ಮನೆ Latest News ಜನರ ತೆರಿಗೆಯಲ್ಲಿ ಕಾಂಗ್ರೆಸ್ ಚೇಲಾಗಳಿಗೆ ಹಣ ಕೊಡುತ್ತಿದ್ದಾರೆ; ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್...

ಜನರ ತೆರಿಗೆಯಲ್ಲಿ ಕಾಂಗ್ರೆಸ್ ಚೇಲಾಗಳಿಗೆ ಹಣ ಕೊಡುತ್ತಿದ್ದಾರೆ; ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ

0

ಬೆಂಗಳೂರು: ಜನರ ತೆರಿಗೆಯಲ್ಲಿ ಕಾಂಗ್ರೆಸ್ ಚೇಲಾಗಳಿಗೆ ಹಣ ಕೊಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಸೌಧದಿಂದ ರಾಜಭವನಕ್ಕೆ ಬಿಜೆಪಿ-ಜೆಡಿಎಸ್ ಶಾಸಕರು ಪಾದಯಾತ್ರೆಯಲ್ಲಿ ತೆರಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿಗಳ ರದ್ದತಿಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಪ್ರತಿಭಟನೆ ನಡೆಸಿತು. ವಿಧಾನಸೌಧದಿಂದ ರಾಜಭವನಕ್ಕೆ ಬಿಜೆಪಿ-ಜೆಡಿಎಸ್ ನಿಯೋಗ ಸಾಗಿತು. ಬಳಿರಕ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದ್ರು.

ಬಳಿಕ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಳೆದ ಎರಡು ವರ್ಷದಲ್ಲಿ ಒಂದಿಲ್ಲೊಂದು ತೆರಿಗೆಯನ್ನು ಸರ್ಕಾರ ಹಾಕುತ್ತಿದೆ. ಜನರ ಬಾಳು ಬೀದಿಗೆ ಬಂದಿದೆ. ಸಾಲವನ್ನು  ಸಿದ್ದರಾಮಯ್ಯ ತೀರಿಸುತ್ತಾರಾ? ಡಿ.ಕೆ. ಶಿವಕುಮಾರ್ ತೀರಿಸುತ್ತಾರಾ?. ಜನರ ತೆರಿಗೆಯಲ್ಲಿ ಕಾಂಗ್ರೆಸ್ ಚೇಲಾಗಳಿಗೆ ಹಣ ಕೊಡುತ್ತಿದ್ದಾರೆ. ಹಲವು ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲ.ಈ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಅಧಿಕಾರಿಗಳಿಗೂ ನೆಮ್ಮದಿ ಇಲ್ಲ. ಇವರು ಎಲ್ಲಿ‌ ಕರೆಯುತ್ತಾರೋ ಅಲ್ಲಿ ಹೋಗಬೇಕು.ಅತಿಥಿ ಉಪನ್ಯಾಸಕರಿಗೆ 12 ಸಾವಿರ, ಇವರು ಫ್ರೀಯಾಗಿ ತಿನ್ನುವವರಿಗೆ 40 ಸಾವಿರ. 60% ಕಮೀಷನ್ ಬಗ್ಗೆ ಗುತ್ತಿಗೆದಾರರು ಹೇಳಿದ್ದಾರಲ್ಲಾ. ಅದರಲ್ಲಿ ನೀವು ಅವರಿಗೆ ದುಡ್ಡು ಕೊಡಿ .ತೆರಿಗೆ ಹಣವನ್ನು ಯಾಕೆ ಕೊಡಬೇಕು?. ಡಿಬಿಟಿ ಮೂಲಕ ಗ್ಯಾರಂಟಿ ಹಣ ಸಂದಾಯ ಆಗುತ್ತಿರುವುದು. ಹೀಗಿದ್ದಾಗ ಈ ಚೇಲಾಗಳ‌ ಕೆಲಸ ಏನು?.ಕಾಲೇಜುಗಳಲ್ಲಿ ಗೌರವ ಶಿಕ್ಷಕರನ್ನು ಕೊಡುತ್ತಿಲ್ಲ, ಹಾಲಿನ ಸಬ್ಸಿಡಿ ಕೊಡುತ್ತಿಲ್ಲ. ಆದರೆ ಇವರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗಬೇಕು. ವಿಧಾನ ಸೌಧವನ್ನು ಕಾಂಗ್ರೆಸ್ ಆಫೀಸ್ ಮಾಡಿಕೊಂಡಿದ್ದಾರೆ.ಸರ್ಕಾರದ ಕೆಲಸ ಕಾಂಗ್ರೆಸ್ ಕೆಲಸ ಆಗಿದೆ. ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ಕೊಡಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ಬಿಜೆಪಿ, ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಸರ್ಕಾರದ ಅಸಾಂವಿಧಾನಿಕ ನಡೆ ಬಗ್ಗೆ ಹೇಳಿದ್ದೇವೆ. ಗ್ಯಾರಂಟಿ ಜಾರಿ ಸಮಿತಿಗಳನ್ನು ಅಸಾಂವಿಧಾನಿಕವಾಗಿ ರಚಿಸಿರುವುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.ಇವರಿಂದ ಶಾಸಕರ ಹಕ್ಕುಗಳು ಮೊಟಕು ಆಗುತ್ತಿವೆ.ಸರ್ಕಾರದಿಂದ ವೇತನ ಕೊಡಲಾಗುತ್ತಿದೆ. ಸರ್ಕಾರಕ್ಕೆ ತಿಳಿ ಹೇಳುವ ಕೆಲಸ ಮಾಡಿ ಅಂತ ಮನವಿ ಮಾಡಿದ್ದೇವೆ.ನನ್ನ ಕ್ಷೇತ್ರದಲ್ಲೇ ಗ್ಯಾರಂಟಿ ಸಮಿತಿ ಅಧ್ಯಕ್ಷರು ಸಚಿವರ ಮೂಲಕ ಹಸ್ತಕ್ಷೇಪ ಮಾಡುತ್ತಿದ್ದಾರೆ, ಶಾಸಕರ ಹಕ್ಕುಚ್ಯುತಿ ಆಗಿದೆ.ಇದರ ಬಗ್ಗೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತಿವೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಸ್ಥಗಿತಗೊಳಿಸಲು ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ

ಬೆಂಗಳೂರು; ಗ್ಯಾರಂಟಿ ಅನುಷ್ಠಾನ ಸಮಿತಿ ಸ್ಥಗಿತಗೊಳಿಸಲು ಆಗ್ರಹಿಸಿ ಬಿಜೆಪಿ ನಾಯಕರು ಕೆಂಗಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್, ಸಿಟಿ ರವಿ, ರವಿಕುಮಾರ್, ಸಿಸಿ ಪಾಟೀಲ್, ವಿಜಯೇಂದ್ರ, ಸುನೀಲ್ ಕುಮಾರ್ ಭಾಗಿಯಾಗಿದ್ದರು.

ಭಿತ್ತಿ ಪತ್ರ ಹಿಡಿದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ರು. ಲೂಟಿ ಕೋರ ಕಾಂಗ್ರೆಸ್ ಸರ್ಜಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗಿದ್ರು. ರಾಜ್ಯದ ಹಣ ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುವ ಸರ್ಕಾರಕ್ಕೆ ಧಿಕ್ಕಾರ. ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ರು. ಮುಚ್ಚಿಬಿಡಿ ಮುಚ್ಚಿಬಿಡಿ ಕಾಂಗ್ರೆಸ್ ಕಚೇರಿ ಮುಚ್ಚಿ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ಬಿಜೆಪಿ ಶಾಸಕರು, ಮಾಜಿ ಸಚಿವರು, ಪರಿಷತ್ ಸದಸ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಯಿತು. ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪ್ರತಿಭಟನೆ  ನಡೆಸಿತು. ಶಾಸಕರು ಮತ್ತು ಪರಿಷತ್ ಸದಸ್ಯರಿಂದ ಪ್ರೊಟೆಸ್ಟ್ ನಡೆಯಿತು. ಭಿತ್ತಿ ಪತ್ರ ಹಿಡಿದು ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಇವರು ಕಲೆಕ್ಷನ್ ಮಾಸ್ಟರ್ ಗಳು.ಇಂತವರನ್ನ ನೇಮಕ ಮಾಡಿ ಸರ್ಕಾರಿ ಹಣ ಕೊಡುತ್ತಿದ್ದಾರೆ. ಸರ್ಕಾರದ ಹಣ, ಬೇಕಾದ್ರೆ ಹೋಗಿ ಬಿಕ್ಷೆ ಬೇಡಲಿ ಎಂದು ಆಕ್ರೋಶ ಹೊರ ಹಾಕಿದ್ರು. ಎಲ್ಲಾದಕ್ಕೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಯಾಕೆ ಹಾಕಿದ್ದಾರೆ ಅಂದ್ರೆ ಕಾಂಗ್ರೆಸ್ ಉದ್ಧಾರ ಮಾಡೋದಕ್ಕೆ ಟ್ಯಾಕ್ಸ್ ಹಾಕುತ್ತಿದ್ದಾರೆ. ರಾತ್ರಿ ಕನ್ನ ಹೊಡೀತಿದ್ದಾರೆ. ಹಗಲು ದರೋಡೆ ಮಾಡಿ ಬಡವರ ಹಣ ಲೂಟಿ ಮಾಡುತ್ತಿದ್ದಾರೆ. ಸಂಬಳ ಇಲ್ದೇ ಆಶಾ ಕಾರ್ಯಕರ್ತೆಯರು ಸಂಕಷ್ಟ ಪಡುತ್ತಿದ್ದಾರೆ ಎಂದ್ರು.

ಟ್ಯಾಕ್ಸ್ ಪೇಯರ್ ಹಣ ಲೂಟಿ ಹೊಡೀತಿದ್ದಾರೆ.ಶಾಸಕರು, ಪಿಡಿಓ ಇದ್ದಾರೆ,ಆದ್ರೆ ಈಗ ನೇಮಕ ಆಗಿರೋರು ಏನ್ ಸ್ಪೆಷಲ್. ಇವರೆಲ್ಲಾ ಆಕ್ಸ್ ಫರ್ಡ್ ವಿವಿ ಯಿಂದ ಪದವಿ ಪಡೆದಿದ್ದಾರಾ?. ಈಗಾಗಲೇ ಸರ್ಕಾರ ಪಾಪರ್ ಆಗಿದೆ ಸರ್ಕಾರ. ಡಾಕ್ಟರ್ ಗಳಿಗೆ ಸಂಬಳ ನೀಡೋದಕ್ಕೆ ಆಗ್ತಿಲ್ಲ. ಪೆನ್ಷನ್ ಕೊಡ್ತಿಲ್ಲ, ಆದ್ರೆ ಇವರಿಗರ ಒಂದನೇ ತಾರೀಖು ಸಂಬಳ ಕೊಡ್ತಾರೆ ಎಂದ್ರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಮಾನ ಮರ್ಯಾದೆ ಇದ್ರೆ ವಿವಿ ಮುಚ್ಚೋದರ ಬದಲು ಕಾಂಗ್ರೆಸ್ ಮುಚ್ಚಿಬಿಡಿ. ದೇಶಕ್ಕೆ ಕಾಂಗ್ರೆಸ್ ಮುಚ್ಚಿ ದ್ರೆ ಏನೂ ಆಗಲ್ಲ. ಕಾಂಗ್ರೆಸ್ ಇರೋವರೆಗೂ ದೇಶಕ್ಕೆ ಅಭಿವೃದ್ಧಿ ಸಾಧ್ಯವಿಲ್ಲ.ಕಾಂಗ್ರೆಸ್ ಮುಚ್ಚಿಬಿಡಿ, ಎಲ್ಲರೂ ಅರಾಮವಾಗಿ ಇರ್ತಾರೆ. ಸರ್ಕಾರ್ ಖಜಾನೆ ಹಣ ಕೊಡುತ್ತಿದ್ದೀರಾ, ಇದನ್ನ ಇಲ್ಲಿಗೆ ನಿಲ್ಲಿಸಬೇಕು, ಇಲ್ಲದಿದ್ರೆ ಹೋರಾಟ ಮಾಡುತ್ತೇವೆ ಎಂದ್ರು.