ಮನೆ Latest News ರಾಜ್ಯ ಬಿಜೆಪಿಯಿಂದ ಬೆಂಗಳೂರಿನಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ...

ರಾಜ್ಯ ಬಿಜೆಪಿಯಿಂದ ಬೆಂಗಳೂರಿನಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

0

ಬೆಂಗಳೂರು; ರಾಜ್ಯ ಬಿಜೆಪಿಯಿಂದ ಇಂದು ರಾಜ್ಯಾದ್ಯಂತ ವಕ್ಫ್ ವಿರೋಧಿ ಪ್ರತಿಭಟನೆ ನಡೆಯಿತು  ಅದರಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಮ್ಮ ಭೂಮಿ-ನಮ್ಮ ಹಕ್ಕು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ವಕ್ಫ್ ಕಾನೂನು ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಇರಲಿಲ್ಲ. ಅರ್ಧ ಭಾರತದಷ್ಟು ಜಮೀನು ಇಂದು ವಕ್ಪ್ ಹೆಸರಿನಲ್ಲಿದೆ. ನಮ್ಮ ಜಮೀನು, ಮಠ ಮಂದಿರ, ದೇವಸ್ಥಾನಗಳ ಜಮೀನು ವಕ್ಪ್ ಗೆ ಕೊಡುತ್ತಿರುವುದಕ್ಕೆ ನಮ್ಮ ತಕರಾರು ಇದೆ. ಕಾನೂನಿನಲ್ಲಿ ವಕ್ಫ್ ಅದಾಲತ್ ಮಾಡಲು ಅವಕಾಶ ಇಲ್ಲ. ಜಮೀರ್ ಅಹಮದ್ ಎಲ್ಲಾ ಜಿಲ್ಲೆಗಳಿಗೆ ಹೋಗಿ ಒತ್ತಡ ಹಾಕುತ್ತಿದ್ದಾರೆ. ವಕ್ಪ್ ಟ್ರಿಬ್ಯೂನಲ್ ನಲ್ಲಿ ಈವರೆಗೆ ಯಾರಿಗೂ ನ್ಯಾಯ ಸಿಕ್ಕಿಲ್ಲ. ಯಾಕೆಂದರೆ ಅವರು ಅಲ್ಲಿ ವಿಚಾರಣೆ ನಡೆಸುವುದೇ ಇಲ್ಲ. ತಮಿಳನಾಡಿನಲ್ಲಿ ರಾಜ ರಾಜ ಚೋಳನ ಅಜ್ಜ ಕಟ್ಟಿದ ದೇವಸ್ಥಾನ ವಕ್ಫ್ ಆಗಿದೆ ಎಂದರು.

ತಿರುಚಂದಿರೈ ನಲ್ಲಿ ಊರಿಗೆ ಊರೇ ವಕ್ಪ್ ಆಗಿದೆ. ಎಲ್ಲೆಲ್ಲಿ ಕಾಂಗ್ರೆಸ್, ಐಎನ್ ಡಿ ಐಎ ಸಂಸದರಿದ್ದಾರೋ ಅವರ ಮನೆ ಮುಂದೆ ನಾವು ಹೋಗಬೇಕು. ಸಂಸತ್ತಿನಲ್ಲಿ ಕಾಯ್ದೆ ತಿದ್ದುಪಡಿಯಾಗಿ ನ್ಯಾಯ ಸಿಕ್ಕೇ ಸಿಗುತ್ತದೆ. ವಕ್ಫ್ ಒಂದು ಖತರ್ನಾಕ್ ಬೋರ್ಡ್. ಎಂ.ಬಿ. ಪಾಟೀಲ್ ವಕ್ಪ್ ಭೂಮಿ ಬಗ್ಗೆ ಹಗುರವಾಗಿ ಮಾತಾಡುತ್ತಾರೆ. ಅವರ ಊರಿನಲ್ಲಿ ಊರಿಗೆ ಊರೇ ವಕ್ಪ್ ಆಗಿದೆ. ಲ್ಯಾಂಡ್ ಟೆರ್ರರಿಸಂ ವಿರುದ್ಧ ನಮ್ಮ ಹೋರಾಟ ಎಂದರು.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ರಾಜ್ಯದಲ್ಲಿ ಜನ ದಂಗೆ ಏಳುವ ಪರಿಸ್ಥಿತಿ ಇದೆ.ಸಿದ್ದರಾಮಯ್ಯ ಪಿಟೀಲು ಬಾರಿಸುತ್ತಿದ್ದಾರೆ . ಕಾಂಗ್ರೆಸ್ ಬಂದಾಗ ಮಾತ್ರ ಮುಸ್ಲಿಮರ ಓಲೈಕೆ ಆಗುತ್ತದೆ. ನಮ್ಮ ಹೆಣ್ಣು ಮಕ್ಕಳನ್ನು ಅಪಹರಣ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ಬಂದರೆ ನಕ್ಸಲರು, ಲವ್ ಜಿಹಾದ್ ಗೆ ಹಬ್ಬ. ನಾನು ಇದ್ದಾಗ ಒಬ್ಬ ನಕ್ಸಲನೂ ಇರಲಿಲ್ಲ. ಈಗ ನಗರ ನಕ್ಸಲರೂ ಬಂದಿದ್ದಾರೆ, ಕಾಡಿನ ನಕ್ಸಲರೂ ಬಂದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಶಾಲೆಯಲ್ಲಿ ರಾಷ್ಟ್ರ ಧ್ವಜ ಹಾಕುವ ಜಾಗದಲ್ಲಿ ಹಸಿರು ಬಾವುಟ ಹಾಕಿದ್ದಾರೆ.ಪೊಲೀಸರ ಟೋಪಿಗೂ ಹಸಿರು ಬಾವುಟ ಹಾಕಿದರೆ ಅದೂ ವಕ್ಪ್ ಬೋರ್ಡ್ ಆಗಿಬಿಡುತ್ತದೆ.ಮನಮೋಹನ್ ಸಿಂಗ್ ಪುಣ್ಮಾತ್ಮ ಹೋಗುವಾಗ ದೆಹಲಿಯಲ್ಲಿ ಹತ್ತು ಹದಿನೈದು ಕೋಟಿ ಆಸ್ತಿ ಕೊಟ್ಟು ಹೋಗಿದ್ದಾರೆ. ಜಮೀನುಗಳನ್ನು ರೈತರು ಕ್ಯೂ ನಿಂತು ಹುಡುಕುತ್ತಿದ್ದಾರೆ.ಕರ್ನಾಟಕಕ್ಕೆ ವಕ್ಪ್ ಬೋರ್ಡ್ ಕ್ಯಾನ್ಸರ್ ಇದ್ದಂತೆ. ಕಾಂಗ್ರೆಸ್ ನವರು ಬಂದಾಗಲೆಲ್ಲಾ ಪಾಕಿಸ್ತಾನ, ಮಿನಿ ಪಾಕಿಸ್ತಾನ ಎಂದು ಆಕ್ರೋಶ ಹೊರ ಹಾಕಿದ್ರು.

ಶಾಸಕ ಎಸ್.ಆರ್. ವಿಶ್ವನಾಥ್ ಪ್ರತಿಭಟನಾ ಭಾಷಣ ಮಾಡಿ ಜಮೀರ್ ಅಹಮದ್ ಮಲಗುವಾಗಲೂ ಕೂಲಿಂಗ್ ಗ್ಲಾಸ್ ಹಾಕೊಂಡೇ ಮಲಗುತ್ತಾರಂತೆ. ಮೆರೆದವರು ಎಲ್ಲಾ ಕೆಳಗೆ ಬರಲೇಬೇಕು. ವಿಮಾನ, ಹೆಲಿಕಾಫ್ಟರ್ ನಲ್ಲಿ ಓಡಾಡುತ್ತಿದ್ದವರು ಇಂದು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಬಸ್ ಓಡಿಸ್ಕೊಂಡು ಈಗ ಏನೋ ಸರ್ಕಾರಿ ಕಾರಿನಲ್ಲಿದ್ದೀಯ ನೀನು ಈಗ.ಮೇಲೆ ಇರುವವನು ಒಬ್ಬ ಎಲ್ಲಾ ನೋಡುತ್ತಿರುತ್ತಾನೆ. ವಕ್ಪ್ ರದ್ದು ಮಾಡದೇ ಇದ್ದರೆ ನಮಗೆ ಖಂಡಿತಾ ಉಳಿಗಾಲ ಇಲ್ಲ.ಯಾಕೋ ನಮ್ಮಲ್ಲಿ ಹೋರಾಟದ ಉತ್ಸಾಹವೇ ಹೊರಟು ಹೋಗಿದೆ. ಕೇಸ್ ಹಾಕಿಸಿಕೊಳ್ಳುವುದು ಅಂದರೆ ಈಗ ಹಿಂದೆ ಹೋಗುತ್ತಾರೆ. ಮೊದಲು ಕೇಸ್ ಹಾಕಿಸಿಕೊಳ್ಳುವುದೇ ಕಿರೀಟದ ರೀತಿ ಇತ್ತು ಎಂದ್ರು.