ಮನೆ Latest News ಬಿಹಾರ ಎಲೆಕ್ಷನ್ ನಲ್ಲಿ ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದು ಅತ್ಮವಲೋಕನಾ ಮಾಡಿಕೊಳ್ಳಬೇಕಿದೆ; ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

ಬಿಹಾರ ಎಲೆಕ್ಷನ್ ನಲ್ಲಿ ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದು ಅತ್ಮವಲೋಕನಾ ಮಾಡಿಕೊಳ್ಳಬೇಕಿದೆ; ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

0

ದಾವಣಗೆರೆ; ಬಿಹಾರ ಎಲೆಕ್ಷನ್ ನಲ್ಲಿ ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದು ಅತ್ಮವಲೋಕನಾ ಮಾಡಿಕೊಳ್ಳಬೇಕಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಇರುವ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ರಾಜ್ಯದ ಎಲ್ಲಾ ಕಡೆ ಸಂಚಾರ ಮಾಡುವುದು ಇರುವುದರಿಂದ ಹೆಲಿಕಾಪ್ಟರ್ ಬದಲಾವಣೆ ಮಾಡಲಾಗಿದೆ. ಚುನಾವಣಾ ದೃಷ್ಟಿಯಿಂದ ಹೆಲಿಕಾಪ್ಟರ್ ಬದಲಾಯಿಸಲಾಗಿದೆ. ಇದರಲ್ಲಿ ಏನು ವಿಶೇಷ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ನವರು ಗಟ್ಟಿಯಾಗಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೇಸ್ ಗೆ ಪಾಠ. ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದು ಅತ್ಮವಲೋಕನಾ ಮಾಡಿಕೊಳ್ಳಬೇಕಿದೆ. ವೋಟ್ ಚೋರಿ ಬಗ್ಗೆ ಮೊದಲಿಂದಲೂ ಆರೋಪ ಕೇಳಿ ಬರುತ್ತದೆ.ಅದಕ್ಕೆ ಚುನಾವಣಾ ಅಯೋಗ ಉತ್ತರ ಕೊಡಬೇಕಿದೆ. ಕಾಂಗ್ರೇಸ್ ನವರು ಏನು ಅರೋಪ ಮಾಡಿದ್ದಾರೋ ಅದಕ್ಕೆ ಅವರು ಉತ್ತರ ಕೊಡಬೇಕಿದೆ. ಬಿಹಾರದ ಜನತೆಯ ಮನಸ್ಥಿತಿ ಇಲ್ಲಿಯ ಜನರ ಮನಸ್ಥಿತಿ ಬೇರೆ ಬೇರೆ. ಕರ್ನಾಟಕದಲ್ಲಿ ಅಹಿಂದಕ್ಕೆ ಹೆಚ್ಚು ಮಹತ್ವ ಇದೆ. ಬಿಹಾರ ದಲ್ಲಿ ಎಲ್ಲಾರನ್ನು ಒಗ್ಗೂಡಿಸಲು ಸಾಧ್ಯವಿಲ್ಲ .ಕರ್ನಾಟಕದಲ್ಲಿ ಎಲ್ಲಾ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ. ಬಿಹಾರ ಚುನಾವಣೆ ಫಲಿತಾಂಶ ಗೆದ್ದರು ಚರ್ಚೆಯಾಗಬೇಕು ಸೋತರೂ ಚರ್ಚೆಯಾಗಬೇಕು.ನಾವು ಏಕೆ ಸೋತ್ವಿ ಎಂದು ಪ್ರಮುಖವಾಗಿ ಚರ್ಚೆಯಾಗಬೇಕು ಎಂದಿದ್ದಾರೆ.

ಬಿಹಾರದಲ್ಲಿ ನಮ್ಮ ಗ್ಯಾರೆಂಟಿ ಇರಲಿಲ್ಲ ಅವರ ಗ್ಯಾರೆಂಟಿ ಘೋಷಣೆ ಮಾಡಿ ಸಕ್ಸಸ್ ಆದರು. ಓಟ್ ಚೋರಿ ಬಗ್ಗೆ ನಮ್ಮ ವರೀಷ್ಠರು ತೀರ್ಮಾನ ಮಾಡ್ತಾರೆ ಮುಂದೆ ಏನ್ ಆಗುತ್ತೋ ಕಾಯಬೇಕಿದೆ. ಸಿಎಂ ಬದಲಾವಣೆ ವಿಚಾರ ಯಾವುದೇ ಚರ್ಚೆ ಇಲ್ಲ.ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅವರೇ ಇರ್ತಾರೆ ಎಂದ ಅವರು ಸಂಪುಟ ಪುನರ್ ರಚನೆ ಹೈಕಮಾಂಡ್ ಗೆ ಬಿಟ್ಟ ವಿಚಾರದ ಬಗ್ಗೆ ಮಾತನಾಡಿದ ಅವರು ದೆಹಲಿಗೆ ಹೋಗೋದು ಬರೋದು ಸಚಿವರಿಗೆ ಕೆಲಸ ಇರ್ತಾವೆ ಅದಕ್ಕೆ ಹೋಗಿ ಬರ್ತಾ ಇರ್ತಿವಿ. ಸಂಪುಟ ಪುನರ್ ರಚನೆ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡೋದಿಲ್ಲ. ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಸಂಪುಟ ಪುನರ್ ರಚನೆಯಾದ್ರೆ ಇನ್ನು ಎರಡು ಸ್ಥಾನವನ್ನು ವಾಲ್ಮೀಕಿ ಸಮಾಜಕ್ಕೆ ಕೇಳಿದ್ದೇವೆ.ಈ ಬಾರಿ ಕೊಡಲೇ ಬೇಕು ನಮ್ಮ ಸಮುದಾಯದವರಿಗೆ ಒಳ್ಳೆದಾಗುತ್ತೆ. ನಮ್ಮ ಸಮಾಜದಲ್ಲಿ ಯಾರಿಗಾದ್ರು ಒಳ್ಳೇದು ಇವರಿಗೆ ಕೊಡಿ ಎಂದು ಡಿಮ್ಯಾಂಡ್ ಮಾಡೋದಿಲ್ಲ ಎಂದು ತಿಳಿಸಿದ್ದಾರೆ.