ಬೆಂಗಳೂರು; ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹಾಗೂ ಟಿ ಎ ಶರವಣ ಅರು ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಎನ್ ರವಿಕುಮಾರ್, ಕಾಂಗ್ರೆಸ್ ಗಾಂಧಿ ಭಾರತ ಸಮಾವೇಶದ ಬಗ್ಗೆ ವಾಗ್ದಾಳಿ ನಡೆಸಿದ್ರು. ಇದರ ಅರ್ಥ ಏನು ಅಂತ ಸಿಎಂ, ಡಿಸಿಎಂ ಹೇಳಬೇಕು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಇದಕ್ಕೆ ಉತ್ತರ ಕೊಡಬೇಕು. ಹಸುವಿನ ಕೆಚ್ಚಲು ಕೊಯ್ದು 10 ಲೀ. ರಕ್ತ ಸುರಿಸಿದ್ದಾರೆ. ಚಾಮರಾಜನಗರದಲ್ಲಿ ಹಸುವಿನ ಬಾಲ ಕತ್ತರಿಸಿದ್ದಾರೆ. ಕರ್ನಾಟಕದಲ್ಲಿ ಹಸುಗಳ ಮಾರಣಹೋಮ ನಡೆಯುತ್ತಿದೆ. ಗೋಸುರಕ್ಷಾ ಕಾನೂನು ಕರ್ನಾಟಕದಲ್ಲಿ ಇದೆ. ಇದರ ಬಗ್ಗೆ ಶ್ವೇತ ಪತ್ರ ಬಿಡುಗಡೆಗೆ ನಾನು ಆಗ್ರಹ ಪಡಿಸುತ್ತೇನೆ. ಗಾಂಧಿ ಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ. ಗಾಂಧೀಜಿ ಹೆಸರು ಹೇಳಲು ಇವರಿಗೆ ನೈತಿಕತೆ ಇಲ್ಲ. ಮಚ್ಚುಗಳನ್ನ ತೆಗೆದುಕೊಂಡು ಬೀದಿಗಳಲ್ಲಿ ಓಡಾಡುತ್ತಿದ್ದಾರೆ, ಹಿಂಸೆ ತಾಂಡವವಡುತ್ತಿದೆ. ಕರ್ನಾಟಕ ರಾಜ್ಯ ಕ್ರೈಂ ಗೆ ಹೆಸರಾಗುತ್ತಿದೆ. ಬಿಹಾರ್ ಕರ್ನಾಟಕ ಆಗ್ತಿದೆ, ಕರ್ನಾಟಕ ಬಿಹಾರ್ ಆಗ್ತಿದೆ ಎಂದು ಆಕ್ರೋಶ ಹೊರ ಹಾಕಿದ್ರು.
ಹಾಡಹಗಲೇ ಲೂಟಿ ಆಗ್ತಿದೆ, 15 ಕೋಟಿ ರೂ. ದರೋಡೆ ಆಗಿದೆ. ಬ್ಯಾಂಕ್ ನಲ್ಲಿ ದರೋಡೆ ಮಾಡಿಕೊಂಡು ಹೋದ್ರು. ಸಿಸಿ ಕ್ಯಾಮರಾ ಏನು ಮಾಡ್ತಿದೆ? ನಿಮ್ಮ ಪೊಲೀಸರು ಏನು ಮಾಡ್ತಿದ್ರು. ಕರ್ನಾಟಕ ರಾಜ್ಯ ದರೋಡೆಕೋರರ ಸ್ವರ್ಗ ಆಗಿದೆ. ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಆಗುತ್ತೆ. ಕರ್ನಾಟಕದಲ್ಲಿ ಬಾಪು ಭಾರತ ಕಟ್ಟಲು ಖರ್ಗೆ, ರಾಹುಲ್ ಗಾಂಧಿ ಬಂದಿದ್ದಾರೆ ಎಂದು ಲೇವಡಿ ಮಾಡಿದರು.
ಈ ಸರ್ಕಾರ ಬಂದ್ಮೇಲೆ ಆರು ಬಾರಿ ಮದ್ಯದ ದರ ಏರಿಕೆ ಮಾಡಿದ್ದಾರೆ. ಹಣ ಕಡಿಮೆಆದಾದ ಮದ್ಯ, ವಿದ್ಯುತ್, ಬಸ್ ಟಿಕೆಟ್ ದರ, ನೀರು ಏರಿಸುವುದು. ರೈತರಿಗೆ ಕರ್ನಾಟಕ ನರಕ ಆಗಿದೆ. ಗುತ್ತಿಗೆದಾರರು, ಅಧಿಕಾರಿಗಳ ಆತ್ಮಹತ್ಯೆ ಹೆಚ್ಚಾಗಿದೆ.ಗಾಂಧಿ ಕಂಡ ಭಾರತ ಇದಲ್ಲ. ಸ್ವಚ್ಛ ಭಾರತ ಅಂತ ಮೋದಿ ಮಾಡುತ್ತಿದ್ದಾರೆ, ಅದು ನಿಜವಾದ ಭಾರತ. ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲು ಆಗ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೊದಲು ರಾಜೀನಾಮೆ ಕೊಟ್ಟು ಹೋಗ್ಬೇಕು. ಸಿಬಿಐಗೆ ಮುಡಾ ಪ್ರಕರಣ ಕೊಡಿ. ಗಾಂಧೀಜಿ ಬಗ್ಗೆ ನಂಬಿಕೆ ಇದ್ರೆ ಮುಡಾ ಮತ್ತು ವಾಲ್ಮೀಕಿ ಪ್ರಕರಣ ಸಿಬಿಐಗೆ ಕೊಡಿ. 145 ಸ್ಥಳೀಯ ಸ್ವತ್ತುಗಳ ದಾಳಿ ವೇಳೆ 280 ಕೋಟಿ ರೂ. ಬೆಲೆ ಬಾಳುವ ಆಸ್ತಿ ಪತ್ತೆಯಾಗಿದೆ. ಯಡಿಯೂರಪ್ಪ ನವರಿಗೆ ಸಿಎಂ ಸ್ಥಾನದಿಂದ ಕೆಳಗೆ ಇಳಿಯಲು ಹೇಳಿದ್ರು. ನೀವು ಇಳಿದು ಪಾರದರ್ಶಕತೆ ತನಿಖೆಗೆ ಸಹಕರಿಸಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ರು. ಯಲ್ಲಮ್ಮ ದೇವಿಯ ದುಡ್ಡು, ಸರ್ಕಾರದ ದುಡ್ಡಿನಲ್ಲಿ ಕಾಂಗ್ರೆಸ್ ಜಾತ್ರೆ ಮಾಡ್ತಿದೆ. ಕಾಂಗ್ರೆಸ್ ಒಂದು ಬಿಟ್ಟು ಬೇರೆ ಯಾವ ಪಕ್ಷಗಳೂ ಇರಲಿಲ್ಲ. ಸಿದ್ದರಾಮಯ್ಯ ತಂದೆ ಸ್ವಾತಂತ್ರ್ಯ ಹೋರಾಟಗಾರರಾ? ನಮ್ಮನ್ನ ಸ್ವಾತಂತ್ರ್ಯ ಹೋರಾಟಗಾರರ ಅಂತ ಪದೇಪದೆ ಪ್ರಶ್ನೆ ಮಾಡ್ತಾರೆ ಎಂದು ಆಕ್ರೋಶ ಹೊರ ಹಾಕಿದ್ರು.
.
ಮುಂದುವರೆದು ಮಾತನಾಡಿದ ಅವರು ನಾಚಿಕೆ, ಮಾನ, ಮರ್ಯಾದೆ, ಗೌರವ ಇದ್ದರೆ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಡ್ಬೇಕು. 25 ಸಾವಿರ ಕೋಟಿ ದಲಿತರಿಗೆ ಮೋಸ ಮಾಡಿದ್ರು. ಅಂಬೇಡ್ಕರ್ ಗೆ ಮೋಸ ಮಾಡಿದ್ದು ನೀವು, ಅಮಿತ್ ಷಾ ಅಲ್ಲ. ಅಂಬೇಡ್ಕರ್ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಇವರು ಜಾಗ ಕೊಡಲಿಲ್ಲ. ಅಂಬೇಡ್ಕರ್ ನ ಎರಡು ಬಾರಿ ಸೋಲಿಸಿದ್ರು.ಲಜ್ಜಗೆಟ್ಟ ಕಾಂಗ್ರೆಸ್ ಇದು. ಮಹಾತ್ಮಾ ಗಾಂಧೀಜಿ ಹೆಸರು ಹೇಳಲು ಇವರಿಗೆ ನಾಚಿಕೆ ಆಗಬೇಕು. ಸರ್ಕಾರ ಇದೇ ರೀತಿ ಮುಂದುವರಿದ್ರೆ ದೊಡ್ಡ ಹೋರಾಟ ಮಾಡ್ತೀವಿ ಎಂದು ತಿಳಿಸಿದ್ರು.
ಎಸ್.ಟಿ. ಸೋಮಶೇಖರ್ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರದ ಬಗ್ಗೆ ಮಾತನಾಡಿ ನಮ್ಮ ಪಕ್ಷ ತೀರ್ಮಾನ ಮಾಡುತ್ತೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ಹೌದು, ಇದು ಪಕ್ಷಕ್ಕೆ ಮುಜುಗರ. ಸರ್ಕಾರ ರಚನೆ ಆದಾಗಿನಿಂದಲೂ ಎಸ್ ಟಿಎಸ್ ಅಲ್ಲಿಗೆ ಹೋಗಿದ್ದಾರೆ ಎಂದ ಅವರು, ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿ ಅವರ ಲೋಪ ಮುಚ್ಚಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ. ಇವರು ಮೊದಲು ಕುರ್ಚಿ ಉಳಿಸಿಕೊಳ್ಳಲಿ. ನಿಮ್ಮ ಶಾಸಕರ ಬೇಡಿಕೆ ಈಡೇರಿಸಿ. ಕಾಂಗ್ರೆಸ್ ನ ಶಾಸಕರೇ ದುರಾಡಳಿತ ಬಗ್ಗೆ ಬೇಸರಗೊಂಡಿದ್ದಾರೆ ಎಂದರು.










