ಮನೆ Latest News ಬೂತ್ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರಾಗುವವರೆಗೂ ಬೆಳೆಯುವ ಅವಕಾಶ ಬಿಜೆಪಿಯಲ್ಲಿದೆ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ...

ಬೂತ್ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರಾಗುವವರೆಗೂ ಬೆಳೆಯುವ ಅವಕಾಶ ಬಿಜೆಪಿಯಲ್ಲಿದೆ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿಕೆ

0

ಬೆಂಗಳೂರು; ಬೂತ್ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರಾಗುವವರೆಗೂ ಬೆಳೆಯುವ ಅವಕಾಶ ಬಿಜೆಪಿಯಲ್ಲಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದ್ದಾರೆ.

 

 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬೂತ್ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರಾಗುವವರೆಗೂ ಬೆಳೆಯುವ ಅವಕಾಶ ಬಿಜೆಪಿಯಲ್ಲಿದೆ. ಕಾಂಗ್ರೆಸ್ ಪಕ್ಷ ಕುಟುಂಬಕ್ಕೆ ಜೋತು ಬಿದ್ದಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇರಬಹುದು.ಆದರೆ ನಾಯಕ ಯಾರು ಅಂದರೆ ರಾಹುಲ್ ಗಾಂಧಿ ಅಂತಾರೆ. ಭ್ರಷ್ಟಾಚಾರದಿಂದ ಹೊರಗೆ ಬರಲು ಕಾಂಗ್ರೆಸ್ ಗೆ ಆಗಿಲ್ಲ. ನರೇಗಾ ಯೋಜನೆಗೆ ಮಹಾತ್ಮಾ ಗಾಂಧಿ ಹೆಸರನ್ನು ಜೋಡಿಸಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್. 11 ಲಕ್ಷ ಕೋಟಿ ರೂ. ಕಾಮಗಾರಿಯಲ್ಲಿ ಭ್ರಷ್ಟಾಚಾರ ಆಗಿದೆ.ಈಗ ಭ್ರಷ್ಟಾಚಾರಕ್ಕೆ ಅವಕಾಶ ಸಿಗುತ್ತಿಲ್ಲ ಅಂತ ವಿಬಿ ಜಿ ರಾಮ್ ಜಿ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಸಿಎಂ ಭ್ರಷ್ಟಾಚಾರ ಆದ ಕೂಡಲೇ ಅಬಕಾರಿ ಸಚಿವರನ್ನು ರಾಜೀನಾಮೆ ಕೇಳಬೇಕಿತ್ತು. ಈ ಸರ್ಕಾರದಲ್ಲಿ ಸಚಿವರು ಜೈಲಿಗೆ ಹೋಗಿ ಬಂದಿದ್ದಾರೆ. ಆದರೂ ಸಚಿವ ತಿಮ್ಮಾಪುರ ಅವರು ಸರ್ಕಾರದಲ್ಲಿ ಮುಂದುವರೆದಿದ್ದಾರೆ ಎಂದಿದ್ದಾರೆ. ಐಪಿಎಸ್ ಅಧಿಕಾರಿ  ರಾಮಚಂದ್ರ ರಾವ್ ಪ್ರಕರಣದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪೊಲೀಸ್ ಇಲಾಖೆ ಹಳಿ ತಪ್ಪಿ ಹಲವು ದಿನಗಳಾಯಿತು. ಪೊಲೀಸರು ಕರ್ತವ್ಯ ಮರೆತಿದ್ದಾರೆ.ಪೊಲೀಸ್ ಸ್ಟೇಷನ್ ಕಾಂಗ್ರೆಸ್ ಕಾರ್ಯಾಲಯ ಆಗಿದೆ.ನಮ್ಮನ್ನು ಹೇಳುವವರು, ಕೇಳುವವರು ಇಲ್ಲ ಎಂಬ ಭಂಡತನ ಬಂದಿದೆ. ಸೀನಿಯರ್ ಆಫೀಸರ್ ಕೃತ್ಯ ಇಲಾಖೆಗೆ ಶೋಭೆ ತರಲ್ಲ. ಇಲಾಖೆಯನ್ನು ಹಿಡಿತದಲ್ಲಿ ಇಡುವುದರಲ್ಲಿ ಸಚಿವ ಪರಮೇಶ್ವರ್ ಫೈಲ್ಯೂರ್ ಆಗಿದ್ದಾರೆ. ಪೊಲೀಸರು ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಮೊದಲು ಭ್ರಷ್ಟಾಚಾರ ಅಂದರೆ ಸಬ್ ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್ ಲೆವೆಲ್ ವರೆಗೂ ಇತ್ತು‌.

ಆದರೆ ಈಗ ಹಿರಿಯ ಅಧಿಕಾರಿಗಳಿಗೆ ಹಣ ಕೊಡಲು ಹಫ್ತಾ ವಸೂಲಿ ಮಾಡುತ್ತಿದ್ದಾರೆ. ವಿಧಾನಸೌಧಕ್ಕೂ ಹಣ ತಲುಪಿಸಬೇಕಿದೆ.ಈಗ ಪೊಲೀಸ್ ಚೌಕಿ ಹಾಕಿ ಹಣ ಕೀಳುತ್ತಿದ್ದಾರೆ.ಪೊಲೀಸರು ಸಿವಿಲ್ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 

ಬಿಜೆಪಿ ಬೆಂಬಲಿತ ಸಾಮಾಜಿಕ ಜಾಲತಾಣದವರನ್ನು ಬಂಧನ ಮಾಡುತ್ತಿದ್ದಾರೆ.ಪೊಲೀಸ್ ಸ್ಟೇಷನ್ ಮೂಲಕ ಸರ್ಕಾರ ತನ್ನ ರಾಜಕೀಯ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗಿದೆ.ಪರಮೇಶ್ವರ್ ಅವರೇ ಪೊಲೀಸ್ ಇಲಾಖೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಬೇಡಿ.ನಿಮಗೆ ಓಡಾಡಲು ಎಸ್ಕಾರ್ಟ್, ಪೈಲಟ್ ಬೇಕು ಅಂದರೆ ಬೇರೆ ಖಾತೆಯನ್ನು ತೆಗೆದುಕೊಳ್ಳಿ, ಅಲ್ಲೂ ಪೊಲೀಸರು ಸೆಲ್ಯೂಟ್ ಮಾಡುತ್ತಾರೆ. ನಿಮ್ಮ ಈ ನಡತೆಯಿಂದ ಹಿರಿಯ ಅಧಿಕಾರಿಗಳು ಈ ಮಟ್ಟಕ್ಕೆ ಇಳಿದಿದ್ದಾರೆ.ನೀವು ಕೆಳಗೆ ಇಳಿದರೆ ಮಾತ್ರ ಪೊಲೀಸ್ ಇಲಾಖೆಗೆ ಗೌರವ ಇರಲಿದೆ ಅಂದಿದ್ದಾರೆ.