ಬೆಂಗಳೂರು; ನರೇಗಾ ದೃಷ್ಟಿ ಬೇರೆಡೆಗೆ ಸೆಳೆಯುವುದಕ್ಕಾಗಿ ಬಿಜೆಪಿ ಈ ರೀತಿ ಡ್ರಾಮಾ ಮಾಡ್ತಿದೆ ಎಂದು ವಿಧಾನಸೌಧದಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಅಹೋರಾತ್ರಿ ಧರಣಿ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರು ನರೇಗಾ ದೃಷ್ಟಿ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಸಚಿವರು ಹಣ ತೆಗೆದುಕೊಂಡಿದ್ದಾರಾ?. ಯಾರೋ ದುಡ್ಡು ತಿಂದು ಸಚಿವರು ಹೆಸರು ಹೇಳಿದ್ದಾರೆ. ನಾಳೆ ಯಾರೇ ದುಡ್ಡು ತಿಂದ್ರೂ ಪ್ರಧಾನಿಯ ಹೆಸರು ಹೇಳಬಹುದಾ?.ನರೇಗಾ ವಿಚಾರ ಡೈವರ್ಟ್ ಮಾಡೋಕೆ ಇವರು ಧರಣಿ ಅಷ್ಟೆ ಎಂದಿದ್ದಾರೆ.
ಇದೆಲ್ಲವೂ ಕೂಡ ರಾಜಕೀಯದಲ್ಲಿ ನಡೆಯುತ್ತೆ. ಯಾರು ದುಡ್ಡು ತಿಂದಿದ್ದಾರೆ ಅವರಿಗೆ ಶಿಕ್ಷೆ ಆಗುತ್ತೆ ಎಂದ ಅವರು ನಿನ್ನೆ ಲಿಂಗಾಯತ ಸಮುದಾಯದ ಶಾಸಕರ ಸಭೆ ವಿಚಾರದ ಬಗ್ಗೆ ಮಾತನಾಡಿ ಅದರಲ್ಲಿ ತಪ್ಪೇನಿದೆ?. ಸಮುದಾಯದವರು ಸೇರುತ್ತಾರೆ. ಸೂಕ್ತ ಪ್ರಾತಿನಿಧ್ಯತೆಗೆ ಸಂಬಂಧಿಸಿ ಮಾಡ್ತಾರೆ. ಬೆಳಗಾವಿಯಲ್ಲಿ ಎಲ್ಲರೂ ಕೂಡ ಕೂಡಿದ್ವಿ. ಅಲ್ಲಿಂದ ಯಾರು ಸಭೆ ಮಾಡಿರಲಿಲ್ಲ.ನಮ್ಗೆ ಸುರ್ಜೇವಾಲ ಅವರ ಮೇಲೆ ವಿಶ್ವಾಸವಿದೆ. ಆ ಸಭೆಯಲ್ಲಿ ಬೇರೆ ಏನು ಕೂಡ ಚರ್ಚೆ ಇಲ್ಲ. ಸಮಾಜದ ದೃಷ್ಟಿಯಿಂದ ನಾವು ಚರ್ಚೆ ಮಾಡಿದ್ವಿ. ವೈಯಕ್ತಿಕವಾಗಿಯೂ ಬೇರೆ ಯಾವ ವಿಚಾರವಿಲ್ಲ. ಲಿಂಗಾಯತರು ಈ ಸಲ ಹೆಚ್ಚಿನ ಮಟ್ಟದಲ್ಲಿದ್ದಾರೆ. ಅಧಿಕಾರಿಗಳಿಗೆ ಪೋಸ್ಟಿಂಗ್ ಸಿಗಬೇಕು. ನಿಗಮಗಳಿಗೆ ಹಣ ಬರಬೇಕಾಗುತ್ತದೆ.ಹೀಗಾಗಿ ಅದರ ಸಲುವಾಗಿ ಚರ್ಚೆ ಮಾಡಿದೆವು ಎಂದು ಅವರು ತಿಳಿಸಿದ್ದಾರೆ.











