ಮನೆ Latest News ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿರುವುದನ್ನ ಖಂಡಿಸಿ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿರುವುದನ್ನ ಖಂಡಿಸಿ ಬಿಜೆಪಿ ಪ್ರತಿಭಟನೆ

0

ಬೆಂಗಳೂರಿನ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿರುವುದನ್ನ ಖಂಡಿಸಿ ಬಿಜೆಪಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ,ಸಂಸದ ಗೋವಿಂದ ಕಾರಜೋಳ, ಪರಿಷತ್ತು ಸದಸ್ಯ ರವಿ ಕುಮಾರ್ ಸೇರಿ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಸಚಿವ ಸಂಪುಟ ಸಭೆಯಲ್ಲಿ ದೇಶದ್ರೋಹಿಗಳು ಮಾಡುವ ಕೆಲಸ ಮನ್ನಾ ಮಾಡಿ. ಭಯೋತ್ಪಾದಕರನ್ನ ಸಿದ್ದರಾಮಯ್ಯನವರು ರಕ್ಷಣೆ ಮಾಡಿದ್ದಾರೆ.ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದವನ್ನ ಸಿದ್ದರಾನಯ್ಯ ಅವರು ಕೇಸ್ ವಾಪಸ್ಸು ಪಡೆದಿದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನ ಭಯೋತ್ಪಾದಕರು ಅಂತ ಹೇಳೊದು ಸಿದ್ದರಾಮಯ್ಯ ಅವರಿಗೆ ಶೋಭೆ ತರೊಲ್ಲ.ನಿಮ್ಮ ಸರ್ಕಾರ ಬಂದಾಗಿನಿಂದ ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡ್ತಿದೆ .ಈ ನಾಡಿನ ಜನರನ್ನ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಶಾಸಕ  ಅಶ್ವತ್ ನಾರಾಯಣ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಎಡವಟ್ಟು ಸರ್ಕಾರ.ತೃಷ್ಟಿಕರಣದ ರಾಜಕೀಯ ಮಾಡಿ ಕಾನೂನಿಗೆ ಗೌರವ ಕೊಡ್ತಿಲ್ಲಾ.ಭಯೋತ್ಪಾದಕರು ಇವರು ಸಹೋದರರು, ಬೆಂಬಲಿಗರು.ರಾಮೇಶ್ವರಂ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರು ಇವರಿಗೆ ಸಹೋದರರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿದವರ ಮೇಲೆ ಇವರಿಗೆ ಸಹಾನುಭೂತಿ.ಕ್ಯಾಬಿನೆಟ್ ನಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಎನ್ ಐ ಎ ತನಿಖೆ ಮಾಡ್ತಿರೋ ಕೇಸ್ ನ ವಾಪಸ್ಸು ಪಡೆದಿರೋದು ಖಂಡನೀಯ.ಇವರ ನಿಲುವು ಖಂಡಿಸಿ ಪ್ರತಿಭಟನೆ ಮಾಡ್ತಿದ್ದೇವೆ.ಈ ಕೂಡಲೆ ಕೇಸ್ ವಾಪಸ್ಸು ಪಡೆಯುವ ನಿರ್ಧಾರವನ್ನ ಕೈಬಿಡಬೇಕು.ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ರು.

ಇನ್ನು ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣ್ ಸ್ವಾಮಿ ಮಾತನಾಡಿ  ಕಾಂಗ್ರೆಸ್ ನವರು ನಮ್ಮನ್ನ ಸರ್ಕಾರ ಮನುವಾದಿ ಅಂತಾರೆ.ಹಿಂದುಗಳು ಹಿಂದುಅಂದ್ರೆ ನಿಮಗೆ ಯಾಕೆ ಬೆಂಕಿ ಬೀಳುತ್ತೆ.ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರು ಕಲ್ಲು ತೂರಾಟ ಮಾಡಿದವರು ದೇಶಪ್ರೇಮಿಗಳಾ?ನಿಮ್ಮಂತ ಕಳಪೆ ಮುಖ್ಯಮಂತ್ರಿಯನ್ನ ಯಾವತ್ತು ಕಂಡಿರಲಿಲ್ಲ.ಸಿಟಿ ರವಿ ಮೇಲೆ ಕೇಸ್ ಯಾಕೆ ತೆಗೆದ್ರಿ, ಅವರು ಅರ್ಜಿ ಕೊಟ್ಟಿದ್ರಾ?ಅವರು ಏನು ಕ್ರಿಮಿನಲ್?ಹಲವು ಹೋರಾಟದಲ್ಲಿ ಭಾಗಿಯಾಗಿದ್ದ ದಲಿತರ ಮೇಲಿರುವ ಕೇಸ್ ಗಳನ್ನ ಯಾಕೆ ವಾಪಸ್ಸು ತಗೊಂಡಿಲ್ಲ.ಒಲೈಕೆ ಮಾಡಿದ್ರೆ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡ್ತಾರೆ.ಯಾಸಿನ್ ಮಲ್ಲಿಕ್ ಅವರನ್ನು ನಿಮ್ಮ ಡೈನಿಂಗ್ ಟೇಬಲ್ ಮೇಲೆ ಜೊತೆಯಲ್ಲಿ ಕೂರಿಸಿದ್ರಲ್ಲಾ.ಸಿದ್ದರಾಮಯ್ಯ ಅವರು ಖಾವಿ, ಕುಂಕುಮ ಕಂಡರೆ ಎಗರಿಬೀಳ್ತಿದ್ರೆಈಗ  ನೀವೆ ಹೋಗಿ ಕುಂಕುಮ ಹಚ್ಚಿಕೊಳ್ತಿದ್ದೀರಾ ಎಂದು ಪ್ರಶ್ನಿಸಿದ್ರು.

 ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರಕ್ಕೆ ಬಿಗ್ ಬಾಸ್ ಭಯೋತ್ಪಾದಕರು.ಅವರು ಏನ್ ಸೂಚನೆ ಕೊಡ್ತಿದ್ದಾರೆ ಹಾಗೆ ನಡೆದುಕೊಳ್ತಿದ್ದಾರೆ.ಹುಬ್ಬಳಿಯಲ್ಲಿ ಕೇಸ್ ತೆಗಿರಿ ಅಂತ ಹೇಳಿದ್ರು ಅದಕ್ಕೆ ತೆಗೆದಿದ್ದಾರೆ ಮುಸ್ಲಿಮನರ ಋಣ ತೀರುಸ್ತಿದ್ದಾರೆ.ಸಿದ್ದರಾಮಯ್ಯ ಅವರ ಮೇಲೆ ಮೂಡ, ವಾಲ್ಮೀಕಿ ಕೇಸ್ ಬಂದಿದೆ.ಖರ್ಗೆ ಸೈಟ್ ವಾಪಸ್ಸು ಕೊಟ್ಟಿದ್ದಾರೆ.ಸಿದ್ದರಾಮಯ್ಯ ಅವರಿಗೆ ಪಾರ್ಟಿಯವರೆ ಬೆಂಬಲ ಕೊಡ್ತಿಲ್ಲ.ಮುಸ್ಲಿಂರ ಒಲೈಕೆ ಮಾಡಿ ಉಳಿಯಬೇಕು ಎಂದು ಸಿದ್ದರಾಮಯ್ಯ ಮುಂದಾಗಿದ್ದಾರೆ.ಹಿಂದುಗಳ ಮೇಲೆ ಕೇಸ್ ವಾಪಸ್ಸು ಪಡೆದಿದ್ದಾರಾ.ಸಿಟಿ ರವಿ ಏನ್ ಕೇಸ್ ವಾಪಸ್ಸು ತೆಗಿರಿ ಅಂತಾ ಕೇಳಿಲ್ಲಾ.ಕನ್ನಡ ಹೋರಾಟಗಾರ ನಾರಾಯಣ್ ಗೌಡ ಅವರನ್ನ ಜೈಲಿಗೆ ಹಾಕುದ್ರೆ,ಪೊಲೀಸರನ್ನ ಹೊಡೆದ್ರು ಬೆಂಕಿ ಹಚ್ಚಿದ್ರು ಅವರ ಕೇಸ್ ವಾಪಸ್ಸು ಪಡೆದಿದ್ದಾರೆ.ಮುನಿರತ್ನಗೆ ಜೈಲಾಗಿದೆ ವಿನಯ್ ಕುಲಕರ್ಣಿ ಮೇಲೆ ರೇಪ್ ಕೇಸ್ ಆಗಿದೆ, ಅವರಿಗೆ ಯಾಕೆ ಜೈಲಿಲ್ಲಾ ಎಂದು ಪ್ರಶ್ನೆ ಮಾಡಿದ್ದಾರೆ.