ಮನೆ Latest News ಬೆಂಗಳೂರಿನಲ್ಲಿ ಬಿಜೆಪಿ ಮುಖಂಡರ ಪ್ರತ್ಯೇಕ ಸಭೆ

ಬೆಂಗಳೂರಿನಲ್ಲಿ ಬಿಜೆಪಿ ಮುಖಂಡರ ಪ್ರತ್ಯೇಕ ಸಭೆ

0

ಬೆಂಗಳೂರು; ರಾಜ್ಯದಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರ ವಾಪಸಾತಿ ಹೋರಾಟ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಬಿಜೆಪಿ ಮುಖಂಡರ ಪ್ರತ್ಯೇಕ ಸಭೆ ನಡೆಸಿದ್ರು.  ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಜೆಡಿಎಸ್ ಪರಾಜಿತ ಅಭ್ಯರ್ಥಿ ಎನ್.ಆರ್. ಸಂತೋಷ್ , ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಭಾಗಿಯಾಗಿದ್ರು.

ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜ್ಯದಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಕ್ರಮ ನಿವಾಸಿಗಳನ್ನು ಹೊರ ಹಾಕುವ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಾವು ವಾರ್ ರೂಂ ಸ್ಥಾಪನೆ ಮಾಡಿದ್ದೇವೆ. ಸುಮಾರು 1500 ಕ್ಕೂ ಹೆಚ್ಚು ದೂರುಗಳು ವಾರ್ ರೂಂಗೆ ಬಂದಿದೆ. 35 ಸಾವಿರಕ್ಕಿಂತ ಹೆಚ್ಚು ಅಕ್ರಮ ಬಾಂಗ್ಲಾದೇಶಿಗಳು ಕರ್ನಾಟಕದಲ್ಲಿ ಇದ್ದಾರೆ ಎಂಬ ಮಾಹಿತಿಯೂ ಬಂದಿದೆ. ಬೆಂಗಳೂರಿನಲ್ಲಿ ಕಸ, ಚಿಂದಿ ಆಯುವವರು, ಗಾರೆ, ಮನೆ ಕೆಲಸಕ್ಕೂ ಬಾಂಗ್ಲಾದೇಶಿಗಳು ಸೇರಿಕೊಂಡಿದ್ದಾರೆ. ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಫಿ ಎಸ್ಟೇಟ್ ಗಳಲ್ಲಿ ಸೇರಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಸುತ್ತೋಲೆ ಬಂದಿದ್ದರೂ ಕರ್ನಾಟಕ ಸರ್ಕಾರ ಈ ಸಂಬಂಧ ಯಾವುದೇ ಕ್ರ‌ಮ ವಹಿಸಿಲ್ಲ. ಅಕ್ರಮ ಬಾಂಗ್ಲಾದೇಶಿಗಳನ್ನು ಗುರುತಿಸಿ ವಾಪಸ್ ಕಳುಹಿಸಲು ಮೇ 30 ಡೆಡ್ ಲೈನ್ ಆಗಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ವಹಿಸದೇ ಇರುವುದರ ಹಿಂದಿನ ಅಜೆಂಡಾ ಗೊತ್ತಿಲ್ಲ.ಇವರ ಹಿಂದೆ 2500ಕ್ಕೂ ಹೆಚ್ಚು ಏಜೆಂಟ್ ಗಳು ಕೂಡಾ ಇದ್ದಾರೆ. ಜೂನ್ 10 ರ ಬಳಿಕ ನಮ್ಮ ತಂಡ ಕೆಲವು ಸ್ಥಳಗಳಿಗೆ ಭೇಟಿ ಕೊಡಲಿದೆ. ರಾಜ್ಯ ಸರ್ಕಾರ ಅಷ್ಟರಲ್ಲಿ ಸಕ್ರೀಯವಾದರೆ ಅವರನ್ನು ಹೊರ ಹಾಕುವಲ್ಲಿ ಸಹಾಯ ಆಗುತ್ತದೆ.ನಾವು ಪ್ರವಾಸ ಮಾಡಿದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ. ಎಂದರು.

ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ ಅಕ್ರಮ ಬಾಂಗ್ಲಾದೇಶಿಗಳಲ್ಲಿ ಡ್ರಗ್ ಪೆಡ್ಲರ್ಸ್ ಕೂಡಾ ಇದ್ದಾರೆ. ಈಗಾಗಲೇ ನಾವು ಪೊಲೀಸ್ ಇಲಾಖೆಯ ಮೂಲಕ ಸಾಕಷ್ಟು ಮಾಹಿತಿ ಪಡೆದಿದ್ದೇವೆ. ಕೇಂದ್ರ ಸರ್ಕಾರದ ನಿರ್ದೇಶನವನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ಪಾಲನೆ ಮಾಡಬೇಕು. ಅಕ್ರಮವಾಗಿ ನೆಲೆಸಿರುವವರನ್ನು ಗಡಿಪಾರು ಮಾಡಬೇಕು.ಚುನಾವಣೆಗೆ ನಿಲ್ಲಲು ಕೂಡಾ ಅವರು ತಯಾರಿ ಮಾಡಿಕೊಂಡಿದ್ದಾರೆ ಎಂದರು.

ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶಕ್ಕೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಮಾತನಾಡಿ ನಾವು ಸಹ ಬಿಜೆಪಿಯವರೇ.ಪಕ್ಷ ನಿಲುವು ನಮ್ಮ ನಿಲುವು ಒಂದೇ ಎಂದ ಅವರು ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಜನೌಷಧ ಕೇಂದ್ರಗಳ ಸ್ಥಗಿತ ವಿಚಾರದ ಬಗ್ಗೆ ಮಾತನಾಡಿ ಸರ್ಕಾರದ ಆದೇಶ ಬಹಳ ತಪ್ಪು. ಇದರಲ್ಲೂ ರಾಜ್ಯ ಸರ್ಕಾರ ರಾಜಕಾರಣ ಮಾಡುವುದು ಸರಿಯಲ್ಲ. ಅವರು ಬಡವರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಕೊಡುತ್ತಾರೆ. ಮೋದಿಯವರ ಫೋಟೋ ಇರುತ್ತದೆ ಅಂತ ಜನೌಷಧ ಕೇಂದ್ರ ತೆರೆಯಲು ಅವಕಾಶ ಕೊಡದಿರುವುದು ಸರಿಯಲ್ಲ.ಇದರ ಹಿಂದೆ ಮೆಡಿಕಲ್ ಮಾಫಿಯಾ ಸಹ ಇರಬಹುದು ಎಂದ್ರು.