ಮನೆ Latest News ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ

0

ಬೆಂಗಳೂರು: ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರ ಎರಡು ವರ್ಷಗಳ ಸಾಧನೆಗೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಆದರೆ ಒಂದೇ ಮಳೆಗೆ ಬೆಂಗಳೂರಿನಲ್ಲಿ ಸರ್ಕಾರದ ಸಾಧನೆ ಗೊತ್ತಾಗಿದೆ. ಬೆಂಗಳೂರಿನ ಈ ಸ್ಥಿತಿಗೆ ಡಿ.ಕೆ. ಶಿವಕುಮಾರ್ ನೇರ ಕಾರಣ. ಡಿ.ಕೆ. ಶಿವಕುಮಾರ್ ಈವರೆಗೂ ಒಂದೇ ಒಂದು ಕಾಮಗಾರಿಗೆ ಬೆಂಗಳೂರಿನಲ್ಲಿ ಚಾಲನೆ ಕೊಟ್ಟಿಲ್ಲ.ತುಷಾರ್ ಗಿರಿನಾಥ್ ಕೇವಲ ಪತ್ರಿಕಾ ಹೇಳಿಕೆಗಷ್ಟೇ ಸೀಮಿತ ಆದರು ಎಂದರು.

ಡಿ.ಕೆ. ಶಿವಕುಮಾರ್ ಬಿಬಿಎಂಪಿಯನ್ನು ಕಾರ್ಪೋರೇಟ್ ಕಂಪನಿ ನಡೆಸುವ ರೀತಿ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮುಂಜಾಗ್ರತಾ ಕ್ರಮವಾಗಿ ಏನೂ ಕ್ರಮ ವಹಿಸಿಲ್ಲ. ಬಳ್ಳಾರಿಯಲ್ಲಿ ಕುಳಿತುಕೊಂಡು ಬೆಂಗಳೂರಿನ ಬಗ್ಗೆ ಕಾಳಜಿ ಇದೆ ಅಂತಾ ಬೇಜವಾಬ್ದಾರಿ ಟ್ವೀಟ್ ಮಾಡುತ್ತಾರೆ. ಎರಡು ವರ್ಷಗಳಲ್ಲಿ ಡಿ.ಕೆ. ಶಿವಕುಮಾರ್ ಬೇಜವಾಬ್ದಾರಿಯಿಂದ ಬ್ರ್ಯಾಂಡ್ ಬೆಂಗಳೂರು ಮುಳುಗಡೆ ಬೆಂಗಳೂರು ಅಗಿದೆ. ಡಿ.ಕೆ. ಶಿವಕುಮಾರ್ ಬೆಂಗಳೂರನ್ನು ಕಡೆಗಣೆನೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಇದು. 74ನೇ ತಿದ್ದುಪಡಿಗೆ ವಿರುದ್ಧವಾಗಿ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಡಿ.ಕೆ. ಶಿವಕುಮಾರ್ ತಮಗೆ ಬೇಕಾದ ರೀತಿ ಮಹಾನಗರ ಪಾಲಿಕೆಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಈ ಕೆಟ್ಟ ಪರಿಸ್ಥಿತಿಗೆ ಡಿ.ಕೆ. ಶಿವಕುಮಾರ್ ನೇರ ಹೊಣೆ. ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿ, ಬೆಂಗಳೂರು ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಮಾಡುವುದಕ್ಕಿಂತ ಕಾಂಗ್ರೆಸ್ ಪಕ್ಷದ ಸಮಾವೇಶಗಳಲ್ಲೇ ಬ್ಯುಸಿ ಆಗಿದ್ದಾರೆ. ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಗೆ ಅನುಕೂಲ ಆಗುವಂತಹ ಯೋಜನೆಗಳನ್ನೇ ಮಾಡುತ್ತಿದ್ದಾರೆ.ಕೂಡಲೇ ಡಿ.ಕೆ. ಶಿವಕುಮಾರ್ ಹೊಸಪೇಟೆ ಸಮಾವೇಶದಿಂದ ವಾಪಸ್ ಬಂದು ಬೆಂಗಳೂರಿನ ಹಾನಿ ಬಗ್ಗೆ ಕ್ರಮ ವಹಿಸಬೇಕು ಎಂದರು.

ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮಾತನಾಡಿ  ಡಿ.ಕೆ. ಶಿವಕುಮಾರ್ ಎಲ್ಲೋ ಕುಳಿತುಕೊಂಡು ಟ್ವೀಟ್ ಮಾಡುವುದಲ್ಲ. ಇಲ್ಲಿ ಇದ್ದು ಕೆಲಸ ಮಾಡಬೇಕಾಗಿತ್ತು. ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಅಧ್ವಾನ ಮಾಡಿ ಇಟ್ಟಿದ್ದಾರೆ.ಬಿಬಿಎಂಪಿ ಕಾರ್ಪೋರೇಟರ್ ಗಳು ಇಲ್ಲದೇ ಇರುವುದೇ ಇಷ್ಟು ಸಮಸ್ಯೆಗೆ ಕಾರಣ.ಕಾರ್ಪೋರೇಟರ್ ಗಳು ಇದ್ದಿದ್ದರೆ ಜನರಿಗೆ ಸಹಾಯ ಮಾಡುತ್ತಿದ್ದರು ಎಂದರು.

ಬಿಜೆಪಿ ವಕ್ತಾರ ಎಸ್. ಪ್ರಕಾಶ್  ಮಾತನಾಡಿ ಇಷ್ಟು ಸಮಯ ಬೆಂಗಳೂರಿನ ಹೊರವಲಯದಲ್ಲಿ ಸಮಸ್ಯೆ ಆಗುತ್ತಿತ್ತು. ಈಗ ಎರಡು ವರ್ಷಗಳಲ್ಲಿ ಬೆಂಗಳೂರಿನ ಒಳಗೆ ನೀರು ನುಗ್ಗುತ್ತಿದೆ. ಎಲ್ಲಿ ಹೋದರು ಈಗ ಬಹಳ ಮಾತಾಡುವ ಸಚಿವ ಪ್ರಿಯಾಂಕ್ ಖರ್ಗೆ?. ಈಗ ಪ್ರಿಯಾಂಕ್ ಖರ್ಗೆ ಬೆಂಗಳೂರಿನ ಬಗ್ಗೆ ಟ್ವೀಟ್ ಮಾಡಲಿ ನೋಡೋಣ?.ಸಚಿವ ಸಂತೋಷ್ ಲಾಡ್ ಈಗ ಮಾತಾಡುತ್ತಾರಾ ಬೆಂಗಳೂರಿನ ಬಗ್ಗೆ? ಎಂದು ಪ್ರಶ್ನಿಸಿದ್ರು.