ಬೆಂಗಳೂರು; : ಮುಡಾ ಹಗರಣ ಸಂಬಂಧ ಸದನದಲ್ಲಿ ಚರ್ಚೆಗೆ ಅವಕಾಶ ನೀಡದ ಕಾರಣ, ವಿಧಾನಸಭೆಯಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ವಿರುದ್ಧ ಧಿಕ್ಕಾರ ಕೂಗುತ್ತಾ, ಶ್ರೀರಾಮನ ಭಜನೆ ಮಾಡುತ್ತಾ ಕುಳಿತ ಬಿಜೆಪಿ ಶಾಸಕರು ಧರಣಿ ಮಾಡುತ್ತಿದ್ದಾರೆ.
ಇನ್ನು ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ ಹಿನ್ನೆಲೆ ಸದನ ಮುಂದೂಡಿಕೆ ನಂತರವೂ ಡಿಸಿಎಂ ಡಿ.ಕೆ. ಶಿವಕುಮಾರ್ ಸದನದಲ್ಲೇ ಕುಳಿತಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ಗೆ ಕುಳಿತಲ್ಲೇ ವಿಪಕ್ಷ ನಾಯಕ ಅಶೋಕ್, ಬಿಜೆಪಿ ಶಾಸಕರಾದ ಡಾ. ಅಶ್ವಥ ನಾರಾಯಣ್ ಮತ್ತು ಸಿ.ಸಿ. ಪಾಟೀಲ್ ಲೇವಡಿ ಮಾಡಿದ್ದಾರೆ.ನಿಮಗೆ ಬಹಳ ಖುಷಿ ಆಗುತ್ತಿದೆ ಅಲ್ವಾ? ಮುಖ ಶೈನಿಂಗ್ ನೋಡಿ, ಪಾರ್ಟಿ ಕೊಡಿಸಿ, ಹುಷಾರು ನಿಮಗೆ ಫೈಟ್ ಕೊಡಲು ಮತ್ತೊಬ್ಬರು ಬಂದು ಬಿಟ್ಟಾರು ಎಂದು ಬಿಜೆಪಿ ಶಾಸಕರು ಎಂದ ಕಾಲೆಳೆದ್ರೆ, ಬಿಜೆಪಿ ಶಾಸಕರ ಮಾತು ಕೇಳಿ ಡಿಸಿಎಂ ಡಿ.ಕೆ. ಶಿವಕುಮಾರ್ ನಗುತ್ತಾ ಕುಳಿತಿದ್ದರು.ಬಳಿಕ ಡಿ.ಕೆ. ಶಿವಕುಮಾರ್ ಬಳಿ ಬಿಜೆಪಿ ಶಾಸಕರು ಮಾತುಕತೆ ನಡೆಸಿದ್ರು. ಈ ವೇಳೆ ಶ್ರೀರಾಮನ ಹಾಡು ಹೇಳುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕರು ಹೇಳಿದ್ದಾರೆ.
ಇನ್ನು ವಿಧಾನಸಭೆಯಲ್ಲಿ ಬಿಜೆಪಿ- ಜೆಡಿಎಸ್ ಸದಸ್ಯರಿಂದ ಅಹೋರಾತ್ರಿ ಧರಣಿ ಹಿನ್ನೆಲೆ ಧರಣಿ ಸ್ಥಳಕ್ಕೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಭೇಟಿ ನೀಡಿದರು. ಈ ವೇಳೆ ಶಾಸಕರಿಗೆ ರಾತ್ರಿ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದ್ರು. ಆದರೆ ವಾಲ್ಮೀಕಿ ಹಾಗೂ ಮುಡಾ ಹಗರಣದ ಹಣದಿಂದ ನಮಗೆ ಊಟ ಬೇಡ ಎಂದಿದ್ದಾರೆ ಬಿಜೆಪಿ ಶಾಸಕರು.
ಇತ್ತ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಧರಣಿ ಬಗ್ಗೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್ ಇವತ್ತು ಪ್ರತಿಪಕ್ಷ ಮಿತ್ರರ ಜೊತೆ ಚರ್ಚೆ ಮಾಡಿದ್ವಿ.ಅವರಿಗೆ ಬೇಕಾದ ಸವಲತ್ತಿಗೆ ಅವಕಾಶ ನೀಡಿದ್ದೇವೆ.ನಾನು ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಆರಂಭಿಸೋಕೆ ಸಿದ್ದನಿಲ್ಲ.ನಿಲುವಳಿ ಸೂಚನೆ ಅತ್ಯಗತ್ಯ, ತುರ್ತಾಗಿರಬೇಕು, ಸಾರ್ವಜನಿಕ ಮಹತ್ವ ಆಗಿರಬೇಕು.ವಾಲ್ಮೀಕಿ ಹಗರಣ ತುರ್ತಾಗಿತ್ತು ಹಾಗಾಗಿ ಚರ್ಚೆಗೆ ಅವಕಾಶ ಕೊಟ್ಟೇವು, ಅತ್ಯಗತ್ಯ ಅದಕ್ಕೆ ಕೊಟ್ಟೆವು.ಇದು ಕಳೆದ ೧೦, ೧೨ ದಿನಗಳ ಹಿಂದಷ್ಟೇ ಬಂದಿರೋ ವಿಚಾರ.ಜ್ಯೂಡಿಷಿಯಲ್ ಇನ್ವೆಷ್ಟಿಗೇಷನ್ ಆಗ್ತಾ ಇದೆ. ಇದು ಈಗ ಆಗಿರುವ ಘಟನೆ ಅಲ್ಲ.ನಾನು ಚರ್ಚೆಗೆ ಅವಕಾಶ ಕೊಟ್ಟರೆ ಕೆಟ್ಟ ಸಂಪ್ರದಾಯ ಆರಂಭವಾಗುತ್ತೆ.ಮುಂದೆ ಹತ್ತು ವರ್ಷದ ಕೇಸ್ ತಗೊಂಡು ಚರ್ಚೆಗೆ ಅವಕಾಶ ಕೇಳಬಹುದು.ಆಗ ನನ್ನ ಉದಾಹರಣೆ ತೆಗೆದುಕೊಳ್ಳಬಹುದು.ಅವರಿಗೆ ಹೋರಾಟಕ್ಕೆ ಬೇಕಾದ ಸವಲತ್ತು ಕೊಡುತ್ತಿದ್ದೇವೆ ಎಂದಿದ್ದಾರೆ.
ಇನ್ನು ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ ಹಿನ್ನೆಲೆ ವಿಧಾನಸಭೆ ಮೊಗಸಾಲೆಯ ಪ್ರವೇಶ ದ್ವಾರ ಲಾಕ್ ಆಗಿತ್ತು, ಒಳಭಾಗದಿಂದ ಬಾಗಿಲು ಲಾಕ್ ಆಗಿದ್ದವು.ಒಳಭಾಗದಿಂದ ಮಾರ್ಷಲ್ ಗಳು ಡೋರ್ ಲಾಕ್ ಮಾಡಿದ್ದರು. ಇದರಿಂದ ಒಳಗೆ ತೆರಳಲು ಸಾಧ್ಯವಾಗದೇ ಬಾಗಿಲ ಬಳಿ ಕಾಯುತ್ತಾ ನಿಂತಿದ್ದರು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮತ್ತು ಜೆಡಿಎಸ್ ಶಾಸಕರು. ಬಾಗಿಲು ತೆರೆಯುವಂತೆ ತಟ್ಟುತ್ತಾ ನಿಂತಿದ್ದರು ಶಾಸಕರು.ಒಳಭಾಗದಿಂದ ಬಾಗಿಲು ತೆರೆಸಲು ಪೋನ್ ಮಾಡಿ ಮಾರ್ಷಲ್ ಗಳು ಪ್ರಯತ್ನ ಮಾಡಿದ್ರು.ಕೆಲವು ಹೊತ್ತು ಬಾಗಿಲು ತಟ್ಟಿದ ಬಳಿಕ ಒಳಭಾಗದಿಂದ ಬಾಗಿಲು ತೆರೆಯಿತು. ನಂತರ ಶಾಸಕರು ಒಳಗೆ ತೆರಳಿದರು.
ವಿಧಾನಸಭೆಯಲ್ಲಿ ಧರಣಿ ನಿರತ ಶಾಸಕರಿಗೆ ಫ್ಯಾನ್, ನೀರು, ಬೆಡ್ ಶೀಟ್, ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನು ವಿಧಾನಸಭೆಯ ಮೆಟ್ಟಿಲುಗಳ ಮೇಲೆ ಬಿಜೆಪಿ ಶಾಸಕರು ಭಜನೆ ಮಾಡಿದ್ದಾರೆ.ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ತಮಟೆ, ತಾಳದೊಂದಿಗೆ ಭಜನೆ ಮಾಡಿದ್ರು.ಬಿಜೆಪಿ ವಿಧಾನ ಪರಿಷತ್ ಸದಸ್ಯರು ಕೂಡಾ ಭಜನೆಯಲ್ಲಿ ಭಾಗಿಯಗಿದ್ದರು. ಮತ್ತೊಮ್ಮೆ ವಿಧಾನಸಭೆ ಮೆಟ್ಟಿಲುಗಳ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಭಜನೆ ನಡೆಯಿತು. ವಿಧಾನಸೌಧದ ಕಾರಿಡಾರ್ ನಲ್ಲಿ ಭಜನೆ ಮಾಡುತ್ತಾ ರೌಂಡ್ ಹಾಕಿದ್ದಾರೆ ಬಿಜೆಪಿ-ಜೆಡಿಎಸ್ ಶಾಸಕರು..
ಇನ್ನು ಸದನದ ಒಳಗೆ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ಹಿಡಿದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ ಬಿಜೆಪಿ-ಜೆಡಿಎಸ್ ಶಾಸಕರು.: ವಿಧಾನಸಭೆಯಲ್ಲಿ ಹಾಸಿಗೆ ಹಾಸಿ ಮಲಗಿ ಬಿಜೆಪಿ-ಜೆಡಿಎಸ್ ಶಾಸಕರು.ಧರಣಿ ನಿರತರಾಗಿದ್ದಾರೆ. ಇನ್ನು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಹೆಚ್.ಕೆ. ಪಾಟೀಲ್.ಧಾನಸಭೆಯಲ್ಲಿ ಧರಣಿ ನಿರತ ವಿಪಕ್ಷಗಳ ಶಾಸಕರ ಯೋಗಕ್ಷೇಮ ವಿಚಾರಿಸಿದ್ದಾರೆ.