ಮನೆ Latest News ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳಿಂದ ಅಹೋರಾತ್ರಿ ಧರಣಿ

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳಿಂದ ಅಹೋರಾತ್ರಿ ಧರಣಿ

0

ಬೆಂಗಳೂರು; ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್  ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿವೆ.

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತಾಗಿ ಇಂದು ನಡೆದ ಚರ್ಚೆಯ ಸಮಯದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ನೀಡಿದ ಉತ್ತರಕ್ಕೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೃಪ್ತವಾಗಿಲ್ಲ. ಹಾಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿವೆ.ಸದನ ಮುಂದೂಡಲ್ಪಟ್ಟ ಬಳಿಕ ಎರಡೂ ಪಕ್ಷಗಳ ಶಾಸಕರು ವಿಧಾನಸಭೆಯಲ್ಲೇ ಉಳಿದ್ದಾರೆ. ಧರಣಿ ನಿರತ ಶಾಸಕರಿಗೆ ರಾತ್ರಿಯ ಭೋಜನ ಮತ್ತು ಮಲಗಲು ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಾಪವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದ್ದು, ಸ್ಪೀಕರ್ ಯು.ಟಿ. ಖಾದರ್ ಮತ್ತು ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಧರಣಿ ನಿರತ ವಿಪಕ್ಷಗಳ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್  ಅಸ್ಸಾಂ, ತಮಿಳುನಾಡು, ಕೇರಳ ಚುನಾವಣೆಗೆ ಇಲ್ಲಿಂದಲೇ ದುಡ್ಡು ರವಾನೆ ಆಗುತ್ತಿದೆ. ಇದನ್ನು ಸ್ವತಃ ಜಿಲ್ಲಾಧಿಕಾರಿಯೇ ಹೇಳಿದ್ದಾರೆ. ಪ್ರತಿ ಅಂಗಡಿಗಳಲ್ಲಿ 15 ಸಾವಿರ ದುಡ್ಡು ಸಂಗ್ರಹ ಮಾಡುತ್ತಾರೆ. ಹಾಗಾದರೆ ದುಡ್ಡು ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದ್ದಾರೆ. 2 ಸಾವಿರ ಅಬಕಾರಿ ಲೈಸೆನ್ಸ್ ಕೊಟ್ಟಿದ್ದಾರೆ. ಸರ್ಕಾರದ ಹಣ ಲೂಟಿ ಹೊಡೆಯುತ್ತಿದ್ದಾರೆ. ನಾವು ನ್ಯಾಯಾಂಗ ತನಿಖೆ ಆಗಬೇಕು ಅಂತ ಹೇಳಿದ್ದೇವೆ. ಸಿಬಿಐ ತನಿಖೆಯೂ ಆಗಬೇಕು. ಸಿಎಂ ಸಿದ್ದರಾಮಯ್ಯ ನೇರವಾಗಿ ಅಬಕಾರಿ ಸಚಿವರ ಜೊತೆಗೆ ನಿಂತಿದ್ದಾರೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಪಾಲಿದೆ. ರಾಹುಲ್ ಗಾಂಧಿಗೆ ಇಲ್ಲಿಂದಲೇ ದುಡ್ಡು ಹೋಗುತ್ತದೆ. ಇಲ್ಲಿಂದಲೇ ಸಿಎಂ ಸಿದ್ದರಾಮಯ್ಯ ದುಡ್ಡು ಕಳುಹಿಸಿ ಕೊಡುತ್ತಾರೆ. ಸಚಿವ ರಾಜೀನಾಮೆ ಕೊಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.