ಮನೆ Latest News ಬಿಜೆಪಿ ಮಾಡ್ತಾ ಇರೋದು ಕೇಂದ್ರದ ವಿರುದ್ದ ಜನಾಕ್ರೋಶ ಯಾತ್ರೆ; ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ಬಿಜೆಪಿ ಮಾಡ್ತಾ ಇರೋದು ಕೇಂದ್ರದ ವಿರುದ್ದ ಜನಾಕ್ರೋಶ ಯಾತ್ರೆ; ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ಬಿಜೆಪಿ ಮಾಡ್ತಾ ಇರೋದು ಕೇಂದ್ರದ ವಿರುದ್ದ ಜನಾಕ್ರೋಶ ಯಾತ್ರೆ ಎಂದು  ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಜನ ಆಕ್ರೋಶ ಮಾಡ್ತಿದ್ದಾರೆ. ಬಿಜೆಪಿ ಮಾಡ್ತಾ ಇರೋದು ಕೇಂದ್ರದ ವಿರುದ್ದ ಮಾಡ್ತಾ ಇರೋ‌ ಜನಾಕ್ರೋಶ ಯಾತ್ರೆ. ಬಿಜೆಪಿ ನಮ್ಮ ವಿರುದ್ದ ಯಾತ್ರೆ ಮಾಡುವಂಥದ್ದು ಏನೂ ಇಲ್ಲ. ಬಿಜೆಪಿ ಆಂತರಿಕ ಕಚ್ಚಾಟ, ಕೇಂದ್ರದ ನೀತಿಗಳು ಎಲ್ಲ ವರ್ಗದ ಜನರಿಗೂ ಸಮಸ್ಯೆ ಆಗ್ತಿದೆ. ಪೆಟ್ರೋಲ್ ಡಿಸೆಲ್ ಬೆಲೆ ಮಾತ್ರ ಮಾತಾಡ್ತಾ ಇಲ್ಲ.ಇದರ ಬೆಲೆ ಏರಿಕೆ ಮೂಲಕ ಕೇಂದ್ರ ಇವರ ಯಾತ್ರೆಗೆ ಉದ್ಘಾಟನೆಗೆ ಕೊಟ್ಟ ಕೊಡುಗೆ. ನಿಮ್ಮ ಬಿಜೆಪಿ ಯಾತ್ರೆಗೆ ನಮ್ಮ ಕೊಡುಗೆ ಅಂತ ಕೇಂದ್ರ ಕೊಟ್ಟಿರುವ ಕೊಡುಗೆ ಇದು ಎಂದಿದ್ದಾರೆ.

ಕೇಂದ್ರದ ವಿರುದ್ದ ಯಾತ್ರೆ ಅಂತ ಬೋರ್ಡ್ ಹಾಕಿಕೊಳ್ಳಲಿ ಬಿಜೆಪಿಯವರು.ಬೂಸಾ ಬೆಲೆ ಯಾಕೆ ಕಡಿಮೆ ಮಾಡಿಸೋಕಾಗ್ಲಿಲ್ಲ? ಹಿಂಡಿ ಬೆಲೆ ಯಾಕೆ ಕಡಿಮೆ ಮಾಡಿಸೋಕಾಗ್ತಿಲ್ಲ ಬಿಜೆಪಿ ಯವರಿಗೆ?. ನೀರಿನ ಬೆಲೆ ಸಣ್ಣ ಪ್ರಮಾಣದಲ್ಲಿ ಏರಿಸಿದ್ದೇವೆ ಇನ್ನೂ ಜಾಸ್ತಿ ಮಾಡಬಹುದಿತ್ತು ಮಾಡಿಲ್ಲ. ಚಿನ್ನ ದರ ಕಂಟ್ರೋಲ್ ಮಾಡುವಂತದ್ದು ಯಾರ ಕೈಲಿದೆ?.ಚಿನ್ನ ೧೦ ಗ್ರಾಂಗೆ ಎಷ್ಟಿತ್ತು ಎಷ್ಟಾಗಿದೆ?.ಯುಪಿಎ ಕಾಲದಲ್ಲಿ ೨೮೦೦₹ ಇತ್ತು ಚಿನ್ನ ಈಗ ೯೨ ಸಾವಿರ ಆಗಿದೆ ಎಂದ್ರು.ರೈತನ‌ ವಿರೋಧಿ ಪಕ್ಷ ಬಿಜೆಪಿ. ಏನ್ರಿ ಅಶೋಕ್ ಬೇರೆ ಬೆಲೆ ಏರಿಕೆ ಕಾಣ್ತಾ ಇಲ್ವಾ ನಿಮಗೆ? . ಸೆಂಟ್ರಲ್ ಮಿನಿಸ್ಟರ್ ಗೆ ಕಾಣ್ತಾ ಇಲ್ಲವಾ? ಬೇರೆದೆಲ್ಲ.ಬ್ಯಾಂಕ್ ಚೆಕ್ ಬುಕ್ ಗೂ ದುಡ್ಡೂ ದುಡ್ಡು ಡ್ರಾ ಮಾಡಕ್ಕೂ ದುಡ್ಡು. ಇದರ ಬಗ್ಗೆ ಬಿಜೆಪಿ ಯಾಕೆ ಚರ್ಚೆ ಮಾಡ್ತಾ ಇಲ್ಲ?.ನಿಮ್ಮ ಆಕ್ರೋಶ ನಿಮ್ಮ ಬಿಜೆಪಿ ಲೀಡರ್ ಬಗ್ಗೆ ಇರಲಿ.ನಂದು ಸಿದ್ದರಾಮಯ್ಯ ದು ಫೋಟೋ ಹಾಕೋದಲ್ಲ ಬಿಜೆಪಿಯವರು.ಬಿಜೆಪಿ ಹೋರಾಟ ನಮ್ಮ ಗ್ಯಾರಂಟಿ ಗಳ ವಿರುದ್ದ .ನಿಮ್ಮ ಒಲೆಯೂ ತೂತು ಪಾರ್ಟಿಯೆಲ್ಲ ತೂತು. ಕೇಂದ್ರ ಸರ್ಕಾರದ ವಿರುದ್ದ ಜನಾಕ್ರೋಶ ಮಾಡಿ ಎಂದಿದ್ದಾರೆ.

ಬಿಜೆಪಿಯಲ್ಲಿ ಎಲ್ಲರೂ ವೀರರು ಶೂರರು ಆಗೋದಕ್ಕೆ ಹೊರಟಿದ್ದಾರೆ. ಏಪ್ರಿಲ್ ೧೭ ರಂದು ಬೃಹತ್ ಪ್ರತಿಭಟನೆ ಮಾಡ್ತೇವೆ ಫ್ರೀಡಂ ಪಾರ್ಕ್ ನಲ್ಲಿ. ನಾವೂ ಕೂಡ ಕೇಂದ್ರದ ಬಿಜೆಪಿ ವಿರುದ್ದ ಜನಾಕ್ರೋಶ ಯಾತ್ರೆ ಮಾಡ್ತೇವೆ ಎಂದ ಅವರು ಬಸವರಾಜ ರಾಯರೆಡ್ಡಿ ನಾನು ಹೇಳಿಲ್ಲ ಅಂದಿದ್ದಾರಲ್ಲ. ನಾನೊಮ್ಮೆ ಅವರ ಬಳಿ ಚರ್ಚೆ ಮಾಡ್ತೇನೆ. ಗುತ್ತಿಗೆದಾರರ ಸಂಘದವರು ಲೋಕಾಯುಕ್ತಕ್ಕೋ ಪೊಲೀಸರಿಗೋ ದೂರು ನೀಡಲಿ. ಬರೆದು ದೂರು ಕೊಡಲಿ ತನಿಖೆ ಮಾಡಿಸೋಣ.ಇಂಥದ್ದು ಅಂತ ಬರೆದು ಕೊಡಲಿ ತನಿಖೆ ಮಾಡಿಸೋಣ. ಯಾವ ಸ್ಪೆಷಲ್ ಎಲ್ಓಸಿ ಇಲ್ಲ ಏನೂ ಇಲ್ಲ. ನಾವು ಮಾಡಿದರೆ ಒಂದು ೧೦% ಮಾಡಬಹುದು ಅಷ್ಟೇ. ನನ್ನ ಇಲಾಖೆ ಮೇಲೆ ಆರೋಪ ಮಾಡಿದ್ದರೂ ಸಂತೋಷ ದೂರು ಕೊಡಲಿ.ಹತ್ತಾರು ಜನ ಬಂದು ಅರ್ಜಿ ಕೊಡ್ತಾರೆ, ಲಿಖಿತ ರೂಪದಲ್ಲಿ ಕೊಡಲಿ ತನಿಖೆ ಮಾಡಿಸೋಣ ಎಂದ್ರು.

ಎರಡನೇ ಏರ್ ಪೋರ್ಟ್ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಶಿರಾದಲ್ಲಿ ಮಾಡುವಂತೆ ಕೈ ಶಾಸಕರಿಂದ ಸಹಿ ಸಂಗ್ರಹಿಸಿದ ಬಗ್ಗೆ ಮಾತನಾಡಿದ ಅವರು ನಾನು ಅದರಲ್ಲಿ ಯಾವುದಕ್ಕೂ ತಲೆ ಹಾಕೋದಕ್ಕೆ ಹೋಗಿಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಡದಿಯಲ್ಲಿ ಮಾಡಿ ಅಂತಾ ನಾನು ಹೇಳಿಲ್ಲ. ನನ್ನ ಜೊತೆ ಯಾರೂನು ಚರ್ಚೆನೂ ಮಾಡಿಲ್ಲ. ಕರ್ನಾಟಕದಲ್ಲಿ ಎಲ್ಲಾದ್ರೂ ಸಂತೋಷ. ನಾನು ಅಖಂಡ ಕರ್ನಾಟಕದ ಮೇಲೆ ನಂಬಿಕೆ ಇಟ್ಟವನು. ನನಗೆ ಚಾಮರಾಜನಗರವೂ ಒಂದೇ ಬೀದರ್ ಗುಲ್ಬರ್ಗವೂ ಒಂದೇ ಎಂದಿದ್ದಾರೆ.