ಬಿಗ್ ಬಾಸ್ ಸೀಸನ್ 11 ರ ವಿನ್ನರ್ ಯಾರು ಅನ್ನೋ ಪ್ರಶ್ನೆಗೆ ಇಂದು ಸಂಜೆ ಉತ್ತರ ಸಿಗುತ್ತೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಯಿಂದ ಪ್ರಬಲ ಸ್ಪರ್ಧಿ ಎಂದು ಗುರುತಿಸಿಕೊಂಡಿರುವ ಭವ್ಯ ಗೌಡ ಅವರು ಹೊರ ಬಿದ್ದಿದ್ದಾರೆ. ಬಿಗ್ ಬಾಸ್ ಸೀಸನ್ 11 ರಲ್ಲಿ ಬಿಗ್ ಬಾಸ್ ಮನೆಯಲ್ಲಿ ಬೇರೆ ಬೇರೆ ಕಾರಣಗಳಿಗೆ ಭವ್ಯ ಸದ್ದು ಮಾಡಿದ್ದರು. ಅಲ್ಲದೇ ಟಾಸ್ಕ್ ಗಳಲ್ಲಿ ಮೋಸದಾಟ ಮಾಡುತ್ತಾ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಗ್ರ್ಯಾಂಡ್ ಫಿನಾಲೆಗೆ ಕೇವಲ ಒಂದು ದಿನ ಇರುವಾಗ ಅರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಭವ್ಯ ಗೌಡ ಈ ಬಾರಿಯ ಸೀಸನ್ ನಲ್ಲಿ ರನ್ನರ್ ಅಪ್ ಆಗ್ಬೋದು ಅಂತಾ ಎಲ್ಲರೂ ಅಂದ್ಕೊಂಡಿದ್ದರು.ಆದರೆ ಅವರು ಎಲಿಮಿನೇಟ್ ಆಗಿದ್ದಾರೆ. ಮೋಕ್ಷಿತಾ ಪೈಗೆ ಕಂಪೇರ್ ಮಾಡಿದ್ರೆ ಭವ್ಯ ಉತ್ತಮವಾಗಿ ಆಟ ಆಡಿದ್ದಾರೆ. ಹಾಗಾಗಿ ಅವರನ್ನು ಇಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬಾರದಿತ್ತು ಎಂದು ಅವರ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಅವರ ಜೊತೆಗಿನ ಸ್ನೇಹದಿಂದಾಗಿ ಭವ್ಯ ಗಮನ ಸೆಳೆದಿದ್ದರು. ಅಲ್ಲದೇ ಟಾಸ್ಕ್ ಗಳಲ್ಲಿ ಒಳ್ಳೆಯ ಪರ್ಫಾಮೆನ್ಸ್ ತೋರಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಎರಡು ಬಾರಿ ಕ್ಯಾಷ್ಟನ್ ಆಗಿದ್ದ ಭವ್ಯ ಗೌಡ ಕಿಚ್ಚನ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದರು. ಸದಾ ಬಿಗ್ ಬಾಸ್ ಮನೆಯಲ್ಲಿ ಗಮನಸೆಳೆಯುತ್ತಿದ್ದ ಭವ್ಯಾ ಗೌಡ ಬಿಗ್ ಬಾಸ್ ಮನೆಯಿಂದ ಫಿನಾಲೆ ಕೇವಲ ಒಂದು ದಿನ ಇರುವಾಗ ಹೊರಗಡೆ ಬಂದಿರೋದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಇನ್ನು ಇಂದು ಯಾರು ಬಿಗ್ ಬಾಸ್ ವಿನ್ನರ್ ಆಗ್ತಾರೆ ಅನ್ನೋ ಪ್ರಶ್ನೆ ಉತ್ತರ ಸಿಗಲಿದೆ. ಹನುಮಂತು ಲಮಾಣಿ ಅವರೇ ವಿನ್ನರ್ ಆಗ್ಬೋದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಅವರ ಅಭಿಮಾನಿಗಳು. ಹನುಮಂತು ಅಥವಾ ತ್ರಿವಿಕ್ರಂ ಇವರಿಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯುತ್ತಾರೆ ಅಂದು ಬಹುತೇಕರು ಊಹಿಸುತ್ತಿದ್ದಾರೆ. ಅದೇ ಇನ್ನೂ ಕೇವರು ಬಿಗ್ಬಾಸ್ ಯಾರೂ ಊಹಿಸದಂತ ಟ್ವಿಸ್ಟ್ ಕೊಡ್ತಾರೆ ಎನ್ನುತ್ತಿದ್ದಾರೆ. ರಿಯಲ್ ವಿನ್ನರ್ ಯಾರು ಅನ್ನೋ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ಇಂದು ರಾತ್ರಿ ಉತ್ತರ ನೀಡಲಿದ್ದಾರೆ.











