ಬಾಗಲಕೋಟೆ; ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ರು. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಉಪ ಚುನಾವಣೆ ಬಂದ ಕಾರಣ ಯುಕೆಪಿ ಕುರಿತು ಚರ್ಚೆ ಆಗುತ್ತಿದೆ. ಯುಕೆಪಿ ಮೊದಲ ತೀರ್ಪು ಬಂದ ಬಳಿಕ ಡಿಪಿಆರ್ ಮಾಡಲು 16 ವರ್ಷ ತೆಗೆದುಕೊಂಡರು. ಬಿಜೆಪಿ ಕಾಂಗ್ರೆಸ್ ಇದ್ದಾಗ ಏನೆಲ್ಲಾ ಕೆಲಸ ಅಗಿದೆ ಎಂದು ದಾಖಲೆ ಬಿಡುಗಡೆ ಮಾಡಬೇಕಿದೆ. ಯುಕೆಪಿ ಕಾಮಗಾರಿ ಹಿನ್ನಡೆಗೆ ಕಾಂಗ್ರೆಸ್ ಕಾರಣ ಎಂದಿದ್ದಾರೆ.
ನಮ್ಮ ಸರ್ಕಾರ ಮುಳವಾಡ ಗುತ್ತಿ ಬಸವಣ್ಣ ಹಾಗೂ ಇತರೆ ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೆವು.ಕಾಂಗ್ರೆಸ್ ಸರ್ಕಾರ ಎ ಹಾಗೂ ಬಿ ಸ್ಕೀಂ ಎನ್ನುತ್ತಿದ್ದರು. ಬೇರೆ ರಾಜ್ಯದಲ್ಲಿ ಇಲ್ಲದ ಎ ಹಾಗೂ ಬಿ ಸ್ಕೀಂ ಇಲ್ಯಾಕೆ ಎಂದು ಕಾಮಗಾರಿ ನಾವು ಮಾಡಿದ್ದೇವೆ. ಯುಕೆಪಿ ಯೋಜನೆ ಕಾಮಗಾರಿಗಳು ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗಲೇ ಆಗಿವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ವಿಜಯಪುರದ ರೇವಣಸಿದ್ದೇಶ್ವರ ಏತ ನಿರಾವರಿ ಯೋಜನೆ ಮಾಡಿದ್ದು ನಾವೇ. ಬಿಜೆಪಿ ಸರ್ಕಾರದಲ್ಲಿ ಸಾಲ ಮಾಡಿದ್ದಾರೆಂದು ಸಿಎಂ ಹೇಳುತ್ತಾರೆ. ಅವರು ಸುಳ್ಳರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲೇ ಹೆಚ್ಚು ಸಾಲವಾಗಿದೆ. ಕೃಷ್ಣಾ ನ್ಯಾಯಾಧಿಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಮೂರು ರಾಜ್ಯಗಳ ವಾದ ಮುಗಿದಿದೆ
ಒಂದು ರಾಜ್ಯದ ವಾದ ಬಾಕಿ ಇದೆ. ವಾದ ಮುಗಿದ ಬಳಿಕ ರಾಜ್ಯದ ಪರ ತೀರ್ಪು ಬರಲಿ. ರಾಜ್ಯದ ಪರ ಉತ್ತಮ ವಾದವನ್ನು ನ್ಯಾಯವಾದಿಗಳು ಮಾಡಬೇಕಿದೆ. ಅಂತಿಮವಾಗಿ ತೀರ್ಪು ಬಂದ ಬಳಿಕ ತ್ವರಿತವಾಗಿ ಕಾಮಗಾರಿ ಮಾಡಬೇಕೆಂದು ಒತ್ತಾಯಿಸಿಬೇಕು ಎಂದಿದ್ದಾರೆ.











