ಮನೆ Latest News ಬಿಜೆಪಿಯಿಂದ ರಾಜ್ಯಪಾಲರ ಅಧಿಕಾರ ದುರ್ಬಳಕೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು

ಬಿಜೆಪಿಯಿಂದ ರಾಜ್ಯಪಾಲರ ಅಧಿಕಾರ ದುರ್ಬಳಕೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು

0

ಬೆಂಗಳೂರು: ಬಿಜೆಪಿಯಿಂದ ರಾಜ್ಯಪಾಲರ ಅಧಿಕಾರ ದುರ್ಬಳಕೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ರಾಜ್ಯಪಾಲರು ಸಾಂವಿಧಾನಿಕ ಹುದ್ದೆ.ದೂರುಗಳ ಬಗ್ಗೆ ವರದಿ ಕೊಡಿ ಅಂದ್ರೆ ತಪ್ಪಾ?ತನಿಖೆ ನಡೆಸುವ ಬಗ್ಗೆ ನಾವು ಯಾರು ಬೇಡ ಅಂದಿಲ್ಲ.ಎಸ್ ಐಟಿ ದೋಷಾರೋಪ ಪಟ್ಟಿಯಲ್ಲಿ ನಾಗೇಂದ್ರ ಹೆಸರು ಯಾಕೆ ಬಿಟ್ರಿ.ದೋಷಾರೋಪ ಪಟ್ಟಿಯಲ್ಲಿ ಕೈ ಬಿಟ್ಟಿದ್ದು ನಾವಾ?ಈ ಹಿಂದೆ ಭ್ರಷ್ಟಾಚಾರ ಮಾಡ್ತಿದ್ರು ಈಗಲೂ ಭ್ರಷ್ಟಾಚಾರ ಮಾಡುತ್ತಿದ್ದಾರೆ.ನಾನು ಅಸಹಾಯಕನಾಗಿ ಮಾತನಾಡುತ್ತಿಲ್ಲ ಎಂದಿದ್ದಾರೆ.

ಇನ್ನು ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ರಾಜ್ಯಪಾಲರ ದುರುಪಯೋಗ ಎಂದರೆ ಏನೂ ಅರ್ಥ?ಭ್ರಷ್ಟಾಚಾರ ನಡೆದಾಗ ಸರ್ಕಾರದಿಂದ ಯಾವುದೇ ಕ್ರಮ ಆಗದಿದ್ದಾಗ ನ್ಯಾಯಕ್ಕಾಗಿ ರಾಜ್ಯಪಾಲರ ಮೊರೆ ಹೋಗೋದು ಸಹಜ.ರಾಜ್ಯಪಾಲರಿಗೆ ದೂರು ನೀಡುವುದು ತಪ್ಪು ಎಂದರೆ ಹೇಗೆ?ರಾಜ್ಯಪಾಲರ ದುರುಪಯೋಗ ಎಂದರೆ ಕಾಂಗ್ರೆಸ್ ಕಾಲದಲ್ಲಿ ಆಗಿದ್ದು ದುರುಪಯೋಗನಾ ಎಂದು ಪ್ರಶ್ನಿಸಿದ್ದಾರೆ. ಕೆಂಪಣ್ಣ ವರದಿ ಯಾಕೆ ಮುಟ್ಟಿರಲಿಲ್ಲ.ಕೆಂಪಣ್ಣ ವರದಿಯಲ್ಲಿ ಯಾರ ಮೇಲೆ ಆರೋಪ ಬಂದಿತ್ತು ಸಿಎಂ ಮೇಲೆ ತಾನೆ?ಕೆಂಪಣ್ಣ ವರದಿಯನ್ನ ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲಾಗಿತ್ತು.ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ

ಇದರ ನಡುವೆ ಸಚಿವ ಕೃಷ್ಣ ಬೈರೆಗೌಡ ಕುಮಾರಸ್ವಾಮಿ ವಿರುದ್ಧ ದಾಖಲೆ ಬಿಡುಗಡೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಬಂಗಾರಪ್ಪ, ವೀರೇಂದ್ರ ಪಾಟೀಲ್ ಕಾಲದ ಯಾವುದಾದರೂ ಹಗರಣ ಇದ್ದಾರೆ ಅದನ್ನು ಹೊರಗೆ ತೆಗೆಯಲು ಹೇಳಿ.ಇವರು ಹರಿಶ್ಚಂದ್ರನ ಮಕ್ಕಳು ಬಂಗಾರಪ್ಪ ವೀರೇಂದ್ರ ಪಾಟೀಲ್ ಕಾಲ ಅದನ್ನ ಹುಡುಕಲು ಹೇಳಿ.ಅವರ ಹಗರಣ ಇವರ ಹಗರಣ ಹುಡುಕುತ್ತೇವೆ ಅನ್ನುತ್ತೀರಾ.ಇದು ಸರ್ಕಾರ ನಡೆಸುವ ರೀತಿ ಅಲ್ಲ ಎಂದಿದ್ದಾರೆ.

ಗವರ್ನರ್ ಅವಹೇಳನಕ್ಕೆ ಜಾತಿನಿಂದನೆ ಅಸ್ತ್ರ: ಕೈ ಪಡೆ ವಿರುದ್ಧ ಅಡ್ರಾಸಿಟಿ ಪ್ರಕರಣ ದಾಖಲಿಸಲು ಬಿಜೆಪಿ ಒತ್ತಾಯ

ಬೆಂಗಳೂರು; ಪರಿಶಿಷ್ಟ ಜಾತಿಗೆ ಸೇರಿದವರು ಎನ್ನುವ ಕಾರಣಕ್ಕೆ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಪೋಲಿಸ್ ಮಹಾನಿರ್ದೇಶಕರನ್ನು ರಾಜ್ಯ ಬಿಜೆಪಿ ಒತ್ತಾಯಿಸಿದೆ.

ಈ ಕುರಿತಂತೆ ಮಾಜಿ ಉಪ ಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಹಾಲಿ ಶಾಸಕರು, ಮಾಜಿ ಸಚಿವರುಗಳ ನಿಯೋಗ ಪೋಲಿಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಕಾಂಗ್ರೆಸ್ ನಾಯಕರು ರಾಜ್ಯಪಾಲರ ಕುರಿತು ನೀಡುತ್ತಿರುವ ಹೇಳಿಕೆಗಳು ಸಂವಿಧಾನಕ್ಕೆ ಮತ್ತು ಪರಿಶಿಷ್ಟ ಜನಾಂಗಕ್ಕೆ ಮಾಡಿದ ಅವಮಾನ. ಅಲ್ಲದೆ, ಈ ರೀತಿಯ ಹೇಳಿಕೆಗಳು ಅತ್ಯಂತ ಸೂಕ್ಷ್ಮವಾಗಿದ್ದು ಸಮಾಜವನ್ನು ಪ್ರಚೋದಿಸುವುದಾಗಿವೆ ಎನ್ನುವ ಗಂಭೀರ ಆರೊಪವನ್ನು ಬಿಜೆಪಿ ನಿಯೋಗ ಹೊರಿಸಿದೆ.ಸಂವಿಧಾನದ ಗದ್ದುಗೆಯಲ್ಲಿ ಕುಳಿತಿರುವ ವ್ಯಕ್ತಿಯ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡಿರುವ ಸಚಿವರಾದ ಜಮೀರ್ ಅಹಮದ್ ಖಾನ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಶಾಸಕರಾದ

ನಂಜೇಗೌಡ, ಐವಾನ್ ಡಿಸೋಜ ಹಾಗೂ ಇನ್ನೂ ಅನೇಕ ನಾಯಕರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸುವ ಜತತೆಗೆ ಗೂಂಡಾ ಕಾಯಿದೆಯಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.

ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಎದುರಿಸಿ ಆರೋಪಮುಕ್ತರಾಗಿ ಹೊರಬರಬೇಕು. ಅದನ್ನು ಬಿಟ್ಟು ರಾಜ್ಯಪಾಲರ ವಿರುದ್ಧ ವಾಗ್ದಾಳಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಮೇಲೆ ಆರೋಪ ಬಂದಾಗ ಅವರನ್ನು ಅಪರಾಧಿ ಎನ್ನುವುದಿಲ್ಲ. ನಿರಪರಾಧಿ ಎಂದು ಸಾಬೀತುಪಡಿಸುವ ಜವಾಬ್ದಾರಿ ಸಿದ್ದರಾಮಯ್ಯ ಮೇಲಿದೆ. ಅದಕ್ಕಾಗಿ ಅವರು ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ಸಂವಿಧಾನಿಕ ಹುದ್ದೆಯಲ್ಲಿರುವ, ರಾಷ್ಟ್ರಪತಿಗಳ ಪ್ರತಿನಿಧಿ ಎನಿಸಿದ ರಾಜ್ಯಪಾಲರನ್ನು ಅವಮಾನಿಸಿದ್ದಾರೆ.