ಮನೆ Latest News ಹಿಂದುಳಿತ ವರ್ಗಗಳ ಗುತ್ತಿಗೆದಾರರಿಗೆ ಅವಕಾಶ ಸಿಗಬೇಕು; ವಿಧಾನಸೌಧದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ

ಹಿಂದುಳಿತ ವರ್ಗಗಳ ಗುತ್ತಿಗೆದಾರರಿಗೆ ಅವಕಾಶ ಸಿಗಬೇಕು; ವಿಧಾನಸೌಧದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ

0

ಬೆಂಗಳೂರು; ಹಿಂದುಳಿತ ವರ್ಗಗಳ ಗುತ್ತಿಗೆದಾರರಿಗೆ ಅವಕಾಶ ಸಿಗಬೇಕು ಎಂದು ವಿಧಾನಸೌಧದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ ಕೊಟ್ಟಿದ್ದಾರೆ.

ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ನಾನಂತೂ ಕ್ಯಾಬಿನೆಟ್‌ನಲ್ಲಿ ಇಲ್ಲ.ನಂಗೆ ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಸರ್ಕಾರದ ಸಿದ್ದಾಂತ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಗಬೇಕು ಅನ್ನೋದು.ಸಣ್ಣ ಪ್ರಮಾಣದ ಗುತ್ತಿಗೆದಾರ ಮೀಸಲಿಡಬೇಕು ಅಂತ ನಮ್ಮ ಸರ್ಕಾರವೇ ಈ ಹಿಂದೆ ಅವಕಾಶ ಕೊಟ್ಟಿತ್ತು.ಹಿಂದುಳಿತ ವರ್ಗಗಳ ಗುತ್ತಿಗೆದಾರರಿಗೆ ಅವಕಾಶ ಸಿಗಬೇಕು. ಕ್ರೈಸ್ತರ, ಬೌದ್ಧರು, ಜೈನರು ಕೂಡ ಅಲ್ಪಸಂಖ್ಯಾತರೇ. ಕೇವಲ ಮುಸ್ಲಿಮರು ಮಾತ್ರ ಅಲ್ಲ. ಈಗ ಬೇಡಿಕೆಯನ್ನು ಮನವಿ ಸಿಎಂ ಬಳಿ ಇಡಲಾಗಿದೆ. ಪುರಸ್ಕರಿಸಿದ್ರೆ ನಮಗೂ ಖುಷಿ. ೫೦ ಲಕ್ಷ, ೧ ಕೋಟಿ ಕೆಲಸಕ್ಕೆ ಮಾತ್ರ ಈಗ ಮೀಸಲಾತಿ ಕೇಳಿರೋದು. ದೊಡ್ಡ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತ ಎಷ್ಟಿದ್ದಾರೆ ನೀವೇ ನೋಡಿ. ದೊಡ್ಡ ಗುತ್ತಿಗೆಗಳಲ್ಲಿ ಮೊನಾಪಲಿ ಆಗೋಗಿದೆ. ವಿಜಯೇಂದ್ರ ಇದನ್ನು ಯಾಕೆ ಒಲೈಕೆ ಅಂತಾರೆ?. ಅವರಿಗನು ತೊಂದ್ರೆ ಮೀಸಲಾತಿ ಕೊಟ್ರೆ?.ಅಲ್ಪಸಂಖ್ಯಾತರು ನಮ್ಮ ಸಮಾಜದಲ್ಲಿ ಬದುಕ್ತಾ ಇಲ್ವಾ? ಅವರು ಬದುಕಲೇಬಾರದಾ?ಎಂದು ಪ್ರಶ್ನಿಸಿದ್ದಾರೆ.

ಸಮಾನ ಅವಕಾಶ ನಮಗೂ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ20 ತಿಂಗಳಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿಲ್ಲ, ಮುಸ್ಲಿಂರಿಗೆ 4% ಮೀಸಲಾತಿ ಕೊಡೊದಕ್ಕೆ ಹೋಗಿದ್ದಾರೆ; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ

ಬೆಂಗಳೂರು; 20 ತಿಂಗಳಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿಲ್ಲ, ಮುಸ್ಲಿಂರಿಗೆ 4% ಮೀಸಲಾತಿ ಕೊಡೊದಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಗುತ್ತಿಗೆಯಲ್ಲಿ 4% ಮುಸ್ಲಿಂರಿಗೆ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ಇವರ ಯೋಗ್ಯತೆಗೆ ಕಳೆದ 20 ತಿಂಗಳಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿಲ್ಲ.ಇವರಿಗೆಶಾಸಕರಿಗೆ ಅನುದಾನ ಕೊಡಲು ಸಾಧ್ಯವಾಗಿಲ್ಲ. ಪ. ಜಾ, ಪ.ಪಂಗಡದವರಿಗೆ ಟೆಂಡರ್ ಗೆ ಮೀಸಲಾತಿ ಕೊಟ್ಟಿದ್ದಾರೆ.ಅದರೆ ಎಲ್ಲಿ ಕೆಲಸದ ಟೆಂಡರ್ ಕರೆದಿದ್ದಾರೆ.ಇದರ ನಡುವೆ ಮುಸ್ಲಿಂರಿಗೆ 4%ಮೀಸಲಾತಿ ಕೊಡೊದಕ್ಕೆ ಹೋಗಿದ್ದಾರೆ.ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ ಮಾತ್ರನಾ? ಬೇರೆ ಯವರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದಿದ್ದಾರೆ.

ಸಿಎಂ ನಿವೂ ಅಹಿಂದಾ ನಾಯಕರೇ ಆಗಿದ್ರೆ, ಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಲು ಪ್ರೋತ್ಸಾಹ ನೀಡಬೇಕಿತ್ತು.ಸವಿತಾ ಸಮಾಜ, ಗುಡಿಕೈಗಾರಿಕೆಗೆ ಆರ್ಥಿಕ ಬೆಂಬಲ ನೀಡಬೇಕಿತ್ತು. ಅದು ಇವರ ಸರ್ಕಾರದಲ್ಲಿ ಸಾಧ್ಯವಾಗ್ತಿಲ್ಲ. ಅದರ ಹೊರತಾಗಿ ಈಗ ಮುಸ್ಲಿಂರಿಗೆ ಕೊಡಲು ಹೊರಟಿದ್ದಾರೆ. ಇವರಿಗೆ ಜನರೇ ಉತ್ತರ ಕೊಡಬೇಕು.ಇವರು ಬಂಡರಿದ್ದಾರೆ, ದಪ್ಪ ಚರ್ಮದವರು. ಈ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡ್ತೇನೆ ಎಂದಿದ್ದಾರೆ.

ಯಡಿಯೂರಪ್ಪ ವಿರುದ್ದ ಯತ್ನಾಳ್ ಟೀಕೆ ವಿಚಾರದ ಬಗ್ಗೆ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಯಾರ್ಯಾರು ಜಾತಿ ಹೆಸರಲ್ಲೊ ರಾಜಕಾರಣ ಮಾಡೋಕೆ ಹೊರಟಿದ್ದಾರೆ.ಯಾರು ಮಾಡ್ತಿದ್ದಾರೆ ಅವರೆಲ್ಲಾ ಶಾಸಕರು ಮತ್ತು ಮಾಜಿ ಸಚಿವರು ಉಳಿದುಕೊಂಡಿದ್ದಾರೆ. ನಾಡಲ್ಲಿ ಎಲ್ಲಾ ಸಮುದಾಯ ವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಯಡಿಯೂರಪ್ಪ ಅವರು ಮಾಡಿದ್ದಾರೆ. ಅವರ ಧ್ವನಿ ಯಾಗಿ ಹೋರಾಟ ಮಾಡಿದ್ದಾರೆ. ಯಡಿಯೂರಪ್ಪ ಅವರು ಹೆಸರು, ಟೀಕರ ಮಾಡಿದ್ರೆ ರಾಜಕೀಯದಲ್ಲಿ ಬೆಳೆಯದ್ರೆ ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಅಮಿತ್ ಶಾ ರಾಜ್ಯ ಭೇಟಿ ವಿಚಾರದ ಬಗ್ಗೆ ಮಾತನಾಡಿ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಆಗಿರೋ ಅಮಿತ್ ಶಾ ಅವರು ಮಾರ್ಚ್ ೭ರಂದು ಕರ್ನಾಟಕಕ್ಕೆ‌ ಬರ್ತಾರೆ.ಬೆಂಗಳೂರಲ್ಲಿ ಮಾರತ್ ಹಳ್ಳಿಯಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಅದನ್ನ ಬಿಟ್ಟಯ ಬೇರೆ ಯಾವುದೇ ರಾಜಕೀಯ ಕಾರ್ಯಕ್ರಮ ಯಾವುದೂ ಇಲ್ಲ ಎಂದ ಅವರು ವಿದ್ಯುತ್ ಮೀಟರ್ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿ ಗ್ಯಾರಂಟಿ ಸರಿಯಾಗಿ ಅನುಷ್ಠಾನ ಆಗ್ತಿಲ್ಲ.ಇದರ ನಡುವೆ ಬೆಲೆ ಏರಿಕೆ ಇದೆ. ಮೊನ್ನೆಯೇ ಹೇಳಿದ್ದು, ರಾಜ್ಯದಲ್ಲಿ ಇರುವಂತದ್ದು ಬಡವರ ವಿರೋಧಿ ಸರ್ಕಾರ. ರಾಜ್ಯದಲ್ಲಿ ಇರುವುದು ಬೆಲೆ ಏರಿಕೆ ಸರ್ಕಾರ. ಅದಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗ್ತಿದೆ. ಹಾಲು, ಸ್ಟ್ಯಾಂಪ್ ಡ್ಯೂಟಿ ಮತ್ತು ವಿದ್ಯುತ್ ಮೀಟರ್ ದರ ಹೆಚ್ಚಳ ಆಗಿದೆ.ಇದೊಂದು ರೀತಿ ಜನಸಾಮಾನ್ಯರಿಗೆ ಹೊರೆ ಆಗ್ತಿದೆ ಎಂದರು.

ಅಲ್ಪಸಂಖ್ಯಾತ ನೀತಿಗಳು ರಾಜ್ಯದಲ್ಲಿ ಬೆಂಕಿ ಹಚ್ಚೋದಕ್ಕೆ ಹೊರಟಿವೆ. ಅಲ್ಪಸಂಖ್ಯಾತರನ್ನ ಓಲೈಸೋಕೆ ಸರ್ಕಾರ ಹೊರಟಿದೆ. ಜೊತೆಗೆ ಬೇರೆ ಯವರಿಗೆ ಅನ್ಯಾಯ ಮಾಡೋಕೆ ಸರ್ಕಾರ ಹೋಗ್ತಿದೆ. ಅನೇಕ ಹಿಂದುಳಿದ ಸಮುದಾಯ ಗಳಿಗೆ ಆರ್ಥಿಕ ಶಕ್ತಿ ನೀಡಬೇಕಿತ್ತು. ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡೋ ಕೆಲಸ ಆಗಬೇಕು.ಅವರಿಗೆ ಆರ್ಥಿಕ ಶಕ್ತಿ ನೀಡಿ ಅವರ ಸಮುದಾಯವನ್ನು ಮುಂದೆ ತರೋ ಕೆಲಸ ಆಗಬೇಕು. ಜನರೇ ಇವರಿಗರ ತಕ್ಕ ಪಾಠ ಕಲಿಸಬೇಕು. ವಿರೋಧ ಪಕ್ಷ ದವರು ಏನೇ ಹೇಳಿದರೂ ಇವರಿಗೆ ನಾಟೋದಿಲ್ಲ. ಹೀಗಾಗಿ ಜನರೇ ಇವರಿಗೆ ಪಾಠ ಕಲಿಸಬೇಕು. ಅಧಿವೇಶನ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.  ಅದನ್ನ ನಾವು ಪ್ರಶ್ನೆ ಮಾಡುತ್ತೇವೆ ಎಂದರು.