ನವದೆಹಲಿ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ರಾಜ್ಯ ಬಿಜೆಪಿ ನಾಯಕರ ತಂಡ ಭೇಟಿ ಮಾಡಿತು. ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ತಂಡ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ ಸಿ.ಪಿ ಯೋಗೇಶ್ವರ್ ಗೆ ಚನ್ನಪಟ್ಟಣ ಟಿಕೆಟ್ ನೀಡುವಂತೆ ಮನವಿ ಮಾಡಿತು.ಭೇಟಿ ವೇಳೆ ಸಿ.ಪಿ ಯೋಗೇಶ್ವರ್, ಅಶ್ವಥ್ ನಾರಾಯಣ್,ಅರವಿಂದ್ ಬೆಲ್ಲದ್ ಉಪಸ್ಥಿತಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ಬಳಿಕ ಮಾತನಾಡಿದವಿಪಕ್ಷ ನಾಯಕ ಆರ್ ಅಶೋಕ್ ನಿನ್ನೆ ರಾತ್ರಿ ಚನ್ನಪಟ್ಟಣದ ವಿಚಾರ ಸುದೀರ್ಘ ಚರ್ಚೆಯಾಗಿದೆ. ಇಂದು ಬಿಎಲ್ ಸಂತೋಷ ಮತ್ತು ನಡ್ಡಾ ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ.ಚನ್ನಪಟ್ಟಣದ ಬಗ್ಗೆ ಹೆಚ್ಚು ಚರ್ಚೆಯಾಗಿದೆ ಎಂದರು. ಇನ್ನು ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಡಿಕೆಶಿ ಸದನದಲ್ಲಿ ಕಿವಿ ಮೇಲೆ ಹೂ ಇಟ್ಟು ಪ್ರತಿಭಟನೆ ಮಾಡಿದ್ರು.ಆದ್ರೆ ಚನ್ನಪಟ್ಟಣಕ್ಕೆ ಹೋಗಿ ಅಲ್ಲಿನ ಜನರ ಕಿವಿ ಮೇಲೆ ಹೂವಿಡಲು ಸಾಧ್ಯವಿಲ್ಲ.ಚನ್ನಪಟ್ಟಣ ಜನ ಜಾಣರಿದ್ದಾರೆ.ಮಂಡ್ಯ ವಿಚಾರದಲ್ಲೂ ಅದೇ ರೀತಿಯಲ್ಲಿ ಹೇಳಿದ್ರು. ಕುಮಾರಸ್ವಾಮಿ ಮೂರನೆ ಸ್ಥಾನಕ್ಕೆ ಹೋಗ್ತಾರೆ ಅಂದಿದ್ರು.ಆದರೆ ಕುಮಾರಸ್ವಾಮಿ ಕೇವಲ ಎರಡು ದಿನ ಪ್ರಚಾರಕ್ಕೆ ಹೋಗಿ ಗೆಲುವು ಸಾಧಿಸಿದ್ರು
ಕಳೆದ ಬಾರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಕೇವಲ 20 ಸಾವಿರ ವೋಟ್ ಬಂದಿದೆ.ಅದೇಗೆ ಗೆಲ್ಲುತ್ತಾರೆ, ಜನರು ಇವರ ನಾಟಕ ನೋಡಿದ್ದಾರೆ.ಡಿಕೆಶಿ ಚನ್ನಪಟ್ಟಣಕ್ಕೆ ವಿಸಿಟಿಂಗ್ ಡಾಕ್ಟರ್ ಇದ್ದ ಹಾಗೆ.ಚುನಾವಣೆ ಬಂದಾಗ ಮಾತ್ರ ಹೋಗ್ತಾರೆ.ವಿಸಿಟಿಂಗ್ ಡಾಕ್ಟರ್ ಆಪರೇಷನ್ ಇದ್ದಾಗ ಮಾತ್ರ ಹೋಗ್ತಾರಲ್ಲ ಹಾಗೆ ಡಿ ಕೆ ಶಿವಕುಮಾರ್ ಅವರು ಕೂಡ.ಎನ್ ಡಿ ಎ ನಾಯಕರು ಟಿಕೆಟ್ ಬಗ್ಗೆ ನಿರ್ಧಾರ ಮಾಡ್ತಾರೆ.ನಿಖಿಲ್ ಕುಮಾರಸ್ವಾಮಿ ಕೇತ್ರ ಸುತ್ತಾಡಿದ್ರೆ ತಪ್ಪೇನು? ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಫೇವರೇಟ್.ಅವರು ಜೆಡಿಎನ್ ಯುವ ಘಟಕದ ಅಧ್ಯಕ್ಷರು ಎಲ್ಲಿ ಬೇಕಾದ್ರು ಚುನಾವಣೆ ನಿಲ್ಲಬಹುದು.ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅವರು ಓಡಾಡಬಹುದು.ನಿಖಿಲ್ ಅವರು ಸ್ಪರ್ಧೆ ಮಾಡ್ತಾರಾ ಇಲ್ವಾ ಅಂತಾ ನೀವು ಅವರನ್ನೇ ಕೇಳಿ ಎಂದು ನವದೆಹಲಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.