ಬೆಂಗಳೂರಿನಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ದೊರೆತಿದೆ.ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ಮಾಡಿದ್ರು. ಆಟೋ ರಿಕ್ಷಾಕ್ಕೆ ಸ್ಟಿಕ್ಕರ್ ಅಂಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ಸಂಸದರಾದ ಪಿ.ಸಿ. ಮೋಹನ್, ಗೋವಿಂದ ಕಾರಜೋಳ , ಶಾಸಕ ಡಾ. ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಯಡಿಯೂರಪ್ಪನವರ ಹೋರಾಟದ ಫಲ ಪಕ್ಷ ಬೆಳೆದಿದ್ದನ್ನು ನೋಡಿದ್ದೇವೆ.ವಿಜಯೇಂದ್ರ ಅಧ್ಯಕ್ಷರಾದ ಮೇಲೆ ನವಚೈತನ್ಯ ಸಿಕ್ಕಿದೆ.ಯಾವ ರಾಜ್ಯದಲ್ಲಿ ಲೆಕ್ಕಕ್ಕೇ ಇಲ್ಲದ ಪಕ್ಷವಾಗಿತ್ತೋ ಅಲ್ಲಿ ಪ್ರಾಬಲ್ಯ ಪಡೆಯುತ್ತಿದ್ದೇವೆ.ಮೇಲು ಕೀಳು ಎಂಬ ಭೇಧಭಾವ ಇಲ್ಲದೇ ಕೆಲಸ ಮಾಡಬೇಕಿದೆ. ಹಬ್ಬದೋಪಾದಿಯಲ್ಲಿ ಮನೆ ಮನೆಗೆ ಹೋಗಿ ಸದಸ್ಯತ್ವ ಅಭಿಯಾನ ಮಾಡೋಣ.ರಾಜ್ಯದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎಂದು ಗೊತ್ತಿದೆ.ಯಾವ ಸಂದರ್ಭದಲ್ಲೂ ಚುನಾವಣೆ ಎದುರಿಸಬೇಕಾದ ಸಂದರ್ಭ ಬರಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಈ ಬಾರಿ ಎಷ್ಟು ಮತ ಬಿಜೆಪಿಗೆ ಬಂದಿದೆಯೋ ಅದರಲ್ಲಿ ಶೇ. 75% ಸದಸ್ಯತ್ವ ಆಗಬೇಕು.ಕಾಂಗ್ರೆಸ್ ನವರಿಗೆ ಸದಸ್ಯರು ಎಷ್ಟಿದ್ದಾರೆ ಎಂಬುದು ಮುಖ್ಯ ಅಲ್ಲ.ಕುಟುಂಬ ಇದೆಯೋ ಇಲ್ಲವೋ ಎನ್ನುವುದೇ ಮುಖ್ಯ ಅವರಿಗೆ.ರಾಹುಲ್ ಗಾಂಧಿ ದೇಶ ಬಿಟ್ಟು ಹೋದರೆ ಏನು ಕಥೆ?ಅವರದ್ದು ಲೀಡರ್ ಬೇಸ್ ಪಾರ್ಟಿ.ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದ್ದಾರಾ ಅನ್ನೋದೇ ಕಾಂಗ್ರೆಸ್ ಗೆ ಮುಖ್ಯ .ಕಾಂಗ್ರೆಸ್ ನಲ್ಲಿ ಅವರೇ ಒಂದು ರೂಪಾಯಿ ಕಟ್ಟಿ ಸದಸ್ಯತ್ವ ಮಾಡಿಕೊಳ್ಳುತ್ತಿದ್ದರು.ಹೆಚ್ಚು ಸದಸ್ಯತ್ವ ಆಗಿದೆ ಎಂದು ತೋರಿಸಲು ಈ ತರಹ ಮಾಡುತ್ತಿದ್ದರು.ಬಿಜೆಪಿಯಲ್ಲಿ ಉಚಿತವಾಗಿ ಸದಸ್ಯತ್ವ ಮಾಡುತ್ತಿದ್ದೇವೆ .ಬಿಜೆಪಿ ಜೀವ ಇರುವುದೇ ಕಾರ್ಯಕರ್ತರಲ್ಲಿ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿ ಕಾರ್ಯಕರ್ತರೇ ಪಕ್ಷದ ಪಿಲ್ಲರ್.ದೇಶದ ಹಿತಕ್ಕಾಗಿ ಕೆಲಸ ಮಾಡುವ ಪಕ್ಷ ಬಿಜೆಪಿ.ಕಾಂಗ್ರೆಸ್ ಪರಿವಾರ ಪಾರ್ಟಿ.ಕುಟುಂಬ ಮೊದಲು, ಪಕ್ಷ ನಂತರ, ದೇಶ ಕೊನೆಗೆ ಇದು ಕಾಂಗ್ರೆಸ್ ನೀತಿ.ಎಲ್ಲರೂ 75% ತಮ್ಮ ಗಮನವನ್ನು ಸದಸ್ಯತ್ವಕ್ಕಾಗಿ ನೀಡಬೇಕು.ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.ರೈತರಿಗೆ ನೀಡಬೇಕಾದ ಹಾಲಿನ ದರ ಕಡಿತ ಮಾಡಿದೆ.ಮುಡಾ ಸೇರಿದಂತೆ ಎಲ್ಲೆಡೆ ಹಗರಣ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲು ಅರ್ಹರಲ್ಲ.ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ಕಾಂಗ್ರೆಸ್ ಅಂದರೆ ಅಧಿಕಾರ ದಿಂದ, ಅಧಿಕಾರಕ್ಕೋಸ್ಕರ ಇರುವ ಪಕ್ಷ.ಅಧಿಕಾರ ಇಲ್ಲ ಅಂದರೆ ಕಾಂಗ್ರೆಸ್ ನವರು ನೀರಿನಿಂದ ಹೊರಬಿದ್ದ ಮೀನಿನಂತೆ ಆಗುತ್ತಾರೆ.ನಾವ್ಯಾರೂ ಕೋವಿಡ್ ದಿನಗಳನ್ನು ಮರೆಯುವಂತಿಲ್ಲ.ಎಲ್ಲರೂ ಸಂಕಷ್ಟದಲ್ಲಿದ್ದಾಗ ಬಿಜೆಪಿಯ ಕಾರ್ಯಕರ್ತರು ಯಾರೂ ಮನೆಯಲ್ಲಿ ಕೂರಲಿಲ್ಲ.ಸೆಪ್ಟೆಂಬರ್ 25 ರ ತನಕ ಮೊದಲ ಹಂತದ ನೋಂದಣಿ ನಡೆಯಲಿದೆ.ಅಕ್ಟೋಬರ್ 1ರಿಂದ ಎರಡನೇ ಹಂತದ ನೋಂದಣಿ ಶುರುವಾಗಲಿದೆ.ಎರಡನೇ ಹಂತದಲ್ಲಿ ರೈಲ್ವೇ ಸ್ಟೇಷನ್, ಬಸ್ ಸ್ಟಾಪ್ ಗಳಲ್ಲಿ ಮಾಸ್ ಡ್ರೈವ್ ನಡೆಯಲಿದೆ.ಪ್ರತಿಯೊಂದು ಬೂತ್ ನಲ್ಲಿ ಮೂವರು ನಾಲ್ವರು ಕಾರ್ಯಕರ್ತರನ್ನು ಜೋಡಿಸುವ ಕೆಲಸ ಆಗಲಿದೆ.ಪ್ರತಿಯೊಂದು ರಾಜ್ಯಕ್ಕೆ ಕೇಂದ್ರದಿಂದ ಒಬ್ಬರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗುತ್ತದೆ.ಪ್ರತಿ ಜಿಲ್ಲೆಗೂ ಓರ್ವ ಶಾಸಕರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗುತ್ತದೆ ಎಂದರು.










