾನಗಳಿಗೆ, ಆಸೆಗಳಿಗೆ ಕಾಲವೇ ಉತ್ತರ ಕೊಡಲಿದೆ, ಅವರಿಗೆ ಒಳ್ಳೆಯದಾಗಲಿ. ಮುಂದಿನ ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯಾಧ್ಯಕ್ಷ ಸ್ಥಾನ ಪಡೆದಿರೋದು ಸಿಎಂ ಆಗಲಿಕ್ಕೆ ಅಲ್ಲ. ಈ ಸ್ಥಾನವನ್ನ ಜವಾಬ್ದಾರಿಯಿಂದ ನಿರ್ವಹಣೆ ಮಾಡುತ್ತೇವೆ ಎಂದಿದ್ದಾರೆ.