ಬೆಂಗಳೂರು; ವಾಲ್ಮೀಕಿ ನಿಗಮದ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 15 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಿರ್ಧರಿಸಿದೆ.ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಮುತ್ತಿಗೆಗೆ ವಿಪಕ್ಷ ಬಿಜೆಪಿ ನಿರ್ಧರಿಸಿದ್ದು, ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸಭೆ ನಡೆಸಿ ವಿಧಾನಸೌಧ ಛಲೋ ಕೈಗೊಳ್ಳಲಿದೆಯ ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧಾರ.ತೆಗೆದುಕೊಳ್ಳಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ವಾಲ್ಮೀಕಿ ಹಗರಣ ಬಗ್ಗೆ ಚರ್ಚೆಯಾಗಿದೆ.ದಲಿತ ವಿರೋಧಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.ಕ್ಯಾಪ್ಟನ್ ಆಗಿ ಸಿದ್ದರಾಮಯ್ಯ, ಇಡೀ ಸಚಿವ ಸಂಪುಟ ದಲಿತರ ಹಣ ನುಂಗಲು ತಯಾರಿ ಮಾಡಿಕೊಂಡಿರುವುದು ವಿಷಾದನೀಯ ಎಂದರು.
ಸರ್ಕಾರದ ಯೋಜನೆ ಮೂಲಕ ದಲಿತ ಸಮುದಾಯದ ಏಳಿಗೆ ಮಾಡಬೇಕಿತ್ತು.ದಲಿತರಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ ಅಂತ ಬಿಜೆಪಿ ಒತ್ತಿ ಹೇಳಲಿದೆ.ವಾಲ್ಮೀಕಿ ಹಗರಣ, ಕಾರ್ಮಿಕರ ಇಲಾಖೆ ಹಗರಣ, ಎಸ್ ಸಿಪಿ-ಟಿಎಸ್ಪಿ ಹಗರಣಗಳ ಸರಮಾಲೆಯ ಸರ್ಕಾರ ಇದಾಗಿದೆ.ಜುಲೈ 15ರಂದು ವಿಧಾನಸೌಧ ಮುತ್ತಿಗೆಗೆ ಕರೆ ನೀಡಲಾಗಿದೆ.ವಾಲ್ಮೀಕಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಬರಲಿದೆ.ದಲಿತರ ಹಣ ಲೂಟಿ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು.ಸಿದ್ದರಾಮಯ್ಯ ದಲಿತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಥಳುಕು ಹಾಕಿದೆ.ನನ್ನದೇನೂ ತಪ್ಪಿಲ್ಲ ಅಂತ ಸಿಎಂ ಹೇಳುತ್ತಿದ್ದಾರೆ.62 ಕೋಟಿ ರೂ. ಪರಿಹಾರ ತನಗೆ ಸಿಗಬೇಕು ಎನ್ನುತ್ತಿದ್ದಾರೆ.ಆದರೆ ಈ ಜಮೀನು ಹಿಂದೆ ನೋಟಿಫಿಕೇಷನ್ ಆಗಿದೆ.ಭೂಸ್ವಾಧೀನ ಆರಂಭಿಸಿ ಬಳಿಕ ಒತ್ತಡ ಬಂದು ಡಿನೋಟಿಫಿಕೇಷನ್ ಮಾಡಿರುವ ಸಾಧ್ಯತೆ ಇದೆ.ಮಲ್ಲಿಕಾರ್ಜುನ ಅವರಿಂದ ಸೇಲ್ ಡೀಡ್ ಆಗಿದೆ.2009-10 ರಲ್ಲೂ ಭೂಸ್ವಾಧೀನ ಎಂದೇ ಪಹಣಿಯಲ್ಲಿ ಇದೆ.ಸಿಎಂ ಪತ್ನಿ ಹೆಸರಿಗೆ ಜಾಗ ಇದ್ದಿದ್ದರೆ ಭೂ ಸ್ವಾಧೀನ ಎನ್ನುವುದನ್ನು ಪಹಣಿಯಲ್ಲಿ ತೆಗೆದಿರಬೇಕಿತ್ತು.ಮುಡಾದವರು 3 ಎಕರೆ ಜಮೀನಿನಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಮಾಡಿದ್ದಾರೆ.ಆಗ ಇದು ಯಾವುದೂ ಸಿಎಂ ಕುಟುಂಬದ ಗಮನಕ್ಕೆ ಬಂದಿರಲಿಲ್ವಾ?.ಉದ್ದೇಶಪೂರ್ವಕವಾಗಿಯೇ ಆಗ ಮೌನವಾಗಿದ್ದರು.ಇವರದ್ದೇ ಜಮೀನು ಆಗಿದ್ದರೆ ಲೇಔಟ್ ಮಾಡುವುದನ್ನು ತಡೆಯಬೇಕಿತ್ತು.ಉದ್ದೇಶಪೂರ್ವಕವಾಗಿಯೇ ಅಭಿವೃದ್ಧಿ ಆಗುವುದನ್ನು ಕಾಯುತ್ತಿದ್ದರು.ಳಿಕ ಬದಲಿ ನಿವೇಶನ ಕೇಳುವ ನೆಪಕ್ಕೆ ಕಾಯುತ್ತಿದ್ದರು.2020-21 ರಲ್ಲಿ ಮುಡಾದಿಂದ ಇವರಿಗೆ ನಿವೇಶನ ಸಿಕ್ಕಿದೆ.ಆಗ ಯಾಕೆ ಬಂದು ಅದಕ್ಕೆ ಬೇಲಿ ಹಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಯಾವ ನಿಯಮದ ಆಧಾರದ ಮೇಲೆ ಸೈಟ್ ಕೇಳುತ್ತಾರೆ?.ಕಮರ್ಷಿಯಲ್ ಸೈಟ್ ಕೂಡಾ ಕೇಳುವಂತಿಲ್ಲ.ಆದರೂ 14 ಸೈಟ್ ಪಡೆದಿರುವುದು ಕಾನೂನು ಬಾಹಿರ.ಸಿಎಂ ಗಮನದಲ್ಲಿದ್ದೂ ಇಷ್ಟೆಲ್ಲಾ ತಪ್ಪು ಮಾಡಿದ್ದಾರೆ.ಹಿಂದೆ ಇವರೇ ಅರ್ಕಾವತಿ ಬಡಾವಣೆಯನ್ನು ರೀಡೂ ಹೆಸರಲ್ಲಿ ಹಗರಣ ಮಾಡಿದರು.ನೀವು ಸರಿಯಾಗಿದ್ದಿದ್ದರೆ ಯಾಕೆ ಜನರ ಮುಂದೆ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿಲ್ಲ?.ಸಿಎಂ ವರ್ತನೆ ಎಲ್ಲವನ್ನೂ ಮುಚ್ಚಿ ಹಾಕುವ ರೀತಿ ಇದೆ.ನಿಯಮ ಮೀರಿ ಬದಲಿ ನಿವೇಶನ ಪಡೆದಿದ್ದರೆ ಕ್ರಮ ಕೈಗೊಳ್ಳಬೇಕು.ಇಡೀ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ.ಕೂಡಲೇ ಇದನ್ನು ಸಿಬಿಐ ತನಿಖೆಗೆ ನೀಡಬೇಕು.ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಮಾಯಕರ ತರಹ ವರ್ತಿಸುತ್ತಿದ್ದಾರೆ.ಬಿಜೆಪಿ ಕಾಲದಲ್ಲಿ ನಡೆದಿರುವುದು ಅಂತಾರೆ.ಯಾರ ಕಾಲದಲ್ಲಿ ಆದರೂ ಡಿ ಫಾಲ್ಟರ್, ಡಿಫಾಲ್ಟರೇ.ಏನೇ ಆದರೂ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಬೇಕು.ಬೋರ್ಡ್ ಕೂಡಾ ಹಾಕದಿರುವುದು ಸಿದ್ದರಾಮಯ್ಯ ಅವರ ಜಾಣ ಕುರುಡುತನ.ಏನೇ ಡಿಫಾಲ್ಟ್ ಇದ್ದರೂ ಒಂದು ಅಥವಾ ಎರಡು ಸೈಟ್ ಪಡೆಯಬೇಕು.ಆದರೆ 50:50 ಹೆಸರಲ್ಲಿ 14 ಸೈಟ್ ಪಡೆದಿದ್ದಾರೆ.ಇದರಲ್ಲಿ ಮುಡಾ ತಪ್ಪು ಇಲ್ಲ.ಸಿದ್ದರಾಮಯ್ಯ ಅವರ ಕುಟುಂಬದ್ದೇ ತಪ್ಪು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.