ಬೆಂಗಳೂರು: ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಛಾ ಪ್ರತಿಭಟನೆ ನಡೆಯಿತು.ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮೊಂಬತ್ತಿ ಬೆಳಗಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಯಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮತ್ತು ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ಕೂಡಾ ಪೊಲೀಸ್ ಅಧಿಕಾರಿಗಳಿಗೇ ರಕ್ಷಣೆ ಇಲ್ಲ.ಪರಶುರಾಮ ಆತ್ಮಹತ್ಯೆ ಮಾಡಿಕೊಂಡ, ಯಾರು ಕೇಳುತ್ತಾರೆ?.ಕರ್ನಾಟಕದ ಹತ್ತು ಪಟ್ಟು ಅವ್ಯವಸ್ಥೆ ಪಶ್ಚಿಮ ಬಂಗಾಳದಲ್ಲಿದೆ.ಪಶ್ಚಿಮ ಬಂಗಾಳ ಸರ್ಕಾರದಿಂದ ನ್ಯಾಯ ಸಿಗಲ್ಲ ಅಂತಾ ಪಶ್ಚಿಮ ಬಂಗಾಳ ಹೈಕೋರ್ಟ್ ಗೆ ಅನ್ನಿಸಿದೆ. ಪುಂಡ, ಪೋಕರಿಗಳು ಭಯ ಇಲ್ಲದ ಕಾರಣ ಪದೇ ಪದೇ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.ಮಮತಾ ಬ್ಯಾನರ್ಜಿ ಮೂಗಿನ ಅಡಿಯಲ್ಲಿ ಎಲ್ಲಾ ಪ್ರಕರಣ ನಡೆದಿದೆ.ವೋಟ್ ಬ್ಯಾಂಕ್ ತೃಪ್ತಿಪಡಿಸಲು ಜನರನ್ನು ಬಲಿಕೊಡುತ್ತಿದ್ದಾರೆ.ಎಲ್ಲದಕ್ಕೂ ಮಾತನಾಡುವ ಇಂಡಿ ಅಲಯನ್ಸ್ ಸುಮ್ಮನಿದೆ.ಅತ್ಯಾಚಾರಕ್ಕೊಳಗಾದವರನ್ನು ಬದುಕಿದ್ದರೂ ಸತ್ತಂತೆ ಮಾಡುತ್ತದೆ ನಮ್ಮ ಸಮಾಜ.ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ಹೊತ್ತು ಕೊಳ್ಳಬೇಕು.ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಇದೆ .ಇಂದು ಇಂಡಿ ಅಲಯನ್ಸ್ ಮಾತಾಡಬೇಕು.ಮಮತಾ ಬ್ಯಾನರ್ಜಿಗೆ ಎಷ್ಟು ಬಲಿ ಬೇಕು ಅಂತಾ ಇಂಡಿ ಅಲಯನ್ಸ್ ಕೇಳಬೇಕು.ಮಮತಾ ಬ್ಯಾನರ್ಜಿ ಸೀಟು ಬಿಟ್ಟು ಮೊದಲು ತೊಲಗಬೇಕು.ಮಮತಾ ಬ್ಯಾನರ್ಜಿ ರಾಜೀನಾಮೆಯನ್ನು ಎಷ್ಟು ಜನ ಇಂಡಿ ಅಲಯನ್ಸ್ ನವರು ಮಾಡುತ್ತಾರೆ ಅಂತಾ ದೇಶ ನೋಡಬೇಕಾಗಿದೆ ಎಂದರು.
ಇನ್ನು ಕೊಲ್ಕತ್ತಾ ವೈದ್ಯೆಯ ಅತ್ಯಚಾರ ಮತ್ತು ಬರ್ಬರ ಹತ್ಯೆ ಖಂಡಿಸಿ ದೇಶಾದ್ಯಂತ ಮಂಗಳೂರಿನಲ್ಲಿ ಐಎಂಎ ಯಿಂದ ಶಾಂತಿಯುತ ಮೌನ ಮೆರವಣಿಗೆ ನಡೆಯಿತು.ವೈದ್ಯರ ಪ್ರತಿಭಟನೆಗೆ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸಾಥ್ ನೀಡಿದರು. ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಓಪಿಡಿ ಸೇವೆಗಳು ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೈದ್ಯ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾದರು.ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಲು ಪ್ರತಿಭಟನಾಕಾರರಿಗೆ ಅನುಮತಿ ಪೊಲೀಸರು ಅನುಮತಿ ನೀಡಿಲ್ಲ. ಹಾಗಾಗಿ ಪ್ರತಿಭಟನಾನಿರತ ವೈದ್ಯರು ಹಾಗು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಪರಿಸ್ಥಿತಿ ನಿಭಾಯಿಸಿದರು. ಇದೇ ವೇಳೆ ಪ್ರತಿಭಟನಾನಿರತ ವೈದ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನಾ ರ್ಯಾಲಿ ನಡೆಯಿತು. ಘಟನೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಳಾಗಿತ್ತು. ರ್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ವೈದ್ಯರು ವೈದ್ಯಕೀಯ ಸಿಬ್ಬಂದಿ ಭಾಗಿಯಾಗಿದ್ದರು.ಮೈಸೂರು ದೊಡ್ಡ ಕೆರೆ ಮೈದಾನದಿಂದ ಮೆರವಣಿಗೆ ಆರಂಭವಾದ ಮೆರವಣಿಗೆ ಮೈಸೂರಿನ ಪ್ರಮುಖ ರಸ್ತೆಯಲ್ಲಿ ಸಾಗಿತ್ತು. ನ್ಯಾಯ ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ರು.ಪೊಲೀಸ್ ಕಮಿಷನರ್ ಕಚೇರಿವರೆಗೂ ಮೆರವಣಿಗೆ ಸಾಗಿತು.ಪೊಲೀಸ್ ಕಮಿಷನರ್‌ಗೆ ವೈದ್ಯರು ಮನವಿ ಪತ್ರ ಸಲ್ಲಿಸಿದರು.
ಧಾರವಾಡದಲ್ಲೂ ವೈದ್ಯರು ಘಟನೆ ಖಂಡಿಸಿ ಪ್ರತಿಭಟನೆ ಮಾಡಿದ್ರು.ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಕ್ಯಾಂಡಲ್ ಲೈಟ್ ಪ್ರತಿಭಟನೆ ನಡೆಯಿತು.ಜಿಲ್ಲಾಸ್ಪತ್ರೆಯಿಂದ ಶಿವಾಜಿ ವೃತ್ತದವರೆಗೆ ಪ್ರತಿಭಟನೆ ನಡೆಯಿತು,ಶಿವಾಜಿ ವೃತ್ತದಿಂದ ಜ್ಯುಬಿಲಿ ವೃತ್ತದವರೆಗೆ ಪ್ರತಿಭಟನೆ ಸಾಗಿತು.ಪ್ರತಿಭಟನೆಯಲ್ಲಿ ಎಲ್ಲ ವೈದ್ಯರು, ಸಿಬ್ಬಂದಿ ಭಾಗಿಯಾಗಿದ್ದರು,ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ರು.