ಮನೆ ಪ್ರಸ್ತುತ ವಿದ್ಯಮಾನ ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

0

ಬೆಂಗಳೂರು: ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಗೂ ದಲಿತ ವಿರೋಧಿ ಸರ್ಕಾರ ಎಂದು ಆರೋಪಿಸಿ ರಾಜ್ಯ ಬಿಜೆಪಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಪರಿಷತ್ ವಿಪಕ್ಷ‌ ನಾಯಕ ಚೆಲುವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ಶಾಸಕ ಸಿ ಕೆ ರಾಮಮೂರ್ತಿ, ಶಾಸಕ ಕೆ ಗೋಪಾಲಯ್ಯ, ಎಂಎಲ್ಸಿ ಎನ್ ರವಿಕುಮಾರ್, ಎಂಎಲ್ಸಿ ಭಾರತಿ ಶೆಟ್ಟಿ, ಬೆಂಗಳೂರು ಕೇಂದ್ರ ಅಧ್ಯಕ್ಷ ಸಪ್ತಗಿರಿಗೌಡ, ಕೇಶವ್ ಪ್ರಸಾದ್, ಉಮೇಶ್ ಶೆಟ್ಟಿ ಸೇರಿದಂತೆ ಮಾಜಿ ಕಾರ್ಪೋರೇಟರ್ ಗಳು, ಕಾರ್ಯಕರ್ತರು ಭಾಗಿಯಾಗಿದ್ದರು.

ಈ ವೇಳೆ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ರುಭಿತ್ತಿ ಪತ್ರ ಪ್ರದರ್ಶಿಸಿ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ರು.”ವಾಲ್ಮೀಕಿ ನಿಗಮದ ಹಣ ರಾಹುಲ್ ಗಾಂಧಿ ಜೇಬಿಗೆ ಹೋಗಿದ್ದೆಷ್ಟು””ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರ ಧಿಕ್ಕಾರ” ಎಂದು ಘೋಷಣೆ ಕೂಗಿದ್ರು.”ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ”.”ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಲಿ, ಮೈಸೂರಿನ ಮುಡಾ ಉಳಿಯಲಿ” ಎಂದು ಕಾಂಗ್ರೆಸ್ ಸರ್ಕಾರದ ಹಗರಣಗಳನ್ನ ಉಲ್ಲೇಖಿಸಿ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ರು.

ಇನ್ನು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಡಾ ಅಶ್ವತ್ಥ್ ನಾರಾಯಣ್ ಕಾಂಗ್ರೆಸ್ ನಾಯಕರು ಸಾರ್ವಜನಿಕರ ವೇದಿಕೆಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ.ಕಾನೂನು ಗೌರವಿಸುವ ಹೇಳಿಕೆ ಕೊಡ್ತಿಲ್ಲ, ರಾಜ್ಯಪಾಲರ ಕುರಿತು ಅವಹೇಳನಕಾರಿ ಹೇಳಿಕೆ ಕೊಡುತ್ತಿದ್ದಾರೆ.ನಾಲಾಯಕ್ ಗವರ್ನರ್ ಎಂದು ಹೇಳಿ ನಾಲಿಗೆ ಹರಿಬಿಡುತ್ತಿದ್ದಾರೆ.ಗೃಹ ಇಲಾಖೆ ಏನು ಮಾಡುತ್ತಿದೆ? ಬಾಂಗ್ಲಾದೇಶದ ವಾತಾವರಣ ನಿರ್ಮಾಣ ಆಗುತ್ತೆ ಎಂದು ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಅವ್ಯವಸ್ಥೆ ನಿರ್ಮಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸಿಲುಕೊಂಡಿದ್ದಾರೆ ಎಂದರು.

ಶಾಸಕ ರಾಮಮೂರ್ತಿ ಮಾತನಾಡಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು.ಐವಾನ್ ಡಿಸೋಜಾ ವಿರುದ್ದ ಕೇಸ್ ಹಾಕಬೇಕು.ಐವಾನ್‌ ಡಿಸೋಜಾಗೆ ಮಾನ ಮಾರ್ಯಾದೆ ಇದ್ಯಾ?.ನಿಜವಾಗಿಯೂ ನಿಮಗೆ ತಾಕತ್ತಿ ಇದ್ರೆ ರಾಜಭವನಕ್ಕೆ ನುಗ್ಗಿ ‌ನೋಡೋಣ?.ಗುಂಡಾ ಆ್ಯಕ್ಟ್ ಹಾಕಿ ಐವಾನ್ ಡಿಸೋಜಾ ಅವರನ್ನ ಒಳಗೆ ಹಾಕಬೇಕೆಂದು ಆಗ್ರಹಿಸುತ್ತೇನೆ ಎಂದರು,ಎಂಎಲ್ಸಿ ಎನ್ ರವಿಕುಮಾರ್ ಮಾತನಾಡುತ್ತಾ ಸಿದ್ದರಾಮಯ್ಯ ಅವರೇ ನಿಮಗೆ ಧಮ್‌ ಇದ್ರೆ ಸಿಬಿಐಗೆ ಕೇಸ್ ಕೊಡಿ.ಮುಡಾ ಹಗರಣ ಎಲ್ಲವೂ ದಾಖಲಾತಿಯಲ್ಲಿ ನಮೂದು ಆಗಿದೆ.ವೈಟ್ನರ್ ಹಚ್ಚಿ ತಿದ್ದುಪಡಿ ಮಾಡಲಾಗಿದೆ.ಸಿದ್ದರಾಮಯ್ಯ ಅವರು ಸುಳ್ಳುರಾಮಯ್ಯ.ಭ್ರಷ್ಟ ರಾಮಯ್ಯ ಸಿದ್ದರಾಮಯ್ಯ.ಈ ಕಳ್ಳ ಭೈರತಿ ಸುರೇಶ್ ಎಷ್ಟು ಕಳ್ಳ ಸೈಟ್ ಹಂಚಿದ್ದಾರೆ.೧೯೫೦ ಸೈಟ್ ಅವರ ಅಕ್ಕಪಕ್ಕದವರಿಗೆ ಹಂಚಿಕೆಯಾಗಿದೆ.ಮರೀಗೌಡ, ಭೈರತಿ ಸುರೇಶ್ ಕಳ್ಳರು.ಶುದ್ಧ ರಾಮಯ್ಯ ಅಲ್ಲ ಭ್ರಷ್ಟ ರಾಮಯ್ಯ.. ಸೈಟು ಕಳ್ಳ ಸಿದ್ದರಾಮಯ್ಯ ಎಂದರು.

ಆಕ್ರೋಶ ಹೊರಹಾಕಿದ ಪರಿಷತ್ ವಿಪಕ್ಷ ನಾಯಕ ಚೆಲುವಾದಿ ನಾರಾಯಣಸ್ವಾಮಿ ನಾವು ಮೂರು ವಿಚಾರವಾಗಿ ಹೋರಾಟ ಮಾಡಿದ್ದೇವೆ.ವಾಲ್ಮೀಕಿ ಹಗರಣ, ಮುಡಾ ಹಗರಣ ಮತ್ತು ದಲಿತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.ಗವರ್ನರ್ ರಾಜಕಾರಣಿ ಅಲ್ಲ.. ಅಂತವರನ್ನ ನೀವು ನಾಲಾಯಕ್ ಎನ್ನುತ್ತೀರಿ. ಹೇಳಿಕೆ ಕೊಟ್ಟವರ ವಿರುದ್ದ ದೂರು ಕೊಟ್ಟರೂ ಎಫ್ ಐ ಆರ್ ದಾಖಲಾಗಿಲ್ಲ ಯಾಕೆ?ಕೂಡಲೇ ಕಾಂಗ್ರೆಸ್ ಸರ್ಕಾರವನ್ನ ವಜಾ ಮಾಡಬೇಕು.ಭ್ರಷ್ಟಾಚಾರದಲ್ಲಿ ಮುಳುಗಿರೋ ನಿಮಗೆ ಕಪ್ಪು ಚುಕ್ಕೆ ಎಲ್ಲಿ ಹುಡುಕೋದು.ದಾಖಲೆ ಪತ್ರಗಳಿಗೆ ವೈಟ್ನರ್ ಹಾಕಿದ್ರೆ ಎಲ್ಲಿ ಕಪ್ಪು ಚುಕ್ಕೆ ಹುಡುಕೋದು? ಸಿದ್ದರಾಮಯ್ಯ ರಾಜೀನಾಮೆ ಕೊಡೋವರೆಗೂ ನಾವು ಸುಮ್ಮನ್ನಿರಲ್ಲ.ನಾವು ಹೋರಾಟದಿಂದ ಕಪ್ಪು ಆಗ್ತೇವೆ ಹೊರತೂ ಭ್ರಷ್ಟಾಚಾರದಿಂದ‌ ಕಪ್ಪು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ರು.