ಮನೆ Latest News ಪಾರ್ಲಿಮೆಂಟ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆಗಿದ್ದಕ್ಕೆ ಬಿಜೆಪಿ ನಾಯಕರು ಖುಶ್

ಪಾರ್ಲಿಮೆಂಟ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆಗಿದ್ದಕ್ಕೆ ಬಿಜೆಪಿ ನಾಯಕರು ಖುಶ್

0

ಬೆಂಗಳೂರು; ಪಾರ್ಲಿಮೆಂಟ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆಗಿದ್ದಕ್ಕೆ ಬಿಜೆಪಿ ನಾಯಕರು ಖುಶ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನಾವೆಲ್ಲಾ ನಿರೀಕ್ಷೆ ಮಾಡಿದಂತೆ ಪಾರ್ಲಿಮೆಂಟ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆಗಿದೆ. ಅದಕ್ಕೆ ಬೆಂಬಲ ನೀಡಿದ ಕೊಟ್ಟ ಎಲ್ಲರಿಗೂ ಅಭಿನಂದನೆ, ಧನ್ಯವಾದ ತಿಳಿಸುತ್ತೇನೆ. ನಾನು ನಿರೀಕ್ಷೆ ಮಾಡಿದ್ದೆ, ಎಲ್ಲರದ್ದು ಸಹಕಾರ ಸಿಗುತ್ತೆ ಅಂತ. ಮೋದಿಗೆ ಅವರ ಕೈ ಬಲ ಪಡಿಸೋ ಕೆಲಸ ಮಾಡಿದ್ದಾರೆ, ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ ಎಂದ್ರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ ಕೇಂದ್ರದಲ್ಲಿ ವಕ್ಫ್ ಬಿಲ್ ಪಾಸ್ ಆಗಿದ್ದು ನಾವೆಲ್ಲಾ ಸ್ವಾಗತಿಸುತ್ತೇವೆ.ಬಹುಶಃ ಇಡೀ ದೇಶದ ಜನ ಸ್ವಾಗತ ಮಾಡುತ್ತಾರೆ. ಸಾರ್ವಜನಿಕ ರ ಆಸ್ತಿಪಾಸ್ತಿ, ರೈತರ ಆಸ್ತಿಪಾಸ್ತಿ ಗಳನ್ನು ವಿಚಾರಣೆ ಇಲ್ದೇ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಲಾಗ್ತಿತ್ತು,. ಅದನ್ನ ನಿವಾರಣೆ ಮಾಡಿ, ಹೊಸ ಮಸೂದೆ ಜಾರಿಗೆ ತರಲಾಗಿದೆ. ಅದನ್ನ ಕೇಂದ್ರ ಸರ್ಕಾರ ಮಾಡಿದೆ, ಬಹುಮತದಿಂದ ಬಿಲ್ ಆಗಿದೆ. ನಾನು ಸ್ವಾಗತಿಸುತ್ತೇನೆ. ರೈತರು, ಜನ ತಮ್ಮ ಜಮೀನು ಕಳೆದುಕೊಂಡಿದ್ದರು.ಇನ್ನಾದರೂ ಇಂತಹ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಸಿಗುತ್ತೆ ಅನ್ಸುತ್ತೆ.ಇಂತಹ ಕ್ರಾಂತಿಕಾರಿ ಮಸೂದೆ ಪಾಸ್ ಮಾಡಿರೋ ಮೋದಿ, ಅಮಿಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ್ರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ  ಒಂದು ಐತಿಹಾಸಿಕ ತೀರ್ಮಾನ ಎನ್ ಡಿಎ ಸರ್ಕಾರ ಮಾಡಿದೆ. ಬಹಳ ದಶಕಗಳ ನಿರೀಕ್ಷೆ ಇದು. ಇಡೀ ದೇಶದಲ್ಲಿ ಒಂದೇ ಕಾನೂನು ಇರಬೇಕಾಗುತ್ತದೆ. ವಕ್ಫ್ ಹೆಸರೇಳಿ ಅನೇಕರ ಜಮೀನು ಕಿತ್ತುಕೊಳ್ಳೋ ಕೆಲಸ ವಾಗಿದೆ. ನಮ್ಮ ರಾಜ್ಯದಲ್ಲೇ ಆಗಿದೆ. ಆದ್ರೆ ಈ ರೀತಿ ಅನ್ಯಾಯ ಆದ್ರೆ ಕೋರ್ಟ್ ಮೆಟ್ಟಿಲೇರಬಾರದು ಅಂದ್ರೆ ತಪ್ಪು.ಹೀಗಾಗಿ ನಾವು ಈ ಬಿಲ್ ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದ್ರು.

ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸೋದು ಕೇಂದ್ರ ಸರ್ಕಾರ: ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ಹೇಳಿಕೆ

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸೋದು ಕೇಂದ್ರ ಸರ್ಕಾರ ಎಂದು  ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಬೆಲೆ ಏರಿಕೆಗೆ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು  ಬೆಲೆ ಏರಿಕೆ ಬಿಜೆಪಿ ಪ್ರತಿಭಟನೆ ಮಾಡೋದು ಹೊಸದೇನಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ದರ ಹೆಚ್ಚಾಗಿದೆ. ಹಾಲು, ಪೆಟ್ರೋಲ್, ಡೀಸೆಲ್ ಎಲ್ಲವೂ ಹೆಚ್ಚು ಮಾಡಿದ್ದಾರೆ. ಸರ್ಕಾರ ಬೆಲೆ ಏರಿಕೆ ಸ್ವಲ್ಪ ಮಾಡಿದೆ ನಿಜ. ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸೋದು ಕೇಂದ್ರ ಸರ್ಕಾರ. ಕೆಲವೊಮ್ಮೆ ದರ ಹೆಚ್ಚಳ ಅನಿವಾರ್ಯ. ಅರ್ಥಶಾಸ್ತ್ರ ಅರ್ಥ ಆದವರು ಬೆಲೆ ಏರಿಕೆ ವಿರೋಧಿಸಲ್ಲ. ಬಿಜೆಪಿ ಬೀದಿಗೆ ಹೋಗಲಿ, ಮನೆಗೆ ಹೋಗಲಿ.ಕಾಂಗ್ರೆಸ್ ನ್ಯಾಯಯುತವಾಗಿ ಬೆಲೆ ಏರಿಸುತ್ತೆ ಆದ್ರೆ ಕಾಂಗ್ರೆಸ್ ಬಡವರ, ಯುವಕರ, ಎಲ್ಲರ ಪರವಾಗಿದೆ ಎಂದರು,

ಸಚಿವ ಸ್ಥಾನದ ಆಕಾಂಕ್ಷಿನಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಕರ್ನಾಟಕ ವಿಧಾನಸಭೆಯಲ್ಲಿ ಅತ್ಯಂತ ಹಿರಿಯ ಸದಸ್ಯ . 1983ರಿಂದ ಶಾಸಕ. ಹಲವಾರು ಬಾರಿ ಸಚಿವ ಇದ್ದೆ, ಅನೇಕ ಅಧಿಕಾರ ಅನುಭವಿಸಿದ್ದೇನೆ. ಕ್ಯಾಬಿನೆಟ್ ರೀಷಫಲ್ ಇನ್ನೊಂದು ಮತ್ತೊಂದು ನಮಗೆ ಗೊತ್ತಿಲ್ಲ. ಸಿಎಂ ಹೋಗಿರೋದು ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾಟನೆಗೆ. ನನಗೆ ಸಚಿವ ಸ್ಥಾನ ಕೊಡೋಬಗ್ಗೆ ಗೊತ್ತಿಲ್ಲ. ನಾನು ನಿರೀಕ್ಷೆ ಮಾಡಿಲ್ಲ. ಎಲ್ಲಾ ಭಗವಂತನ ಕೃಪೆ ಎಂದು ದೇಶಪಾಂಡೆ ಹೇಳಿದ್ದಾರೆ.

ಹರೀಶ್ ಪೂಂಜಾ ಮಾತನ್ನ ತೀವ್ರವಾಗಿ ಖಂಡಿಸ್ತೇನೆ. ಸ್ಪೀಕರ್ ಸ್ಥಾನದಲ್ಲಿ ಯಾರೇ ಇರಲಿ ಜಾತಿ, ಧರ್ಮದ ಪ್ರಕಾರ ನಡೆಯಲ್ಲ. ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ತಾರೆ. ಯು.ಟಿ ಖಾದರ್ ಆದರ್ಶ ವ್ಯಕ್ತಿ. ಹರೀಶ್ ಪೂಂಜಾ ಅವರ ಹೇಳಿಕೆ ಖಂಡಿಸ್ತೇನೆ. ಅವರು ಸ್ಟೇಜ್ ಯಾಕೆ ಹತ್ತಬೇಕು?. ಎಲ್ಲರೂ ಯಾಕೆ ಸ್ಪೀಕರ್ ಸುತ್ತುವರಿಯಬೇಕು?. ಅಶೋಕ್ ವಿಪಕ್ಷ ನಾಯಕರಿದ್ದಾರೆ. ಅವರು ನನಗೆ ಒಳ್ಳೆಯ ಸ್ನೇಹಿತ. ಸ್ಪೀಕರ್ ಕರೆದ್ರು ಅಂತ ಅಶೋಕ್ ಯಾಕೆ ಹೇಳಬೇಕು. ಸ್ಪೀಕರ್ ಯಾಕೆ ಮೇಲೆ ಬನ್ನಿ ಅಂತ ಕರೀತಾರೆ ಎಂದು ಪ್ರಶ್ನಿಸಿದ್ದಾರೆ.

ಹನಿಟ್ರಾಪ್ ವಿಚಾರದ ಬಗ್ಗೆ ಮಾತನಾಡಿದ ಅವರು  ನಾನು ಸದನದಲ್ಲಿದ್ದೆ. ಆ ಚರ್ಚೆ ಸದನದಲ್ಲಿ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ತಪ್ಪು. ಅವರು ಏನು ಹೇಳಿದ್ರು ಅದರ ಬಗ್ಗೆ ಮಾತಾಡಲ್ಲ. ಇಂತಹ ವಿಚಾರ ಸದನದಲ್ಲಿ ಚರ್ಚೆ ಮಾಡೋದು ಸರಿಯಲ್ಲ. ವೈಯಕ್ತಿಕ ವಿಚಾರ ಸದನದಲ್ಲಿ ಚರ್ಚೆ ಮಾಡಬಾರದು. ತನಿಖೆ ಆಗಬೇಕು ಅಂದಾಗ ಸಿಎಂ ಗಮನ ಕೊಡಬೇಕು ಎಂದ್ರು. ವಕ್ಫ್ ತಿದ್ದುಪಡಿ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದಕ್ಕೆ ನಮ್ಮ ವಿರೋಧ ಇದೆ. ಇದರಿಂದ ಸಮಸ್ಯೆಗಳಿವೆ. ಸಮಸ್ಯೆಗಳಿದ್ದ ಕಾರಣಕ್ಕೆ ನಾವು ವಿರೋಧ ಮಾಡ್ತಿರೋದು.ಹಲವು ಸಮಸ್ಯೆಗಳಿವೆ ಎಂದಿದ್ದಾರೆ.