ನವದೆಹಲಿ; ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾಪಿ ಮಾಡುತ್ತಿದೆ ಎಂದು ದೆಹಲಿ ಪ್ರದೇಶ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಿಂದ ಗ್ಯಾರಂಟಿ ಘೋಷಣೆಯಾಗಿದೆ.ಮಹಿಳೆಯರಿಗೆ ತಿಂಗಳಿಗೆ 2,500ರೂ ನೀಡುವ ಪ್ಯಾರಿ ದೀದಿ ಯೋಜನೆ ಘೋಷಣೆಯಾಗಿದೆ.ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಮಾದರಿಯ ಪ್ಯಾರಿ ದೀದಿ ಯೋಜನೆಯಾಗಿದೆ.
ಇದೇ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಗೃಹ ಲಕ್ಷ್ಮಿ ಯೋಜನೆಯನ್ನು ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಬಂದು ಘೋಷಣೆ ಮಾಡಿದ್ರು. ನಾನು ಹಾಗೂ ಸಿದ್ದರಾಮಯ್ಯ ನವರು ಚೆಕ್ ಗೆ ಸಹಿ ಹಾಕಿದ್ದೆವು. ಸರಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ನಲ್ಲೆ ಯೋಜನೆ ಜಾರಿಗೆ ತಂದೆವು. ಮೂರು ತಿಂಗಳಲ್ಲಿ ಮಹಿಳೆಯರ ಅಕೌಂಟ್ ಗೆ ಹಣ ಹೋಗಿದೆ. ನಿರಂತವಾಗಿ ಪ್ರತಿ ತಿಂಗಳು ಖಾತೆಗೆ ಹಣ ಹೋಗುತ್ತಿದೆ. ಇದರಿಂದ ಕರ್ನಾಟಕದ ಮಹಿಳೆಯರ ಬದುಕು ಬದಲಾಗಿದೆ. ಹಳ್ಳಿಗಳಲ್ಲಿ ಆರ್ಥಿಕ ಚೇತರಿಕೆ ಕಂಡು ಬಂದಿದೆ ಎಂದರು.
ಈಗ ದೆಹಲಿ ಪ್ಯಾರಿ ದೀದಿ ಯೋಜನೆ ಘೋಷಣೆ ಮಾಡುತ್ತಿದ್ದೇವೆ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ನಲ್ಲೇ ಪ್ಯಾರಿ ದೀದಿ ಯೋಜನೆ ಜಾರಿಗೆ ಬರಲಿದೆ ಎಂದು ಪ್ಯಾರಿ ದೀದಿ ಯೋಜನೆ ಘೋಷಣೆ ಮಾಡಿದ್ದಾರೆ ಡಿಕೆಶಿ. ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾಪಿ ಮಾಡುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ,ಹರಿಯಾಣದಲ್ಲಿ ಬಿಜೆಪಿ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿದೆ. ಬಸ್, ಮೆಟ್ರೋ ದರ ಏರಿಕೆ ಎನ್ನುವುದು ಆಗಾಗ ಆಗುತ್ತಿರುತ್ತದೆ. ಡೀಸಲ್ ದರ ಹೆಚ್ಚಾದಂತೆ ಬಸ್ ಪ್ರಯಾಣ ದರ ಏರಿಸಬೇಕಾಗುತ್ತದೆ ಎಂದರು.
ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಆರ್ ಅಶೋಕ್ ಪ್ರತಿಭಟನೆ ವಿಚಾರ: ಸ್ಪೀಕರ್ ಗೆ ಪತ್ರ ಬರೆದ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು
ಬೆಂಗಳೂರು; ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಆರ್ ಅಶೋಕ್ ಪ್ರತಿಭಟನೆ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪೀಕರ್ ಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಪತ್ರ ಬರೆದಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿ ಮೇಲೆ ಕೂಗಾಡಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ ಸ್ಪೀಕರ್ ಗೆ ಪತ್ರ ಬರೆದಿದೆ.
ಕರ್ನಾಟಕದ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್ ಅಲಿಯಾಸ್ ಸಾಮ್ರಾಟ್ ಅಶೋಕ್ ರವರಿಗೆ ವಿಶೇಷ ಸ್ಥಾನಮಾನ ಮತ್ತು ನಾಮಫಲಕ ಒದಗಿಸುವ ಕುರಿತು ಪತ್ರ. ಕರ್ನಾಟಕದ ವಿಧಾನಸಭೆಗೆ ತನ್ನದೇ ಆದಂತಹ ವಿಶೇಷವಾದ ಗೌರವವಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಅನೇಕ ಹಿರಿಯರು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವಿರೋಧ ಪಕ್ಷದ ನಾಯಕರ ಸ್ಥಾನದ ಕಾರ್ಯದ ಕಾರಣಕ್ಕಾಗಿ ಗೌರವವನ್ನೂ ಪಡೆದಿರುತ್ತಾರೆ. ಹಾಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್ ರವರು ಎರಡು ದಿನಗಳ ಹಿಂದೆ ನಡೆದಂತಹ ಪ್ರತಿಭಟನಾ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ತಮಗೆ ಸರಿಯಾದ ಗೌರವವನ್ನು ನೀಡಿರುವುದಿಲ್ಲವೆಂದು ಅಲಾಪಿಸಿಕೊಂಡಿರುತ್ತಾರೆ. ವಿರೋಧ ಪಕ್ಷದ ನಾಯಕರು ತಮ್ಮ ಕಾರ್ಯವೈಖರಿಯ ಮೂಲಕ ಆ ಸ್ಥಾನಕ್ಕೆ ಹೆಚ್ಚು ಗೌರವ ಮತ್ತು ಹಿರಿಮೆಯನ್ನು ತುಂಬಬೇಕಾಗುತ್ತದೆ. ಯಾವ ಕಾರಣಕ್ಕೂ ಅಶೋಕ್ ರವರು ತಮಗೆ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಾದರು ಗೌರವ ಮತ್ತು ಆದ್ಯತೆ ಸಿಗುತ್ತಿಲ್ಲ ಎಂದು ಪದೇಪದೇ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ?
ಇವರ ರಕ್ಷಣೆಗೆ ಗೌರವ ಸ್ಪೀಕರ್ ರವರು ಬರಬೇಕಾದಂತಹ ಅನಿವಾರ್ಯ ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ. ಬಹುಶಹ ಆರ್.ಅಶೋಕ್ ರವರಿಗೆ ನಾಮಪಲಕದ ಕೊರತೆ ಇರಬಹುದು!. ಅಥವಾ ಅವರು ವಿರೋಧ ಪಕ್ಷದ ನಾಯಕರೆಂದು ಸಾರುವ ದಲಾಯತ್ಗಳ ಅಥವಾ ಜಮೆದಾರ್ ಗಳ ಕೊರತೆ ಇರಬಹುದು! .ಇಂತಹ ಕೊರತೆಯನ್ನು ಸ್ಪೀಕರ್ ರವರು ಸರಿಪಡಿಸಬೇಕೆಂದು ನಾನು ಕರ್ನಾಟಕ ಕಾಂಗ್ರೆಸ್ ಪಕ್ಷದ ಪರವಾಗಿ ವಿನಂತಿ ಮಾಡುತ್ತೇನೆ ಎಂದು ಪತ್ರದಲ್ಲಿ ರಮೇಶ್ ಬಾಬು ಉಲ್ಲೇಖಿಸಿದ್ದಾರೆ.