ಬೆಂಗಳೂರು; ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರಿನ ಮುಡಾದಲ್ಲಿ ನಡೆದಿರುವ ಹಗರಣ ಆರೋಪಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಿತು. ಬೆಳಗ್ಗೆ 10:30 ಕ್ಕೆ ಕುಮಾರಕೃಪಾ ಅತಿಥಿ ಗೃಹದಿಂದ ಸಿಎಂ ನಿವಾಸಕ್ಕೆ ಬಿಜೆಪಿ ನಾಯಕರು ಮೆರವಣಿಗೆ ನಡೆಸಿದ್ರು.ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಬಿಜೆಪಿ ನಾಯಕರು ಮುತ್ತಿಗೆ ಹಾಕುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸದ ಬಳಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿತ್ತು. ಕುಮಾರಕೃಪಾ ಅತಿಥಿ ಗೃಹದ ಬಳಿ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಸಿಎಂ ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿ ಬಳಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ತೆರಳುತ್ತಿದ್ದಂತೆ ಶಿವಾನಂದ್ ಸರ್ಕಲ್ ಬಳಿಯೇ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಶಾಸಕ ಸುರೇಶ್ ಕುಮಾರ್,ವಿಜಯೇಂದ್ರ, ಸಿಟಿ ರವಿ,ಅರಗ ಜ್ಙಾನೇಂದ್ರ, ಅರವಿಂದ್ ಬೆಲ್ಲದ್ , ಆರ್ ಅಶೋಕ್, ಅಶ್ವತ್ಥ್ ನಾರಾಯಣ್ ಅವರನ್ನು ವಶಕ್ಕೆ ಪಡೆದರು. ವಶಕ್ಕೆ ಪಡೆಯುವಾಗ ಪೊಲೀಸರೊಂದಿಗೆ ಶಾಸಕ ವೇದವ್ಯಾಸ ಕಾಮತ್ ವಾಗ್ವಾದ ನಡೆಸಿದ್ರು. ಪೊಲೀಸ್ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಯಿತು.ಏ.. ಯಾಕೆ.. ತಳ್ಳುತ್ತೀಯಾ.. ಹೋಗ್ತೀಲ್ವಾ ಇಲ್ಲಿ..ಮೈ ಮುಟ್ಟಬೇಡ ಎಂದು ವೇದವ್ಯಾಸ್ ಕಾಮತ್ ಗರಂ ಆದ್ರು. ಅಲ್ಲದೇ ಪೊಲೀಸರು ತಳ್ಳಾಟ ಮಾಡ್ತಿರೋದಕ್ಕೆ ಶಾಸಕ ಸುನೀಲ್ ಕುಮಾರ್, ರಾಮಮೂರ್ತಿ ಮತ್ತು ಗರುಡಾ ಚಾರ್ಯ ಆಕ್ರೋಶ ಹೊರ ಹಾಕಿದ್ರು.ಮೈ ಮುಟ್ಟಬೇಡಿ, ತಳ್ಳಾಡ್ಬೇಡಿ ಎಂದು ಖಾಕಿ ಜೊತೆ ವಾಗ್ವಾದಕ್ಕೆ ಇಳಿದ್ರು.
ಇನ್ನು ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಚಿವ ಸುರೇಶ್ ಮೈಸೂರಿಗೆ ಹೋಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.ಹಗರಣದ ಕಡತಗಳನ್ನ ಸ್ವತಃ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಹಗರಣವನ್ನ ಸಂಪೂರ್ಣ ಮುಚ್ಚಿಹಾಕೋ ಪ್ರಯತ್ನ ಮಾಡುತ್ತಿದ್ದಾರೆ.ಕಾಂಗ್ರೆಸ್ ನಾಯಕರು ಕೇವಲ ಭಾಷಣ ಮಾಡ್ತಾರೆ. ಭಂಡ ಸರ್ಕಾರದ ಬಣ್ಣ ಬಯಲಾಗಿದೆ ಎಂದರು.ದಿನಕ್ಕೊಂದು ಹಗರಣ ಬಯಲಿಗೆ ಬರ್ತಿದೆ.ಮುಖ್ಯಮಂತ್ರಿಗಳ ಜಿಲ್ಲೆ ಮೈಸೂರಲ್ಲೇ ಹಗರಣ ನಡೆದಿದೆ.ವಿನಯ್ ಕುಲಕರ್ಣಿ ಸಚಿವರ ಮೇಲೆ ಆರೋಪ ಮಾಡ್ತಿದ್ದಾರೆ.ಬೆಲೆ ಏರಿಕೆ ನಡುವೆ ಹಗಲು ದರೋಡೆ ನಡೀತಿದೆ. ಇದರ ವಿರುದ್ದ ಹೋರಾಡುವವರನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ.ಇವರ ಭ್ರಷ್ಟಾಚಾರ ಮುಚ್ಚಿಡಲು ಪ್ರಯತ್ನ ಮಾಡುತ್ತಿದ್ದಾರೆ.ವಾಲ್ಮೀಕಿ ಹಗರಣಕ್ಕಿಂತ ದೊಡ್ಡದು ಮುಡಾ ಹಗರಣ. ಇದರ ಜೊತೆಗೆ ಬೇರೆ ಬೇರೆ ನಿಗಮದಲ್ಲೂ ಹಗರಣ ನಡೆದಿವೆ ಎಂದರು.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದು ಒಂದು ವರ್ಷ ಆಗಿದೆ.ಲೂಟಿ ಹೋಡೆಯೋಕೆ ಸರ್ಕಾರ ಸಿದ್ದತೆ ಮಾಡ್ತಿದೆ.ಒಂದಾದ ಮೇಲೊಂದು ಹಗರಣ ನಡೀತಿದೆ. ತೆಲಂಗಾಣ ಹಾಗೂ ಹೈದ್ರಾಬಾದ್ ಲೂಟಿ ಹಣ ಹೋಗಿದೆ.ನಾವು ಹೋರಾಟ ಮಾಡಿದ್ದಕ್ಕೆ ಸಚಿವರು ರಾಜೀನಾಮೆ ಕೊಟ್ಟಿದ್ರು.ರಾಜ ಭವನಕ್ಕೆ ಹೋದ್ಮೇಲೆ ಸಚಿವರು ರಾಜೀನಾಮೆ ನೀಡಿದ್ರು.ನಮ್ಮ ಹೋರಾಟವನ್ನ ಹತ್ತಿಕುತ್ತಿದ್ದಾರೆ.ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ.ಕೆಫೆ ಬ್ಲಾಸ್ಟ್ ಮಾಡುದವರನ್ನ ಹಿಡಿಯೋಕೆ ಪೊಲೀಸರನ್ನ ಬಿಟ್ಟಿಲ್ಲ.ಆದರೆ ನಮ್ಮನ್ನ ಹಿಡಿಯೋದಕ್ಕೆ ನೂರಾರು ಪೊಲೀಸರನ್ನ ಬಿಟ್ಟಿದ್ದಾರೆ.ಇದರ ವಿರುದ್ಧ ಹೋರಾಟ ಮಾಡುತ್ತೇವೆ.ವಾಲ್ಮೀಕಿ ಬೆನ್ನಲ್ಲೇ ಮುಡಾದಲ್ಲೂ ಹಗರಣ ನಡೆದಿದೆ.ಬದಲಿ ನಿವೇಶನದ ಗೋಲ್ಮಾಲ್ ಆಗಿದೆ.ಕಟಾ ಕಟಾ ಅಂತ ಹಗರಣ ನಡೆದಿದೆ.8೦ ಸಾವಿರ ಜನ ಅರ್ಜಿ ಹಾಕಿದವರಿಗೆ ಸೈಟ್ ಇಲ್ಲ.ಬಡವರಿಗೆ ಹಂಚಿಕೆಯಾಗಿರೋ ಸೈಟ್ ದೋಚಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.
ದೀಪದ ಕೆಳಗೆ ಲೂಟಿ ಮಾಡುತ್ತಿದ್ದಾರೆ.ಸುರ್ಜೇವಾಲಾ ಬೆಂಗಳೂರಿಗೆ ಬಂದು ಹೋಗಿದ್ರು. ಇಲ್ಲಿನ ಲೂಟಿ ಮಾಡಿ ದೇಶಕ್ಕೆ ಹಂಚುತ್ತಿದ್ದಾರೆ.ಯಾರ್ಯಾರಿಗೆ ಸೈಟ್ ಅಲಾಟ್ ಹಾಗಿದೆ, ಅದನ್ನ ರದ್ದು ಮಾಡಬೇಕು.ವಿಧಾನಸಭೆ ಹಾಗೂ ಪರಿಷತ್ ನಲ್ಲೂ ನಮ್ಮ ಹೋರಾಟ ಮಾಡುತ್ತೇವೆ.ಸರ್ಕಾರದ ಭ್ರಷ್ಟಾಚಾರಜನರ ಮುಂದೆ ಇಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ರು.











