ಬೆಂಗಳೂರು; ಜಯನಗರ ಶಾಸಕ ಮತ್ತು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 119ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ವೀಕ್ಷಿಸಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಸಿ.ಕೆ. ರಾಮಮೂರ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಇನ್ನು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಕರಾವಳಿಯ ಹುಲಿ ವೇಷ ಕುಣಿತದ ಬಗ್ಗೆ ಉಲ್ಲೇಖಿಸಿದರು. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹುಲಿ ವೇಷ ತೊಟ್ಟು ಕುಣಿತ ಕಣ್ಮನ ಸೆಳೆಯುತ್ತದೆ. ಇದು ವಿಶೇಷ ಹಾಗೂ ಗಮನ ಸೆಳೆಯುವ ಕಾರ್ಯಕ್ರಮ. ಕರ್ನಾಟಕದಲ್ಲಿ ಬಿಆರ್ ಟಿ ಫಾರೆಸ್ಟ್ ಇದೆ. ಇಲ್ಲಿ ಅತಿ ಹೆಚ್ಚು ಹುಲಿಗಳಿರುವ ಪ್ರದೇಶವಾಗಿದೆ. ಹುಲಿಗಳನ್ನು ಉಳಿಸುವುದರಲ್ಲಿ ಸ್ಥಳೀಯ ಸೋಲಿಗರ ಪಾತ್ರ ದೊಡ್ಡದಿದೆ. ಇದರ ಕ್ರೆಡಿಟ್ ಸ್ಥಳಿಯ ಸೋಲಿಗರಿಗೆ ಹೋಗಲಿದೆ.ಪ್ರಾಣಿ-ಮಾನವ ಸಂಘರ್ಷ ನಡೆಯುತ್ತಲೇ ಇರುತ್ತದೆ.ಆದರೂ ಅದನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ ಎಂದರು.
ಇನ್ನು ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನ್ ಕೀ ಬಾತ್ ನಲ್ಲಿ ಎಲ್ಲಾ ಕ್ಷೇತ್ರಗಳ ಬಗ್ಗೆ ಪ್ರಧಾನಿ ಮಾತಾಡಿದ್ದಾರೆ. ಎಐ, ಸ್ಪೇಸ್, ಮಹಿಳಾ ದಿನಾಚರಣೆ, ಕ್ರೀಡೆ, ಬೊಜ್ಜಿನ ಬಗ್ಗೆಯೂ ಮಾತಾಡಿದ್ದಾರೆ. ಎಣ್ಣೆ ಪದಾರ್ಥ ಕಡಿಮೆ ಮಾಡುವಂತೆ ಹೇಳಿದ್ದಾರೆ.ಪರೀಕ್ಷಾರ್ಥಿಗಳಿಗೆ ಒತ್ತಡ ಇಲ್ಲದೇ ಪರೀಕ್ಷೆ ಎದುರಿಸುವಂತೆ ಹೇಳಿದ್ದಾರೆ. ಕರ್ನಾಟಕದ ಎರಡು ವಿಚಾರ ಮಾತಾಡಿದ್ದಾರೆ. ಸ್ವಿಮ್ಮಿಂಗ್ ಚಾಂಪಿಯನ್ ನೆನಪು ಮಾಡಿಕೊಂಡಿದ್ದಾರೆ. ರಾಜ್ಯದ ಹುಲಿ ಸಂರಕ್ಷಣೆ ಬಗ್ಗೆ ಮಾತಾಡಿದ್ದಾರೆ ಎಂದರು.
ಬೆಳಗಾವಿ ಹಲ್ಲೆ ಘಟನೆ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ ಇದು ಯಾರೂ ಕೂಡಾ ಕ್ಷಮಿಸಲು ಸಾಧ್ಯವಿಲ್ಲದ ಘಟನೆ .ಈ ನಾಡಿನಲ್ಲಿದ್ದು, ನೀರನ್ನು ಕುಡಿದು ಈ ರೀತಿ ಮಾಡಿದ್ದಾರೆ. ಕನ್ನಡಿಗರನ್ನು ತೇಜೋವಧೆ ಮಾಡುವುದನ್ನು ಕ್ಷಮಿಸಲು ಸಾಧ್ಯವಿಲ್ಲ .ಕನ್ನಡ ಸಂಘಟನೆಯವರ ಹೇಳಿಕೆ ಗಮನಿಸಿದ್ದೇನೆ, ಅವರೊಂದಿಗೆ ನಾವಿದ್ದೇವೆ. : ಕನ್ನಡದ ವಿರುದ್ದ ಮಾತನಾಡುವದು, ರಾಜ್ಯದ ಬಗ್ಗೆ ಪಿತೂರಿ ಮಾಡುವುದು ಸಹಿಸಲು, ಕ್ಷಮಿಸಲು ಸಾಧ್ಯವಿಲ್ಲ. ನಾವೆಲ್ಲಾ ಕನ್ನಡಿಗರು ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ಅಂತಹವರನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ, ನಾವು ಮಾಡಬೇಕಿದೆ ಎಂದರು.
ಬೆಂಗಳೂರಿನಲ್ಲಿ ರೌಡಿ ಶೀಟರ್ ಕೊಲೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ. ಉದಯಗಿರಿ ಘಟನೆಯೂ ಒಂದು ಉದಾಹರಣೆ.ಪೊಲೀಸ್ ಸ್ಟೇಷನ್‌ಗೇ ದಾಂಧಲೆ ಮಾಡುತ್ತಿದ್ದಾರೆ. ಅಶೋಕ್ ನಗರ ಘಟನೆಯಿಂದ ಸುರಕ್ಷತೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ ಅಂತ ಹೇಳಿದ್ದಾರೆ. ಇದು ಮತ್ತಷ್ಟು ಘಟನೆಗಳಿಗೆ ಕಾರಣವಾಗಲಿದೆ. ಈ ರೀತಿ ಹೇಳಿಕೆಯಿಂದ ದೇಶ ದ್ರೋಹಿಗಳಿಗೆ ಮತ್ತಷ್ಟು ಆನೆ ಬಲ ಬಂದಂತೆ ಆಗಲಿದೆ ಎಂದರು.
ನಾನು ರಾಜೀನಾಮೆ ನೀಡುತ್ತೇನೆ ಎನ್ನುವ ಧಾಟಿಯಲ್ಲಿ ಗೃಹ ಮಂತ್ರಿ ಮಾತಾಡಿದರೆ ದೇಶ ದ್ರೋಹಿಗಳಿಗೆ ಆನೆ ಬಲ ಬಂದಂತೆ ಆಗುತ್ತದೆ. ನಿಮ್ಮನ್ನು ಜನ ಆಯ್ಕೆ ಮಾಡಿದ್ದು ಒಳ್ಳೆಯ ಆಡಳಿತ ನೀಡಲು. ನಾಳೆ ನಾನು ಮೈಸೂರಿಗೆ ಹೋಗುತ್ತೇನೆ.ಮೈಸೂರು ಚಲೋ ಪ್ರತಿಭಟನೆಯಲ್ಲಿ ಭಾಗಿ ಆಗುತ್ತೇನೆ ಎಂದು ತಿಳಿಸಿದರು.










