ಮನೆ Latest News ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಟೆಕ್ ಸಮ್ಮಿಟ್; ನ.21 ರವರೆಗೆ ಆಯೋಜಿಸಿರುವ ಏಷ್ಯಾದ...

ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಟೆಕ್ ಸಮ್ಮಿಟ್; ನ.21 ರವರೆಗೆ ಆಯೋಜಿಸಿರುವ ಏಷ್ಯಾದ ಅತಿದೊಡ್ಡ ಟೆಕ್ ಶೃಂಗಸಭೆ

0

ಬೆಂಗಳೂರು; ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಟೆಕ್ ಸಮ್ಮಿಟ್  ಆರಂಭವಾಗಿದೆ.  ನ.21 ರವರೆಗೆ ಆಯೋಜಿಸಿರುವ ಏಷ್ಯಾದ ಅತಿದೊಡ್ಡ ಟೆಕ್ ಶೃಂಗಸಭೆ ಇದಾಗಿದೆ.  ಇನ್ನು 27ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ರು.

ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್, ಆಲ್ ಇಂಡಿಯಾ (STIP) ಬೆಂಗಳೂರು ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ  ಡಿ.ಕೆ. ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.

ಟೆಕ್ ಸಮ್ಮಿಟ್ ನಲ್ಲಿ ಜರ್ಮನಿಯ ಆರ್ಥಿಕ ವ್ಯವಹಾರ ಮತ್ತು ಫೆಡರಲ್ ಸಚಿವಾಲಯದ ಸ್ಟಾರ್ಟ್‌ಅಪ್‌ಗಳ ಆಯುಕ್ತ ಡಾ. ಅನ್ನಾ ಕ್ರಿಸ್ಟ್‌ಮನ್, ಫ್ರಾನ್ಸ್‌ ನ ಆರ್ಥಿಕ ಅಭಿವೃದ್ಧಿಯ ರಿಕವರಿ ವಿಭಾಗದ ಉಪಾಧ್ಯಕ್ಷೆ ಅಲೆಕ್ಸಾಂಡ್ರಾ ಡಬ್ಲಾಂಚೆಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಸ್ವಿಗ್ಗಿ ಸಂಸ್ಥೆಯ ಸಹ-ಸ್ಥಾಪಕರು ಮತ್ತು ಸಿಇಒ ಶ್ರೀಹರ್ಷ ಮೆಜೆಟಿ, ಬಯೋಕಾನ್ ನ ಕಾರ್ಯಕಾರಿ ಅಧ್ಯಕ್ಷರು ಮತ್ತು ಸಂಸ್ಥಾಪಕ ಡಾ. ಕಿರಣ್ ಮಜುಂದಾರ್-ಶಾ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಗಣ್ಯರು ಭಾಗಿಯಾಗಿದ್ದರು

ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ 15ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. BTS 2024 ಯಲ್ಲಿ ಆಸ್ಟ್ರೇಲಿಯಾ, ಯುಕೆ, ಫ್ರಾನ್ಸ್, ಆಸ್ಟ್ರಿಯಾ, ಇಯು, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಇಸ್ರೇಲ್ ಮತ್ತು ಯುಎಸ್ ಎ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ಉನ್ನತ ಮಟ್ಟದ ನಿಯೋಗಗಳು ಭಾಗಿಯಾಗಲಿದ್ದಾರೆ. ಸರ್ಕಾರಿ ಅಧಿಕಾರಿಗಳು, ಉದ್ಯಮದ ಮುಖಂಡರು ಮತ್ತು ನವೋದ್ಯಮಿಗಳು ಭಾಗವಹಿಸಲಿದ್ದಾರೆ. BTS 2024 ಆರು ಟ್ರ್ಯಾಕ್‌ಗಳಲ್ಲಿ ಬಹು-ಹಂತದ ಸಮ್ಮೇಳನವನ್ನು ಒಳಗೊಂಡಿರುತ್ತದೆ. ಐಟಿ, ಡೀಪ್ ಟೆಕ್ ಮತ್ತು ಟ್ರೆಂಡ್ಸ್ , ಬಯೋಟೆಕ್, ಹೆಲ್ತ್ ಟೆಕ್, ಸ್ಟಾರ್ಟ್ ಅಪ್ ಎಕೋಸಿಸ್ಟಮ್, ಗ್ಲೋಬಲ್ ಇನೋವೇಶನ್ ಅಲೈಯನ್ಸ್, ಭಾರತ ಮತ್ತು ಯುಎಸ್ ಎ ಟೆಕ್ ಕಾನ್ ಕ್ಲೇವ್ ಮತ್ತು ಹೊಸದಾಗಿ ಪರಿಚಯಿಸಲಾದ ಎಲೆಕ್ಟ್ರೋ-ಸೆಮಿಕಾನ್ ಟ್ರ್ಯಾಕ್ ಬಗ್ಗೆ ಸಮ್ಮೇಳನ ನಡೆಯಲಿದೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್,ಬೆಂಗಳೂರು ಕೇವಲ ಸರ್ಕಾರದಿಂದ ಬೆಳೆದಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿ ಆಗಿದೆ. ಹೊರಗಡೆ ಬರುವ ಕಂಪನಿಗಳಿಗೆ ನಮ್ಮ ಪ್ರೀತಿಯಿಂದ ಸ್ವಾಗತಿಸುತ್ತೇವೆ. ಬೆಂಗಳೂರು ಹಲವು ರಂಗಗಳಲ್ಲಿ ನಂಬರ್ ಒನ್ ಪ್ಲೇಸ್ ನಲ್ಲಿದೆ. ಇದರ ಮಧ್ಯೆ ನಗರದಲ್ಲಿ‌ ಹಲವು ಸಮಸ್ಯೆಗಳಿವೆ. ಟ್ರಾಫಿಕ್ ಸೇರಿ‌ ಹಲವು ಸಮಸ್ಯೆಗಳನ್ನು ನಾವೆಲ್ಲ ಸೇರಿ ಬಗೆಹರಿಸೋಣ. ವಲ್ಡ್ ಕ್ಲಾಸ್ ರೀತಿ ಬೆಂಗಳೂರು ಅಭಿವೃದ್ದಿ ಮಾಡಲು ರೆಡಿ ಇದ್ದೇವೆ. ನಿಮಗೆ ಬೇಕಾದ ಸೌಲಭ್ಯ ನೀಡಲು ಸರ್ಕಾರ ರೆಡಿ ಇದೆ. ಕರ್ನಾಟಕ ಗ್ಲೋಬಲ್ ಲೀಡರ್ ಆಗಿ ಬೆಳೆದಿದೆ. ಐಟಿ-ಬಿಟಿ ಸೇರಿದಂತೆ ಚಿತ್ರರಂಗದಲ್ಲಿಯೂ ನಾವು ಮುಂದೆ ಇದ್ದೇವೆ. ಸ್ಟಾರ್ಪ್ ಅಪ್ ಕಂಪನಿ ಶುರು ಮಾಡಲು ಬೆಂಗಳೂರು ಉತ್ತಮ ಸ್ಥಳ. ಸರ್ಕಾರ ಸಕಲ ಸೌಲಭ್ಯ ನೀಡಲು ರೆಡಿ ಇದೆ ಎಂದರು.

ಮೈಕ್ರೋಸಾಫ್ಟ್ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು  ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ ಕುರಿತು ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ 20 ಸಾವಿರ ಆಸಕ್ತ ಯುವಕರಿಗೆ ಇಂಟರ್ನ್ ಶಿಪ್. ಇನ್ನೊಂದು ವರ್ಷದಲ್ಲಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡಲಾಗುತ್ತದೆ ಎಂದರು. ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಐಟಿ ವಲಯದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಸಿಎಂ ಸಿದ್ರರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರು ಗೌರವ ಸಲ್ಲಿಸಿದರು. ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಸ್ವಿಗ್ಗಿ ಸಂಸ್ಥೆಯ ಸಹ-ಸ್ಥಾಪಕರು ಮತ್ತು ಸಿಇಒ ಶ್ರೀಹರ್ಷ ಮೆಜೆಟಿ ಅವರಿಗೆ ಸನ್ಮಾನ ಮಾಡಲಾಯಿತು.