ಮನೆ Latest News 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಹೋರಾಟ;ಪಂಚಮಸಾಲಿ ಲಿಂಗಾಯತ ಬೇಡಿಕೆಗೆ ಹಿಂದುಳಿದ ಜಾತಿ ಒಕ್ಕೂಟದ ವಿರೋಧ

2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಹೋರಾಟ;ಪಂಚಮಸಾಲಿ ಲಿಂಗಾಯತ ಬೇಡಿಕೆಗೆ ಹಿಂದುಳಿದ ಜಾತಿ ಒಕ್ಕೂಟದ ವಿರೋಧ

0

ಬೆಳಗಾವಿ; 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ಹೋರಾಟ ಮಾಡುತ್ತಿದ್ದು, ಪಂಚಮಸಾಲಿ ಲಿಂಗಾಯತ ಬೇಡಿಕೆಗೆ ಹಿಂದುಳಿದ ಜಾತಿ ಒಕ್ಕೂಟದ ವಿರೋಧ ವ್ಯಕ್ತಪಡಿಸಿದೆ. ಪ್ರವರ್ಗ 2ಎಗೆ ಸೇರಿಸದಂತೆ ಸಿದ್ದರಾಮಯ್ಯಗೆ ಮನವಿ ಸಲ್ಲಿಕೆ ಮಾಡಿದೆ.ಸಿಎಂ ಸಿದ್ದರಾಮಯ್ಯಗೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ ಸಲ್ಲಿಸಿದೆ.

ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ತಪ್ಪಿದಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಎಚ್ಚರಿಕೆ ಕೊಟ್ಟಿದೆ.ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ನೇತೃತ್ವದ ನಿಯೋಗದಿಂದ ಮನವಿ ಸಲ್ಲಿಕೆಯಾಗಿದೆ

ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಪಂಚಮಶಾಲಿ ಸಮುದಾಯ ಸುವರ್ಣ ಸೌಧದ ಎದುರು ಹೋರಾಟ ನಡೆಸುತ್ತಿದೆ. ಬೆಳಗಾಗಿ ಅಧಿವೇಶನ ಸಂದರ್ಭದಲ್ಲಿ ಹೋರಾಟ ಮುಂದುವರೆಸುವ ಪ್ಲಾನ್‌ ಮಾಡಿಕೊಂಡಿದೆ. ಈ ನಡುವೆ ಹಿಂದುಳಿದ ಜಾತಿಗಳ ಒಕ್ಕೂಟ ಕೌಂಟರ್ ಕೊಟ್ಟಿದೆ.ಪಂಚಮಸಾಲಿ ಸಮುದಾಯಕ್ಕೆ  ೨ಎ ಮೀಸಲಾತಿ ನೀಡದಂತೆ ಪಟ್ಟು ಹಿಡಿದಿದೆ. ಸಿಎಂ ಸಿದ್ದರಾಮಯ್ಯ ಗೆ ಒಕ್ಕೂಟದ ಮುಖಂಡರು ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.

ಇನ್ನು ಒಕ್ಕೂಟದ ಮನವಿಗೆ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಡು ರಸ್ತೆಯಲ್ಲೇ ಮನವಿ ಪತ್ರ ಸ್ವೀಕರಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಆಯ್ತು.. ಮನವಿ ನೋಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಎಂ ರಾಮಚಂದ್ರಪ್ಪ ಹೇಳಿಕೆ ನೀಡಿದ್ದಾರೆ.

ನಾವು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬಾರದು. ಈಗಾಗಲೇ ಅವರಿಗೆ ಒಳ್ಳೆಯ ಸ್ಥಾನ ಮಾನ ಸಿಕ್ಕಿವೆ. ಅವರು ಯಾವುದರಲ್ಲೂ  ಕಡಿಮೆ ಇಲ್ಲ. ಆದ್ರೆ ಹಿಂದುಳಿದ ಜಾತಿಗಳು ಹಿಂದೆ ಉಳಿದಿವೆ. ನಮ್ಮಲ್ಲಿ ಇರೋದನ್ನೇ ತೆಗೆದುಕೊಂಡರೇ ಹೇಗೆ? ಎಂದಿದ್ದಾರೆ. ಇನ್ನು ಪೊಲೀಸರಿಂದ ಲಾಠಿ ಚಾರ್ಚ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾಕೆ ಲಾಠಿ ಚಾರ್ಚ್ ಮಾಡಬಾರದು?. ಅವರು ಮಾಡಿದ್ದು ಸರಿನಾ? ಪೊಲೀಸರ ಮೇಲೆ ಹಲ್ಲೇ ಮಾಡಿದ್ದು ಸರಿನಾ?. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋದು ಸರಿನಾ? . ಅವರ ಹೋರಾಟಕ್ಕೆ ನಾವು ಹೆದರಲ್ಲ, ನಾವೂ ಲಕ್ಷ ಜನರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.