ಬೆಳಗಾವಿ: ಕಬ್ಬಿನ ಬೆಂಬಲ ಬೆಲೆ ನೀಡಿದ್ದೇವೆ. ಕೇಂದ್ರಕ್ಕೆ ಪತ್ರ ಬರೆಯುವಂತೆ ಮಾಡ್ತೇವೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ಅತಿವೃಷ್ಟಿ ನಡೆದಿದೆ. ಮೆಕ್ಕೆಜೋಳವನ್ನು ೨೪೦೦ ಸಾವಿರ ನಿಗದಿ ಮಾಡಿದೆ. ಎಂಎಸ್ ಪಿಯಲ್ಲಿ ಖರೀದಿ ಮಾಡುವಂತಿಲ್ಲ ಎಂದು ಆದೇಶಿಸಿದೆ. ಕಬ್ಬಿನ ಬೆಂಬಲ ಬೆಲೆ ನೀಡಿದ್ದೇವೆ. ಕೇಂದ್ರಕ್ಕೆ ಪತ್ರ ಬರೆಯುವಂತೆ ಮಾಡ್ತೇವೆ. ಮೆಕ್ಕೆಜೋಳ ಖರೀದಿಗೆ ಅನುಮೋದನೆ ನೀಡಿಲ್ಲ. ಸಿಎಂ ಅವರ ನೇತೃತ್ವದಲ್ಲಿ ಮೂರು ನಾಲ್ಕು ಸಭೆ ನಡೆಸಲಾಗಿದೆ. ಎಥೆನಾಲ್ ಅಲೊಕೇಷನ್ ಕಡಿಮೆ ಇದೆ ಎಂದಿದ್ದಾರೆ.
ಅಶೋಕ್ ಸಾಮ್ರಾಟರು.ವಿಜಯೇಂದ್ರ ಅವರ ತಂದೆ ಜತೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕಬ್ಬು,ಮೆಕ್ಕೆಜೋಳ, ಎಥೆನಾಲ್ ಉತ್ಪಾದನೆಗಡ ಸಹಕಾರ ನೀಡದ ಕೇಂದ್ರದ ವಿರುದ್ದ ಪಾರ್ಲಿಮೆಂಟ್ ಮುಂದೆ, ಪ್ರಧಾನಿ ಮುಂದೆ ಧರಣಿ ಮಾಡಿದ್ರೆ ರೈತರಿಗೆ ಅನುಕೂಲವಾಗಲಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರದ ಮುಂದೆ ಬೇಡಿಕೆ ಇಡಬೇಕಿತ್ತು. ಯಡಿಯೂರಪ್ಪ ಯಾಕೆ ಮೌನವಾಗಿದ್ದಾರೆ ಕೇಂದ್ರದ ಮುಂದೆ ಬೇಡಿಕೆ ಇಡಲು. ರೈತರ ಪ್ರತಿಭಟನಾ ನಿರತ ರೈತರ ಪ್ರತಿಭಟನೆ ಸ್ಥಳಕ್ಕೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸ್ತೇನೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಇನ್ನು ರೈತರ ಸಮಸ್ಯೆ ವಿಚಾರದ ಬಗ್ಗೆ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಈ ಸರ್ಕಾರ ರಾಜೀನಾಮೆ ಕೊಟ್ರೆ ನಾವು ಬಂದು ಬಗೆ ಹರಿಸ್ತಿವಿ. ಆದರೆ ಈ ಸರ್ಕಾರ ಬಂದಿರೋದು ಏಕೆ?. ಮಾತೆತ್ತಿದರೆ ಕೇಂದ್ರದ ಬಗ್ಗೆ ಮಾತನಾಡ್ತಾರೆ. ಎಂಪಿಗಳಿಗೆ ಯಾವುದೇ ಮಾಹಿತಿ ಕೊಟ್ಟಿದ್ದೀರಾ. ಸಭೆ ಕರೆದಿದ್ದಾರೆ… ಸರ್ಕಾರದ ಸಮಸ್ಯೆಯನ್ನ ಎಂಪಿಗಳ ಜೊತೆ ಹಂಚಿಕೊಳ್ಳಿ. ಅದನ್ನ ಬಿಟ್ಟು ಕೇಂದ್ರದ ವಿರುದ್ದ ಮಾತನಾಡುವುದು ಸರಿ ಅಲ್ಲ ಎಂದಿದ್ದಾರೆ.
ಪರಿಷತ್ ಸದಸ್ಯ ಭೋಜೆಗೌಡ ಈ ಬಗ್ಗೆ ಮಾತನಾಡಿ ಉತ್ತರ ಕರ್ನಾಟಕ ದ ಸಮಸ್ಯೆ ಆಲಿಸಲಿ ಈ ಸೌಧ ಸ್ಥಾಪನೆ ಮಾಡಿದ್ದೀವಿ. ಆದರೆ ಉದ್ದೇಶ ಇಡೇರ್ತಾ ಇಲ್ಲ. ಪ್ರತಿ ಭಾರಿ ಈ ಪ್ರಶ್ನೆ ಕೇಳ್ತಾರೆ. ಬೆಂಗಳೂರಿನ ವಿಧಾನ ಸೌಧದ ಕಲಾಪದ ಮಾದರಿಯಲ್ಲೇ ಇಲ್ಲೂ ನಡೆಸಿ. ಇಲಾಖೆ ಅಧಿಕಾರಿಗಳನ್ನ ಸ್ಥಳಾಂತರ ಮಾಡಿ. ವರ್ಷಕ್ಕೆ ಒಂದು ಸಲ ಕಸ ಗುಡಿಸಿ ನಮ್ಮನ್ನ ಕರೆದರೆ ಯಾವುದೇ ಪ್ರಯೋಜನ ಇಲ್ಲ ಎಂದಿದ್ದಾರೆ.











