ಬಾಗಲಕೋಟೆ: ಬಿಜೆಪಿಯವರು ಬಡವರು, ಮಹಿಳೆಯರ ವಿರೋಧಿಗಳು ಎಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆ ಮುಗಳ್ಳೊಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮೇಟಿಯವರಿಗೆ 1989 ರಲ್ಲಿ ಬಹಳ ಹೋರಾಟ ಮಾಡಿ ಟಿಕೆಟ್ ಕೊಡಿಸಿದ್ದೆ.ಮೇಟಿ ಗೆದ್ದರು ನಾನು ಸೋತೆ. ಅವರಂತ ನಿಯತ್ತಾಗಿರೋರು ಮತ್ಯಾರು ಇಲ್ಲ ಅಂದ್ರೆ ತಪ್ಪಾಗಲಿಕ್ಕಿಲ್ಲ. ಬಡವರ ಪರವಾಗಿ ಕೆಲ್ಸ ಮಾಡುವ ವ್ಯಕ್ತಿತ್ವ ಅವರದ್ದು ಎಂದು ದಿವಂಗತ ಹೆಚ್ ವೈ ಮೇಟಿ ವ್ಯಕ್ತಿತ್ವವನ್ನು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಜಾತಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಪಕ್ಷಾತೀತವಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.ಬಿಜೆಪಿ ಪಕ್ಷಕ್ಕೆ ವೋಟ್ ಹಾಕುವ ಬಡವರಿಗೂ ಗ್ಯಾರಂಟಿ ಯೋಜನೆ ಅನ್ವಯ ಆಗುತ್ತದೆ.
ಗ್ಯಾರಂಟಿ ಯೋಜನೆಗಳು ಚಾಚೂ ತಪ್ಪದೆ ಮೂರನೇ ವರ್ಷವೂ ಮುಂದುವರಿಸಿದ್ದೇವೆ. 1 ಲಕ್ಷ 31 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಖರ್ಚು ಮಾಡಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗೆ ವಿರೋಧ ಮಾಡಿದ್ದರು.ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಬೇಡಿ ಎಂದು ಬಿಜೆಪಿಯವರು ವಿರೋಧಿಸಿದ್ರು. ಆರ್ಥಿಕವಾಗಿ ರಾಜ್ಯ ದೀವಾಳಿ ಆಗುತ್ತೆ ಅಂದ್ರು.ಬಿಜೆಪಿಯವರು ಯಾಕೆ ಗ್ಯಾರಂಟಿ ಯೋಜನೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರಿಗೆ ದಲಿತ, ಬಡವರ, ಅಲ್ಪಸಂಖ್ಯಾತರ ಬಗ್ಗೆ ಕಳಕಳಿ ಇಲ್ಲ. ಬಿಜೆಪಿಯವರು ಬಡವರು, ಮಹಿಳೆಯರ ವಿರೋಧಿಗಳು.ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಯಾರು? ಕಾಂಗ್ರೆಸ್ ರಾಜೀವ್ ಗಾಂಧಿ ಮೀಸಲಾತಿ ಕೊಟ್ಟಿದ್ದು. ಬಿಜೆಪಿಯವರಿಗೆ ಬಡವರ ಕಷ್ಟ ಸುಖ ಗೊತ್ತಿಲ್ಲ.ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಯಾವುದು. ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರಾ!? ಎಂದು ವಾಗ್ದಾಳಿ ನಡೆಸಿದ್ದಾರೆ.











